ಹುಣಸೆ ಹಣ್ಣಿನ ರಸಂ ಮಾಡುವ ವಿಧಾನ ನಿಮಗಾಗಿ

ನಿಮ್ಮ ದೇಹದಲ್ಲಿ ರೋಗನಿರೋಧ ಶಕ್ತಿಯನ್ನು ಹೆಚ್ಚಿಸಲು ಬೆಳ್ಳುಳ್ಳಿ, ಹುಣಸೆಹಣ್ಣು ಮತ್ತು ಕರಿಬೇವಿನ ಎಲೆಗಳಂತಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪದಾರ್ಥಗಳೊಂದಿಗೆ ತಯಾರಿಸಿದ ರಸಂ ಬಹಳ ಸಹಕಾರಿ. ಕೋವಿಡ್ ವಿರುದ್ಧ ಹೋರಾಡಲು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಅಡುಗೆಯಲ್ಲಿ ಈ ರಸಂ ಮಾಡಿ ಸವಿಯ ಬಹುದಾಗಿದೆ.


ಬೇಕಾಗುವ ಸಾಮಗ್ರಿಗಳು:
* ಹುಣಸೆ ಹಣ್ಣಿನ ತಿರುಳು – 2 ಚಮಚ
* ಟೊಮ್ಯಾಟೋ- 2
* ಕರಿಬೇವು- ಸ್ವಲ್ಪ
* ಕಾಳು ಮೆಣಸು- 1 ಚಮಚ
* ಬೆಳ್ಳುಳ್ಳಿ-2
* ಅರಿಶಿಣ ಪುಡಿ- ಸ್ವಲ್ಪ
* ಒಣ ಮೆಣಸಿನಕಾಯಿ- 2
* ರುಚಿಗೆ ತಕ್ಕಷ್ಟು ಉಪ್ಪು
* ಜೀರಿಗೆ- 1 ಚಮಚ
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಅಡುಗೆ ಎಣ್ಣೆ
* ಸಾಸಿವೆ- ಸ್ವಲ್ಪ

ಮಾಡುವ ವಿಧಾನ :
* ಮೆಣಸಿನಕಾಯಿ, ಕಾಳು ಮೆಣಸು, ಜೀರಿಗೆ, ಬೆಳ್ಳುಳ್ಳಿ ಮತ್ತು ಕರಿಬೇವು ಎಲೆಗಳನ್ನು ಬಾಣಲೆಯಲ್ಲಿ ಹುರಿದು ಮಿಕ್ಸರ್‍ನಲ್ಲಿ ರುಬ್ಬಿಕೊಳ್ಳಿ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

* ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಟೊಮ್ಯಾಟೋ, ಕರಿಬೇವು, ಅರಿಶಿಣ ಪುಡಿ, ಹುಣಸೆ ಹಣ್ಣಿನ ತಿರುಳು ಹಾಗೂ ರುಬ್ಬಿದ ಮಸಾಲೆಯನ್ನು ಹಾಕಿ ಬೇಯಿಸಬೇಕು.

* ಇನ್ನೊಂದು ಬಾಣಲೆಯಲ್ಲಿ ಅಡುಗೆ ಎಣ್ಣೆ, ಸಾಸಿವೆ, ಕೊತ್ತಂಬರಿ ಸೊಪ್ಪು, ಮೆಣಸಿನಕಾಯಿ ಹಾಕಿ ಒಗ್ಗರಣೆಯನ್ನು ಸಿದ್ಧಪಡಿಸಿಕೊಂಡು ರಸಂಗೆ ಒಗ್ಗರಣೆ ಕೊಟ್ಟರೆ ಅನ್ನದ ಜೊತೆಗೆ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:  ಕುಚ್ಚಲಕ್ಕಿ ದೋಸೆ ಸಖತ್ ಟೇಸ್ಟ್ – ನೀವೂ ಒಮ್ಮೆ ಟ್ರೈ ಮಾಡಿ

Comments

Leave a Reply

Your email address will not be published. Required fields are marked *