ಕಿಡ್ನಾಪ್ ಕಥೆ ಕಟ್ಟಿ ತಂದೆಗೆ 30 ಲಕ್ಷ ರೂ.ಗೆ ಬೇಡಿಕೆ ಇಟ್ಟ ಮಗ

ಚೆನ್ನೈ: ಕಿಡ್ನಾಪ್ ಆಗಿದ್ದೇನೆ ಎಂದು ತಂದೆಗೆ ನಕಲಿ ಸಂದೇಶ ಕಳುಹಿಸಿದ ಮಗ 30 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

24 ವರ್ಷದ ಪಿ. ಕೃಷ್ಣಪ್ರಸಾದ್ ನಕಲಿ ಕಿಡ್ನಾಪ್ ನಾಟಕವಾಡಿದ್ದಾನೆ. ಕೃಷ್ಣಪ್ರಸಾದ್ ತನ್ನ ಅಪಹರಣವಾಗಿದೆ ಎಂದು ತಂದೆಗೆ ಮೆಸೇಜ್ ಮಾಡಿ 30 ಲಕ್ಷ ರೂಗೆ ಬೇಡಿಕೆ ಇಟ್ಟು ಸಿಕ್ಕಿ ಬಿದಿದ್ದಾನೆ. ಇದನ್ನೂ ಓದಿ: ಸ್ನೇಹಿತನಿಗೆ ಇಕ್ಕಳದಿಂದ ಹೊಡೆದು, ಮೆಟ್ಟಿಲಿನಿಂದ ತಳ್ಳಿ ಕೊಂದ

BRIBE

ಕೃಷ್ಣಪ್ರಸಾದ್ ತಂದೆ ಪೆನ್ಸಿಲಾಯಾ ಚೆನ್ನೈನ ವಡಪಲನಿಯ ಉದ್ಯಮಿಯಾಗಿದ್ದು, ಮಗ ಕಾಣೆಯಾಗಿದ್ದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಚೆನ್ನೈ ನಗರ ಪೊಲೀಸರು ನಂತರ ಮೆಸೆಜ್ ಕಳುಹಿಸಿದ ಮೊಬೈಲ್ ಲೊಕೇಷನ್ ಹುಡುಕುವ ಮೂಲಕ ಸಿಕಂದರಾಬಾದ್‍ನಲ್ಲಿ ಕೃಷ್ಣ ಪ್ರಸಾದ್‍ನನ್ನು ಪತ್ತೆ ಮಾಡಿದ್ದಾರೆ. ಆ ಬಳಿಕ ತಂದೆಯ ಒತ್ತಾಯದ ಮೇರೆಗೆ ಆತನಿಗೆ ಎಚ್ಚರಿಗೆ ನೀಡಿ ಪೊಲೀಸರು ಮನೆಗೆ ಕಳಿಹಿಸಿದ್ದಾರೆ. ಇದನ್ನೂ ಓದಿ: BJP ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ಪಕ್ಷದ ಮೊದಲ ಗುರಿ: ಓವೈಸಿ

ಕಿರು ಚಿತ್ರ ನಿರ್ಮಾಣ ಮಾಡಲು ಹಣಕ್ಕಾಗಿ ಇಂಥಹ ನಾಟಕವಾಡಿದ್ದಾನೆ ಎಂದು ತಿಳಿದು ಬಂದಿದೆ. ಮನೆಯಿಂದ ಹಣ ಪಡೆಯಲು ಅಥವಾ ತಮ್ಮ ಹೇಳಿಕೆಗಳನ್ನು ಈಡೇರಿಸಿಕೊಳ್ಳಲು ಈ ಹಿಂದೆಯೂ ಈ ರೀತಿಯ ನಕಲಿ ಅಪಹರಣ ಪ್ರಕರಣಗಳು ಸಾಕಷ್ಟು ನಡೆದಿವೆ.

Comments

Leave a Reply

Your email address will not be published. Required fields are marked *