ಚಾಲಕನ ಪ್ರಜ್ಞೆ ತಪ್ಪಿ ಕಾಡಿನ ಮಧ್ಯೆ ನಿಂತ ಬಸ್‌ – 10 ಕಿ.ಮೀ. ಬಸ್ ಚಲಾಯಿಸಿ ಪ್ರಯಾಣಿಕರ ಕಾಪಾಡಿದ ಮಹಿಳೆ

ಮುಂಬೈ: ಬಸ್ ಚಾಲಕ ಮೂರ್ಛೆ ರೋಗದಿಂದ ಪ್ರಜ್ಞೆ ತಪ್ಪಿ ಬಿದ್ದ ಕಾರಣ ಬಸ್‍ನಲ್ಲಿದ್ದ ಮಹಿಳೆಯೊಬ್ಬರು ತಾವೇ 10 ಕಿ.ಮೀ. ಬಸ್ ಚಲಿಸಿ ಭಾರೀ ಅನಾಹುತ ತಪ್ಪಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಈ ವೀಡಿಯೋ ವೈರಲ್ ಆಗಿದ್ದು, ಮಹಿಳೆಯ ಸಾಹಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಯೋಗಿತಾ ಸತಾವ್(42) ಬಸ್‍ನ್ನು ಓಡಿಸಿದ ಮಹಿಳೆ. ಇವರು ತಮ್ಮ ಮಕ್ಕಳು ಹಾಗೂ ಇತರೆ ಮಹಿಳೆಯರು ಮತ್ತು ಅವರ ಮಕ್ಕಳ ಜೊತೆ ಕೃಷಿ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ಸಾಗುವ ವೇಳೆ ಕಾಡಿನ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಮಿನಿಬಸ್‍ನ ಚಾಲಕ ಪ್ರಜ್ಞೆ ತಪ್ಪಿದಂತಾಗಿ ನಿರ್ಜನ ಪ್ರದೇಶದಲ್ಲಿ ಬಸ್ ನಿಲ್ಲಿಸಿದ್ದಾನೆ. ಇದರಿಂದ ಬಸ್‍ನಲ್ಲಿದ್ದ ಪ್ರಯಾಣಿಕರೆಲ್ಲರೂ ಭಯಭೀತರಾಗಿದ್ದರು.

ಈ ವೇಳೆ ಆತಂಕಗೊಳ್ಳದ ಯೋಗಿತಾ, ಉಳಿದವರಿಗೂ ಧೈರ್ಯ ತುಂಬಿ ತಾವೇ ಬಸ್ ಚಲಿಸಿದ್ದಾರೆ. ಮೊದಲೇ ಕಾರು ಚಲಾಯಿಸಿ ಅನುಭವವಿದ್ದ ಯೋಗಿತಾ, 10 ಕಿ.ಮೀ. ದೂರ ಬಸ್ ಚಲಾಯಿಸಿಕೊಂಡು ಹೋಗಿ ಸಮೀಪದ ಆಸ್ಪತ್ರೆಗೆ ಚಾಲಕನನ್ನು ದಾಖಲಿಸಿ, ಆತನ ಪ್ರಾಣ ಕಾಪಾಡಿದ್ದಾರೆ. ಅಲ್ಲದೇ ಇತರೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಮನೆಗೆ ಬಿಟ್ಟಿದ್ದಾರೆ. ಇದನ್ನೂ ಓದಿ: ಡೊನಾಲ್ಡ್‌ ಟ್ರಂಪ್‌ಗೆ ಜೀವ ಬೆದರಿಕೆ – ಇರಾನ್ ನಾಯಕನಿಗೆ ಸಂಬಂಧಿಸಿದ ಖಾತೆ ಬ್ಯಾನ್‌ ಮಾಡಿದ ಟ್ವಿಟ್ಟರ್‌

ಆತಂಕದ ಸಮಯದಲ್ಲೂ ಧೃತಿಗೆಡದೇ ಬಸ್ ಚಲಾಯಿಸಿದ ಯೋಗಿತಾ ಅವರ ವೀಡಿಯೋ ಇದೀಗ ವೈರಲ್ ಆಗಿದ್ದು, ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಪಂಜಾಬ್‌ ಸಿಎಂ ಮನವಿ ಪತ್ರ

Comments

Leave a Reply

Your email address will not be published. Required fields are marked *