1 ಕಿ.ಮೀ ಓಡಿ ಕಳ್ಳನನ್ನು ಹಿಡಿದ ಮಂಗಳೂರು ಪೊಲೀಸ್ ವೀಡಿಯೋ ವೈರಲ್

ಮಂಗಳೂರು: ಒಂದು ಕಿಲೋಮೀಟರ್ ಓಡಿ ಹೋಗಿ ಸಿನಿಮೀಯ ರೀತಿಯಲ್ಲಿ ಪೊಲೀಸೊಬ್ಬರು ಕಳ್ಳನನ್ನು ಹಿಡಿದ ಘಟನೆ ಮಂಗಳೂರಲ್ಲಿ ನಡೆದಿದೆ. ಸದ್ಯ ಕಳ್ಳನನ್ನು ಹಿಡಿದ ಪೊಲೀಸ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಹೌದು. ಪೊಲೀಸ್ ವರುಣ್ ಕಾರ್ಯಕ್ಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಕ್ಷನ್ ಮೂಲಕ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದವನನ್ನು ವರುಣ್ ಸಿನಿಮೀಯ ರೀತಿಯಲ್ಲಿ ಸೆರೆಹಿಡಿದಿದ್ದಾರೆ. ನಿನ್ನೆ ಸಂಜೆ ಪೊಲೀಸ್ ಕಮಿಷನರ್ ಕಚೇರಿ ಮುಂಭಾಗ ಕಳ್ಳತನ ನಡೆದಿತ್ತು. ಇದನ್ನೂ ಓದಿ: ಸರ್ಕಾರಕ್ಕೆ ನಮ್ಮನ್ನು ಬಂಧಿಸುವ ಶಕ್ತಿ ಇಲ್ಲ: ಡಿ.ಕೆ. ಸುರೇಶ್

ಮಂಗಳೂರಿನ ನೆಹರು ಮೈದಾನದಲ್ಲಿ ಮಲಗಿದ್ದ ವ್ಯಕ್ತಿಯ ಮೊಬೈಲ್ ಹಣ ಕದಿಯಲಾಗಿತ್ತು. ಬಳಿಕ ತಕ್ಷಣವೇ ಇಬ್ಬರು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಇತ್ತ ಮೊಬೈಲ್ ಕಳೆದುಕೊಂಡ ವ್ಯಕ್ತಿ ಓರ್ವ ಆರೋಪಿಯನ್ನು ಹಿಂಬಾಲಿಸಿದ್ದಾರೆ. ಇದನ್ನು ನೋಡಿದ ಪೊಲೀಸ್ ಕಮಿಷನರ್, ಆರೋಪಿ ಹಿಡಿಯಲು ಸೂಚನೆ ನೀಡಿದ್ದಾರೆ. ಬಳಿಕ ಓರ್ವ ಆರೋಪಿಯನ್ನು ಪೊಲೀಸರು ಹಿಡಿದಿದ್ದಾರೆ. ಆತನಿಂದ ಪ್ಲಾನ್ ಮಾಡಿಸಿ ಇನ್ನಿಬ್ಬರನ್ನು ಬಲೆಗೆ ಕೆಡವಲು ಖಾಕಿ ಮುಂದಾಗಿತ್ತು. ಇದನ್ನೂ ಓದಿ: ನೋಟಿಸ್‍ಗೆ ಹೆದರಲ್ಲ, ಜನರ ಹಿತದೃಷ್ಟಿಯಿಂದ ಪಾದಯಾತ್ರೆ ರದ್ದು: ಸಿದ್ದರಾಮಯ್ಯ

ಖಾಕಿ ಪ್ಲಾನ್ ಗೊತ್ತಾಗಿ ಆರೋಪಿಗಳು ಎಸ್ಕೇಪ್ ಆಗಲು ಯತ್ನಿಸಿದರು. ಈ ವೇಳೆ ಒಂದು ಕಿಲೋಮೀಟರ್ ಓಡಿ ಕಳ್ಳರನ್ನು ಹಿಡಿಯಲು ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯ ಸಂಪೂರ್ಣ ದೃಶ್ಯ ಸೆರೆಯಾಗಿದ್ದು, ಈ ವೀಡಿಯೋವನ್ನು ಕಮಿಷನರ್ ಶಶಿಕುಮಾರ್ ತಮ್ಮ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸದ್ಯ ಈಗ ವೀಡಿಯೋ ಸಖತ್ ವೈರಲ್ ಆಗುತ್ತಿದೆ

Comments

Leave a Reply

Your email address will not be published. Required fields are marked *