ರಾಜ್ಯ ಬಿಜೆಪಿಯಲ್ಲಿ ಸಂಪುಟ, ನಿಗಮ ಮಂಡಳಿ ಬೇಗುದಿ – ಬಿಎಸ್‍ವೈ ಆಪ್ತರಿಗೆ ಕೊಕ್?

ಬೆಂಗಳೂರು: ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಪಟ್ಟದ ಫೈಟ್ ಶುರುವಾದಂತೆ ಕಾಣುತ್ತಿದೆ. ಸಂಪುಟ ಪುನಾರಚನೆ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ.

ಲಕ್ಷ್ಮಣ ಸವದಿ ದೆಹಲಿಯಲ್ಲಿ ಬೀಡುಬಿಟ್ಟು ಲಾಬಿ ಮಾಡುತ್ತಿದ್ದರೆ ಇತ್ತ ಬೆಂಗಳೂರಿನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಾದ ಯತ್ನಾಳ್ ಮತ್ತು ರೇಣುಕಾಚಾರ್ಯ ಸಭೆ ನಡೆಸಿದ್ದಾರೆ. ಇವರು ಮಂತ್ರಿಯಾಗಲಿ ಎಂದು ಇಬ್ಬರು ಪರಸ್ಪರ ಹಾರೈಸಿಕೊಂಡಿದ್ದಾರೆ. ಈ ಕೂಡಲೇ ಸಂಪುಟ ಪುನಾರಚನೆಯಾಗಬೇಕು ಸ್ವಾರ್ಥಕ್ಕೆ ಸಂಪುಟದಲ್ಲಿರುವವರನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಅಂಬುಲೆನ್ಸ್‌ಗೆ ದಾರಿ ಬಿಡದೇ ಪುಂಡಾಟ – ಕಾರು ಚಾಲಕ ಬಂಧನ

ಮಾರ್ಚ್ ನಂತರ ಸಂಪುಟ ಪುನಾರಚನೆ ಆದರೆ ಪ್ರಯೋಜನವಿಲ್ಲ. ಡಿಕೆಶಿ ವೇಗಕ್ಕೆ ತಡೆಹಾಕುವ ಬಗ್ಗೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಅಗತ್ಯ ಬಿದ್ದರೆ ಹೈಕಮಾಂಡ್ ಭೇಟಿ ಆಗುವುದಾಗಿಯೂ ರೇಣುಕಾಚಾರ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ಚುನಾವಣೆ: ಅತ್ಯಾಚಾರ ಆರೋಪಿ ಸೇರಿ 10 ಶಾಸಕರನ್ನು ಪಟ್ಟಿಯಿಂದ ಕೈಬಿಟ್ಟ ಬಿಜೆಪಿ

ಈ ಮಧ್ಯೆ ಬಿಎಸ್‍ವೈ ಆಪ್ತರನ್ನು ನಿಗಮಮಂಡಳಿಗಳಿಂದ ತೆಗೆದು ಹೊಸಬರಿಗೆ ನೀಡಲು ಬಿಜೆಪಿ ಪ್ರಯತ್ನ ನಡೆಸಿದೆ. ಆದರೆ ಇದಕ್ಕೆ ಬಿಎಸ್‍ವೈ ಒಪ್ಪಿಲ್ಲ ಎನ್ನಲಾಗಿದೆ. ಬಿಎಸ್‍ವೈ ಒಪ್ಪಿಸುವ ಬಗ್ಗೆ ಬೊಮ್ಮಾಯಿ ಜೊತೆ ನಿನ್ನೆ ತಡರಾತ್ರಿವರೆಗೂ ನಳಿನ್ ಕುಮಾರ್ ಕಟೀಲ್ ಮತ್ತು ಇತರರು ಚರ್ಚೆ ನಡೆಸಿದ್ದಾರೆ. ಎಲ್ಲಾ ಓಕೆ ಆದರೆ ಮುಂದಿನ ವಾರವೇ ನಿಗಮಮಂಡಳಿಗಳಿಗೆ ಹೊಸಬರ ನೇಮಕ ಆಗಲಿದೆ.

Comments

Leave a Reply

Your email address will not be published. Required fields are marked *