ಪ್ರೀತಿ ಇರಲಿ ಅಂತರಾಳದಿಂದ – ಡಿಯುಗೆ ಅರವಿಂದ್ ವಿಶ್

ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಸ್ಪರ್ಧಿ ದಿವ್ಯಾ ಉರುಡುಗಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಡಿಯುಗೆ ಅರವಿಂದ್ ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ.

ಕನ್ನಡ ಕಿರುತೆರೆ ಧಾರಾವಾಹಿಗಳ ಮೂಲಕ ನಟಿಯಾಗಿ ಗುರುತಿಸಿಕೊಂಡ ದಿವ್ಯಾ ಉರುಡುಗ, ಕಳೆದ ವರ್ಷ ಬಿಗ್‍ಬಾಸ್ ಸೀಸನ್-8 ಸ್ಫರ್ಧಿಯಾಗಿ ಕಾಣಿಸಿಕೊಂಡು ಕನ್ನಡಿಗರ ಮನಗೆದ್ದಿದ್ದರು. ದೊಡ್ಮನೆಯಲ್ಲಿ ಅರವಿಂದ್.ಕೆ.ಪಿ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಈ ಜೋಡಿ, ಈಗಲೂ ಸಹ ಅಷ್ಟೇ ಉತ್ತಮ ಭಾಂದವ್ಯ ಮತ್ತು ಆತ್ಮೀಯತೆಯನ್ನು ಹೊಂದಿದೆ. ಇದನ್ನೂ ಓದಿ: ನಾನು ಸ್ವಲ್ಪ ಸೈಕೊ- ರಶ್ಮಿಕಾ ಮಂದಣ್ಣ

ಜೋಡಿ ಹಕ್ಕಿಗಳಂತೆ ಆಗಾಗಾ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಫೋಟೋ ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಇಂದು ದಿವ್ಯಾ ಉರುಡುಗ ಅವರು 32ನೇ ವಸಂತಕ್ಕೆ ಕಾಲಿಟ್ಟಿದ್ದು, ದಿವ್ಯಾ ಉರುಡುಗ ಜೊತೆಗಿರುವ ಫೋಟೋವೊಂದನ್ನು ಅರವಿಂದ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಹುಟ್ಟುಹಬ್ಬದ ಶುಭಾಶಯಗಳು ಕೆ(ಕಾವ್ಯ). ಪ್ರೀತಿ ಇರಲಿ ಅಂತರಾಳದಿಂದ ಎಂದು ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲದೇ ದಿವ್ಯಾ ಉರುಡುಗ ಕಿರುತೆರೆ ಹಾಗೂ ಬೆಳ್ಳಿತೆರೆಯ ಪುಟ್ಟ ಜರ್ನಿ ವೀಡಿಯೋವನ್ನು ತಮ್ಮ ಸ್ಟೋರಿಯಲ್ಲಿ ಕೂಡ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಂಕ್ರಾಂತಿಗೆ ಅಮೂಲ್ಯ ಮನೆಗೆ ಗಂಗೆ, ದ್ರೌಪದಿ ಆಗಮನ

 

View this post on Instagram

 

A post shared by Aravind K P (@aravind_kp)

ವಿಶೇಷವಾಗಿ ಅರವಿಂದ್ ಅವರು ಸಾಮಾನ್ಯವಾಗಿ ದಿವ್ಯಾ ಉರುಡುಗ ಅವರೊಂದಿಗೆ ಹಂಚಿಕೊಳ್ಳುವ ಪ್ರತಿಯೊಂದು ಫೋಟೋ ಕೆಳಗೆ ಪ್ರೀತಿ ಇರಲಿ ಅಂತರಾಳದಿಂದ ಎಂದು ಬರೆದುಕೊಂಡಿರುತ್ತಾರೆ. ಬಿಗ್‍ಬಾಸ್ ಕಾರ್ಯಕ್ರಮದಿಂದಲೂ ಇವರಿಬ್ಬರ ನಡುವೆ ಲವ್ವಿ, ಡವ್ವಿ ಶುರುವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ವಿಚಾರವಾಗಿ ಇಲ್ಲಿಯವರೆಗೂ ಇಬ್ಬರೂ ಸಹ ಯಾವುದೇ ಗುಟ್ಟುಬಿಟ್ಟುಕೊಟ್ಟಿಲ್ಲ. ಸದ್ಯ ದಿವ್ಯಾ ಉರುಡುಗ ಹಲವಾರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರೆ, ಮೋಟಾರ್ ರೇಸರ್ ಆಗಿರುವ ಅರವಿಂದ್ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಬಿಗ್‍ಬಾಸ್ ಸ್ಪರ್ಧಿಗಳಾದ ಶುಭಾ ಪೂಂಜಾ, ದಿವ್ಯಾ ಸುರೇಶ್, ವೈಷ್ಣವಿ ಗೌಡ ಸೇರಿದಂತೆ ಹಲವಾರು ಮಂದಿ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಮಿಸ್ ಬಿಕಿನಿ ಇಂಡಿಯಾ ಅರ್ಚನಾ ಕಾಂಗ್ರೆಸ್‍ನಿಂದ ಚುನಾವಣಾ ಅಭ್ಯರ್ಥಿ- ರಾಜಕೀಯಕ್ಕೆ ನನ್ನ ವೃತ್ತಿ ಬೆಸೆಯಬೇಡಿ

Comments

Leave a Reply

Your email address will not be published. Required fields are marked *