ಕೊರೊನಾ ಇನ್ನೂ ಮುಗಿದಿಲ್ಲ, ಮುಗಿಯುವ ಹಂತದಲ್ಲಿಯೂ ಇಲ್ಲ: WHO ಮುಖ್ಯಸ್ಥ

ನವದೆಹಲಿ: ಕೊರೊನಾ(Corona) ಸಾಂಕ್ರಾಮಿಕ ಇನ್ನೂ ಮುಗಿದಿಲ್ಲ, ಮುಗಿಯುವ ಹಂತದಲ್ಲಿಯೂ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ(WHO) ಟೆಡ್ರೊಸ್ ಅಧಾನೊಮ್ ಫೆಬ್ರೆಯೆಸಸ್(Tedros Adhanom Ghebreyesus) ಹೇಳಿದ್ದಾರೆ.

ಕೊರೊನಾ ರೂಪಾಂತರಿ, ಓಮಿಕ್ರಾನ್ ಹರಡುವಿಕೆಯ ವೇಗದ ಬಗ್ಗೆ ಎಚ್ಚರಿಕೆ ಇರಲಿ. ಲಸಿಕೆ ಪಡೆಯದ ಜನರಲ್ಲಿ ಗಂಭೀರವಾದ ಅನಾರೋಗ್ಯ ಮತ್ತು ಸಾವಿನ ಅಪಾಯದ ಪ್ರಮಾಣ ಹೆಚ್ಚಾಗಿರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯಾರೇ ಕೋವಿಡ್ ನಿಯಮ ಉಲ್ಲಂಘಿಸಿದರೂ ಕ್ರಮ: ಬೊಮ್ಮಾಯಿ

ಸೋಂಕಿನ ಅಪಾಯ ತಗ್ಗಿಸುವಲ್ಲಿ ನಿಮ್ಮ ಪ್ರಯತ್ನವೂ ಇರಬೇಕೆಂದು ಜನರನ್ನು ಕೋರಿರುವ ಫೆಬ್ರೆಯೆಸಸ್ ಅವರು ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಮನವಿ ಮಾಡಿದ್ದಾರೆ. ಓಮಿಕ್ರಾನ್ ಸೋಂಕು ಸೌಮ್ಯ ಸ್ವಭಾವದ್ದು ಎಂದು ಕೆಲವು ಭಾವಿಸಿದ್ದಾರೆ. ನವೆಂಬರ್‍ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಒತ್ತೆಯಾಗಿದ್ದು, ತೀವ್ರ ವೇಗವಾಗಿ ಕಾಡ್ಗಿಚ್ಚಿನಂತೆ ಇಡೀ ವಿಶ್ವವನ್ನೇ ಆವರಿಸುತ್ತಿದೆ. ಈ ಹೋಸ ರೂಪಾಂತರವು ಹಿಂದಿನ ತಳಿಗಿಂತ ಸಾಂಕ್ರಾಮಿಕವಾಗಿದೆ. ಗಂಭೀರವಾದ ರೋಗವನ್ನುಂಟು ಮಾಡುತ್ತದೆ. ನಿರ್ಲಿಕ್ಷಿಸುವಂತಿಲ್ಲಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಇದನ್ನೂ ಓದಿ:  ED ದಾಳಿ ಬಿಜೆಪಿಯ ನೆಚ್ಚಿನ ಅಸ್ತ್ರ: ರಾಹುಲ್ ಗಾಂಧಿ

Comments

Leave a Reply

Your email address will not be published. Required fields are marked *