‘ತೋತಾಪುರಿ’ ಸಾಂಗ್ ಟೀಸರ್ ಕಂಡು ಗರಂ ಆದ ಪ್ರೇಕ್ಷಕರು

Totapuri

ನಿರ್ದೇಶಕ ವಿಜಯಪ್ರಸಾದ್, ನವರಸ ನಾಯಕ ಜಗ್ಗೇಶ್ ಹಿಟ್ ಕಾಂಬಿನೇಶನಲ್ಲಿ ಬರುತ್ತಿರುವ ‘ತೋತಾಪುರಿ’ ಸಿನಿಮಾ ಸ್ಯಾಂಡಲ್‍ವುಡ್ ಅಂಗಳದಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರ ನೀರ್ ದೋಸೆ ಜೋಡಿಗೆ ಮತ್ತೊಂದು ಸೂಪರ್ ಸಕ್ಸಸ್ ತಂದು ಕೊಡಲಿದೆ ಎಂಬ ಭವಿಷ್ಯವಾಣಿ ಈಗಾಗಲೇ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಸೆಟ್ಟೇರಿದ ದಿನದಿಂದ ಇಂತಹ ಮಾತುಗಳನ್ನು ಕೇಳಿಸಿಕೊಂಡು ಬಂದಿದ್ದ ಚಿತ್ರತಂಡಕ್ಕೆ ಈಗ ಅದೇ ಪ್ರೇಕ್ಷಕರು ಛೀಮಾರಿ ಹಾಕುತ್ತಿದ್ದಾರೆ. ಅಂತಹದ್ದೊಂದು ದೊಡ್ಡ ಪ್ರಮಾದವಾವನ್ನು ಚಿತ್ರತಂಡ ಮಾಡಿದೆ.

ಹೌದು, ತೋತಾಪುರಿ ಚಿತ್ರತಂಡ ಇಂದು ಸಾಂಗ್ ಟೀಸರ್ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಚಿತ್ರದ ಬಗ್ಗೆ ಯಾವುದೇ ಅಪ್‍ಡೇಟ್ ಸಿಗದೇ ಕಾದಿದ್ದ ಸಿನಿರಸಿಕರಿಗೆ ಈ ಸುದ್ದಿ ಸಖತ್ ಸಂತಸ ನೀಡಿತ್ತು. ಆದರೆ ಇಂದು ಬಿಡುಗಡೆಯಾದ ಸಾಂಗ್ ಟೀಸರ್ ಆ ಸಂತಸವನ್ನು ಕೋಪವನ್ನಾಗಿಸಿದೆ. ಇದಕ್ಕೆ ಕಾರಣ ಸಾಂಗ್ ಟೀಸರ್‌ನಲ್ಲಿರುವ ಹಿಂದಿ ಸಾಹಿತ್ಯ. ಸಣ್ಣದಾದ ಹಾಡಿನ ಝಲಕ್‍ನಲ್ಲಿ ಹಿಂದಿ ಹಾಗೂ ಉರ್ದು ಭಾಷೆಯಲ್ಲಿರುವ ಸಾಹಿತ್ಯ ಕಂಡು ನೋಡುಗರು ಚಿತ್ರತಂಡದ ಮೇಲೆ ಕೋಪಗೊಂಡಿದ್ದಾರೆ. ಕನ್ನಡ ಸಿನಿಮಾದಲ್ಲಿ ಹಿಂದಿ ಹಾಡು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ ಕನ್ನಡ ನಾಡು, ನುಡಿ ಎನ್ನುವ ನವರಸ ನಾಯಕ ಜಗ್ಗೇಶ್ ಈ ಹಾಡು ಮಾಡಲು ಒಪ್ಪಿಕೊಂಡ್ರಾ, ಇದು ಅವರ ಅರಿವಿಗೆ ಬರಲಿಲ್ವಾ? ಅದರಲ್ಲೂ ಹಿಂದಿ ಭಾಷೆ ಹೇರಿಕೆ ಬಗ್ಗೆ ಚರ್ಚೆ ನಡೆಯುತ್ತಿರುವ ಇಂತಹ ಸಂದರ್ಭದಲ್ಲಿ ಅಪ್ಪಟ ಕನ್ನಡ ಸಿನಿಮಾವೊಂದು ಈ ರೀತಿಯ ಉದ್ಧಟತನ ತೋರಿರುವುದು ಯಾಕೆ ಎಂದು ಚಿತ್ರತಂಡದ ವಿರುದ್ಧ ಗುಡುಗುತ್ತಿದ್ದಾರೆ.

ತೋತಾಪುರಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗಲು ಸಜ್ಜಾಗಿದ್ದು ಒಂದು ವೇಳೆ ಚಿತ್ರತಂಡ ಹಿಂದಿ ಹಾಡಿನ ಟೀಸರ್ ಬಿಡಿಗಡೆ ಮಾಡಿರಬಹುದಾ ಎಂಬ ಗೊಂದಲವೂ ಎಲ್ಲರನ್ನೂ ಕಾಡುತ್ತಿದೆ. ಆದರೆ ಇಷ್ಟೆಲ್ಲಾ ಚರ್ಚೆ ಆಗುತ್ತಿದ್ದರು ಕೂಡ ಚಿತ್ರತಂಡ ಇಲ್ಲಿವರೆಗೂ ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ. ಈ ಗೊಂದಲವನ್ನು ಚಿತ್ರತಂಡ ಅಂದಹಾಗೆ ಪರಿಹರಿಸುತ್ತದೆ ಅನ್ನುವುದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಎರಡೂ ಡೋಸ್‌ ಲಸಿಕೆ ಪಡೆದ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯವಲ್ಲ: ಬ್ರಿಟನ್‌ ಪ್ರಧಾನಿ

ಅಂದಹಾಗೆ ಚಿತ್ರದಲ್ಲಿ ಜಗ್ಗೇಶ್ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದು, ಡಾಲಿ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾ ದತ್ ಒಳಗೊಂಡ ಕಲಾವಿದರ ಬಳಗ ಚಿತ್ರದಲ್ಲಿದೆ. ಮೋನಿಫ್ಲಿಕ್ಸ್ ಸ್ಟುಡಿಯೋಸ್, ಸುರೇಶ್ ಆರ್ಟ್ಸ್ ಬ್ಯಾನರ್ ನಡಿ ಕೆ.ಎ ಸುರೇಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದೆ. ಇದನ್ನೂ ಓದಿ: ಉತ್ತರಾಖಂಡ ಚುನಾವಣೆ: ರಾಮನಗರದಿಂದ ಮಾಜಿ ಸಿಎಂ ಹರೀಶ್ ರಾವತ್ ಕಣಕ್ಕೆ

Comments

Leave a Reply

Your email address will not be published. Required fields are marked *