ಇಂದು 32,793 ಕೇಸ್ – ಬೆಂಗಳೂರಿನಲ್ಲಿ 129 ಸಾವಿರ ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಏರಿಕೆಯ ಹಾದಿ ಮುಂದುವರಿದಿದೆ. ಇಂದು ಒಟ್ಟು 32,793 ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಈ ಮೂಲಕ ಪಾಸಿಟಿವಿಟಿ ರೇಟ್ ಶೇ. 15 ಕ್ಕೆ ಏರಿಕೆ ಕಂಡಿದೆ. ಒಟ್ಟು 7 ಮರಣ ಪ್ರಕರಣ ದಾಖಲಾಗಿದೆ.

ಇಂದು ಬೆಂಗಳೂರು ಒಂದರಲ್ಲೇ 22,284 ಪ್ರಕರಣ ಪತ್ತೆಯಾಗಿದ್ದು, 5 ಮಂದಿ ಮರಣ ಹೊಂದಿದ್ದಾರೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,69,850ಕ್ಕೆ ಏರಿಕೆ ಕಂಡಿದ್ದು, ಬೆಂಗಳೂರಲ್ಲೇ ಬರೋಬ್ಬರಿ 1,29,000 ಸಕ್ರಿಯ ಪ್ರಕರಣಗಳಿವೆ. ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ತಂತ್ರಜ್ಞಾನ ಪರಿಣಾಮಕಾರಿ ಬಳಕೆ, 2.5 ಲಕ್ಷ ಸಿಬ್ಬಂದಿಗೆ ತರಬೇತಿ: ಸಚಿವ ಸುಧಾಕರ್

ಇನ್ನೇನೂ 33 ಸಾವಿರ ಸನಿಹದಲ್ಲಿರುವ ಇಂದಿನ ಪಾಸಿಟಿವ್ ಕೇಸ್‍ಗಳ ಸಂಖ್ಯೆ 3ನೇ ಅಲೆಯ ಬಗ್ಗೆ ಮತ್ತಷ್ಟು ಆತಂಕ ಮೂಡಿಸಿದ್ದು, ಇಂದು ಒಂದೇ ದಿನ 2,18,479 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 500ಕ್ಕೂ ಮೇಲ್ಪಟ್ಟು ಪಾಸಿಟಿವ್ ಕೇಸ್ ಪತ್ತೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಇದನ್ನೂ ಓದಿ: ವಸತಿ ಶಾಲೆಯ 16 ಮಕ್ಕಳಿಗೆ ವಕ್ಕರಿಸಿದ ಕೊರೊನಾ

Comments

Leave a Reply

Your email address will not be published. Required fields are marked *