ಬೆಳಗಾವಿಯಲ್ಲಿ ಬಣ ರಾಜಕೀಯ ಬಲು ಜೋರು – ಕತ್ತಿ ಸಭೆಗೆ ಪ್ರತಿಯಾಗಿ ಜಾರಕಿಹೊಳಿ ಮೀಟಿಂಗ್

ಬೆಳಗಾವಿ: ಬಿಜೆಪಿಯ ಬಣ ಮೇಲಾಟ ಮತ್ತೆ ಮುನ್ನೆಲೆಗೆ ಬಂದಿದೆ. ಭಾನುವಾರ ಸಚಿವ ಉಮೇಶ್ ಕತ್ತಿಯವರು ಜಾರಕಿಹೊಳಿ ಬ್ರದರ್ಸ್‍ನಾ ಹೊರಗಿಟ್ಟು ಸಭೆ ನಡೆಸಿದ್ದರು. ಇದಕ್ಕೆ ರಮೇಶ್ ಜಾರಕಿಹೊಳಿ ಇಂದು ತಿರುಗೇಟು ನೀಡಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ಮಹತ್ವದ ಸಭೆ ನಡೆಸಿದ್ದಾರೆ. ಶಾಸಕ ಯತ್ನಾಳ್, ಕುಮಟಳ್ಳಿ ಮತ್ತಿತರರು ಈ ಸಭೆಯಲ್ಲಿ ಪಾಲ್ಗೊಂಡಿರೋದು ಕುತೂಹಲ ಕೆರಳಿಸಿದೆ. ಆದರೆ ಇಂದಿನದ್ದು ಸಭೆಯಲ್ಲ, ಊಟಕ್ಕೆ ಸೇರಿದ್ವಿ ಅಷ್ಟೇ ಎಂದಿದ್ದಾರೆ. ನಾನ್ಯಾವ ಸಭೆಗೆ ಹೋಗಲ್ಲ. ಪ್ರೀತಿ ಇದ್ದಲ್ಲಿ ಮಾತ್ರ ಹೋಗ್ತೇನೆ ಎಂದು ಸಚಿವ ಕತ್ತಿಗೆ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.

ಇಂತಹ ಸಭೆಗಳಿಂದ ಪಕ್ಷಕ್ಕೇನು ಡ್ಯಾಮೇಜ್ ಆಗಲ್ಲ. ನಾವೇನು ಆಯಾರಾಮ್ ಗಯಾರಾಮ್ ಗಿರಾಕಿಗಳಲ್ಲ ಅಂತಾ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ನಿನ್ನೆ ಕತ್ತಿ ನೇತೃತ್ವದ ಸಭೆ ಬಿಜೆಪಿಯ ಅಧಿಕೃತ ಸಭೆಯಲ್ಲ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಟ್ವೀಟ್ ಮಾಡಿದ್ದಾರೆ. ಆದರೆ ನಾನು ಸಚಿವ, ನಾನೇ ಪಾಲ್ಗೊಂಡಿದ್ದೇನೆ ಅಂದ್ಮೇಲೆ ಅದು ಬಿಜೆಪಿಯ ಅಧಿಕೃತ ಸಭೆ ಎಂದು ಉಮೇಶ್ ಕತ್ತಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಪ್ರೀತಿ ಇದ್ದಲ್ಲಿಗೆ ಹೋಗುತ್ತೇನೆ: ರಮೇಶ್ ಜಾರಕಿಹೊಳಿ

ಪರಿಷತ್ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣ ಹುಡುಕಲು ನಿನ್ನೆ ಸಭೆ ನಡೆಸಿದ್ವಿ ಎಂದು ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಮಾತ್ರ ಬೆಳಗಾವಿ ಬಿಜೆಪಿಯಲ್ಲಿ ಗೊಂದಲವಿಲ್ಲ ಎಂದಿದ್ದಾರೆ.

Comments

Leave a Reply

Your email address will not be published. Required fields are marked *