ಕೋವಿಡ್‌ 3ನೇ ಅಲೆ – ರಾಜ್ಯಗಳ ಜೊತೆ ನಾಳೆ ಮೋದಿ ಸಭೆ

ನವದೆಹಲಿ/ ಬೆಂಗಳೂರು: ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಫೆಬ್ರವರಿಯಲ್ಲಿ ಗರಿಷ್ಠ ಪ್ರಮಾಣಕ್ಕೆ ಕೊರೊನಾ 3ನೇ ಅಲೆ ಹೋಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಸಭೆ ಮಹತ್ವ ಪಡೆದಿದೆ.

ಏನು ಚರ್ಚೆಯಾಗಬಹುದು?
ಅತಿ ಹೆಚ್ಚು ಸೋಂಕು ಪತ್ತೆಯಾಗುತ್ತಿರುವ ದೆಹಲಿ, ಮಹಾರಾಷ್ಟ್ರ, ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳದಿಂದ ವರದಿ ಕೇಳಬಹುದು. ಸದ್ಯದ ಕೇಸ್, ಪಾಸಿಟಿವಿಟಿ ರೇಟ್, ನಿಯಂತ್ರಣಾ ಕ್ರಮಗಳ ಬಗ್ಗೆ ಪರಿಶೀಲಿಸಿ ಟೆಸ್ಟಿಂಗ್ ಹೆಚ್ಚಳ, ವ್ಯಾಕ್ಸಿನೇಷನ್ ಅಭಿಯಾನದ ಬಗ್ಗೆ ಸಮಾಲೋಚನೆ ನಡೆಸಬಹುದು. ಇದನ್ನೂ ಓದಿ: ಕೋತಿ ಅಂತ್ಯಸಂಸ್ಕಾರಕ್ಕೆ 1,500 ಮಂದಿ ಭಾಗಿ!

ಆಸ್ಪತ್ರೆಗಳ ಸಿದ್ಧತೆ, ಕೊವೀಡ್ ಆಸ್ಪತ್ರೆಗಳ ಪುನಾರಂಭ, ಐಸಿಯು, ಆಕ್ಸಿಜನ್ ಬೆಡ್, ಆಕ್ಸಿಜನ್ ಲಭ್ಯತೆ, ಔಷಧಿಗಳ ಲಭ್ಯತೆ ಬಗ್ಗೆ ಪರಾಮರ್ಶೆ ನಡೆಯಬಹುದು. ಮಕ್ಕಳಿಗಾಗಿ ಮಾಡಿಕೊಂಡ ವಿಶೇಷ ತಯಾರಿಗಳು, ಕೇಂದ್ರ ತಾಂತ್ರಿಕ ನೆರವಿನ ಅವಶ್ಯಕತೆ ಕೇಳಬಹುದು. ಸೋಂಕು ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರಕ್ಕೆ 400 ಕೆಜಿಯ ಬೀಗ ದೇಣಿಗೆ!

ಕರ್ನಾಟಕದಲ್ಲಿ ಕಠಿಣ ನಿಯಮ:
ಲಾಕ್‍ಡೌನ್ ಹೆಸರು ಹೇಳದೇ ಕರ್ನಾಟಕ ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ಸಭೆ ಬಳಿಕ ತಜ್ಞರ ವರದಿಯನ್ನು ನೋಡಿಕೊಂಡು ಕಠಿಣ ಕ್ರಮಕೈಗೊಳ್ಳುವ ಸಾಧ್ಯತೆಯಿದೆ.

Comments

Leave a Reply

Your email address will not be published. Required fields are marked *