ಟೆಸ್ಟ್ ನಾಯಕತ್ವದ ಹೊಣೆ ವಹಿಸಿದರೆ ಬೇಡ ಎನ್ನುವುದಿಲ್ಲ: ಜಸ್‍ಪ್ರೀತ್ ಬೂಮ್ರಾ

ನವದೆಹಲಿ: ಟೀಂ ಇಂಡಿಯಾ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲೆ ಟೆಸ್ಟ್ ಪಂದ್ಯಕ್ಕೆ ನಾಯಕರು ಯಾರು ಎಂಬ ಪ್ರಶ್ನೆ ಮೂಡುತ್ತಿದೆ. ಇದೀಗ ಟೀಂ ಇಂಡಿಯಾದ ವೇಗದ ಬೌಲರ್ ಜಸ್‍ಪ್ರೀತ್ ಬೂಮ್ರಾ ನಾಯಕನಾಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೆಸ್ಟ್ ತಂಡವನ್ನು ಮುನ್ನಡೆಸುವ ಅವಕಾಶ ನೀಡಿದರೆ ನಿರಾಕರಿಸಲಾರೆ. ಭಾರತ ತಂಡದ ನಾಯಕನಾಗುವುದೆಂದರೆ ಅದೃಷ್ಟವೇ ಸರಿ. ನಾಯಕತ್ವದ ಹೊಣೆ ವಹಿಸಿದರೆ ಬೇಡ ಎನ್ನಲು ಯಾವ ಆಟಗಾರನಿಗೂ ಸಾಧ್ಯವಿಲ್ಲ. ಅದರಿಂದ ನಾನೇನು ಭಿನ್ನವಲ್ಲ. ಅವಕಾಶ ಲಭಿಸಿದರೆ ತಂಡದ ಶ್ರೇಯಸ್ಸಿಗಾಗಿ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು.

ದಕ್ಷಿಣ ಆಫ್ರಿಕಾದ ವಿರುದ್ಧ ಏಕದಿನ ಸರಣಿಯಲ್ಲಿ ಅವರು ಭಾರತ ತಂಡದ ಉಪನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. 2ನೇ ಟೆಸ್ಟ್ ಪಂದ್ಯದಲ್ಲೂ ಬೂಮ್ರಾ ಉಪನಾಯಕರಾಗಿದ್ದರು. ಇದನ್ನೂ ಓದಿ: ನಾಯಕತ್ವ ಯಾರೊಬ್ಬರ ಜನ್ಮಸಿದ್ಧ ಹಕ್ಕಲ್ಲ: ಗೌತಮ್ ಗಂಭೀರ್

ಮುಂದಿನ ನಾಯಕ ಯಾರು ಎಂದು ಬಿಸಿಸಿಐ ಇನ್ನೂ ಘೋಷಣೆ ಮಾಡಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಮುನ್ನ ರೋಹಿತ್ ಶರ್ಮಾ ಅವರನ್ನು ಉಪನಾಯಕನ್ನಾಗಿ ಮಾಡಲಾಗಿತ್ತು. ಆದರೆ ಅವರು ಗಾಯದ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾಕ್ಕೆ ಹೋಗಿರಲಿಲ್ಲ. ಎರಡನೇ ಪಂದ್ಯದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದಾಗ ರಾಹುಲ್ ತಂಡವನ್ನು ಮುನ್ನಡೆಸಿದ್ದರು. ಇದನ್ನೂ ಓದಿ: ಟೀಂ ಇಂಡಿಯಾ ಮೂರು ಮಾದರಿ ತಂಡಕ್ಕೂ ಒಬ್ಬನೇ ನಾಯಕ – ಹಿಟ್‍ಮ್ಯಾನ್‍ಗೆ ಜಾಕ್‍ಪಾಟ್?

ವಿರಾಟ್ ಕೊಹ್ಲಿ ಒಟ್ಟು 68 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ಈ ಪೈಕಿ 40 ರಲ್ಲಿ ಜಯ, 11 ಪಂದ್ಯ ಡ್ರಾ, 17 ಪಂದ್ಯವನ್ನು ಭಾರತ ಸೋತಿತ್ತು. ಯಶಸ್ವಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ಕಾರಣ ನೂತನ ನಾಯಕನ ಮುಂದೆ ಭಾರೀ ಸವಾಲಿದೆ.

Comments

Leave a Reply

Your email address will not be published. Required fields are marked *