ರಾಮನಗರ: ನಾನು ಯಾರಿಗಾದರೂ ಅನ್ಯಾಯ ಮಾಡಿದ್ದೀನಾ, ಲಂಚ ಪಡೆದಿದ್ದೀನಾ? ಆದರೂ ನನ್ನನ್ನು ಜೈಲಿಗೆ ಹಾಕಿದ್ರಿ. ಕೊರೊನಾ ಅಂಟಿಸಿ ಪಾದಯಾತ್ರೆ ನಿಲ್ಲಿಸಲು ಯತ್ನಿಸುತ್ತಿದ್ದೀರಾ. ನಿಮಗೆ ಒಳ್ಳೆಯದಾಗಲ್ಲ. ನಿಮಗೆ ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಣ್ಣೀರು ಹಾಕಿದ್ದಾರೆ.

ಎರಡನೇ ದಿನ ಪಾದಯಾತ್ರೆ ಮುಗಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗ್ಗೆಯಿಂದ ನನ್ನ ನಡು ಬೆನ್ನು ಎಲ್ಲಾ ಮುರಿದು ಹಾಕಿದ್ದೀರಿ. ಈಗ ನಾನು ಡಾಕ್ಟರ್ ಕರೆದುಕೊಂಡು ರೆಡಿ ಮಾಡಿಸಿಕೊಳ್ಳಬೇಕು. ನನಗೆ ಇವತ್ತು ದುಃಖದ ದಿನ. ಬಿಜೆಪಿ ಸರ್ಕಾರದ ಮಂತ್ರಿಗಳು ನಿಚ ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಿರಲಿಲ್ಲ. ನಿನ್ನೆ ದೊಡ್ಡ ಆಲಹಳ್ಳಿಯಲ್ಲಿ ನಮ್ಮ ಜನ ನನಗೆ ಭರ್ಜರಿ ಸ್ವಾಗತ ಕೋರಿದರು. ಈ ವೇಳೆ ಕನಕಪುರದಲ್ಲಿದ್ದ ಬಿಲ್ಡಿಂಗ್ನಲ್ಲಿ ಲೈಟ್ ಹಾಕಲು ಜನರಿಗೆ ಸರ್ಕಾರ ಅವಕಾಶ ನೀಡಲಿಲ್ಲ. ಇದು ಅಲ್ಲಿನ ಜನರಿಗೆ ಅವಮಾನವಾಗಿದೆ ಎಂದರು. ಇದನ್ನೂ ಓದಿ: ಕಾಲಭೈರವನಿಗೆ ಪೊಲೀಸ್ ಸಮವಸ್ತ್ರ – ಫೋಟೋ ವೈರಲ್
ಬಿಜೆಪಿ ಕಾರ್ಯಕರ್ತರೊಬ್ಬರು ಸಂಜೆ ಬಂದು ಶಾಲು ಹೊದಿಸಿ ಅಣ್ಣ ನಮ್ಮ ನಾಯಕರು ನಿಮಗೆ ಅಂಟು ರೋಗ ತರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಈ ಮುನ್ನ ಆಸ್ಪತ್ರೆ ನೀಡುವಂತೆ ಯಡಿಯೂರಪ್ಪ ಅವರ ಬಳಿ ಕೇಳಿಕೊಂಡಿದ್ದೆ. ಆಗ ಸರಿ ಅಂತ ಹೇಳಿದ್ದರು. ಈ ವೇಳೆ ಬಸವರಾಜ ಬೊಮ್ಮಾಯಿ ಅವರು ಸಹ ಇದ್ದರು. ಆದರೆ ಲೈಟ್ ಹಾಕಲು ಅವಕಾಶ ಕೊಡದ ಬೊಮ್ಮಾಯಿಗೆ ಆಸ್ಪತ್ರೆ ನೀಡುವಷ್ಟು ಹೃದಯ ಶ್ರೀಮಂತಿಕೆ ಇಲ್ಲ. ಯಾವಾನೋ ಆಫೀಸರ್ನಾ ಕಳುಹಿಸಿ ಕೊರೊನಾ ಟೆಸ್ಟ್ ಮಾಡಿಸಬೇಕಂತೆ. ಅವನ್ಯಾವನೋ ಡಿಸಿಗೆ ಕೊರೊನಾ ಬಂದಿದೆಯಂತೆ. ಅದಕ್ಕೆ ಸರ್ ನಿಮಗೆ ಟೆಸ್ಟ್ ಮಾಡಬೇಕು ಅಂತ ಬಂದಿದ್ದರು. ಕೊರೊನಾ ಅಂಟಿಸಿ ಪಾದಯಾತ್ರೆ ನಿಲ್ಲಿಸಲು ಯತ್ನಿಸುತ್ತೀದ್ದೀರಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಉತ್ತರ ಪ್ರದೇಶ, ಉತ್ತರಾಖಂಡ್ನಲ್ಲಿ ಬಿಜೆಪಿ ಅಧಿಕಾರಕ್ಕೆ

ಈಗ ಕೊರೊನಾ ಟೆಸ್ಟ್ ಮಾಡಲು ಬಂದ ಅಧಿಕಾರಿಗೆ ಕೊರೊನಾ ಬಂದಿದೆ. ಎಂಥಾ ರೋಗವನ್ನು ನನಗೆ ಅಂಟಿಸಲು ಕಳುಹಿಸಿದ್ದೀರಿ. ನನ್ನ ಆರೋಗ್ಯದ ಬಗ್ಗೆ ಕಾಳಜಿ ಇರುವವರು. ಇಡಿ ಅರೆಸ್ಟ್ ಮಾಡಿದಾಗ, ನನಗೆ ಎದೆ ನೋವಾಗಿತ್ತು. ಇಸಿಜಿ ಮಾಡಲು ಕರೆದುಕೊಂಡು ಹೋದಾಗ ಐದು ನಿಮಿಷದಲ್ಲಿ ನನ್ನ ಪ್ರಾಣ ಹೋಗುವ ಹಾಗೆ ಆಗಿತ್ತು. ಆದರೆ ನೀವು ಐದೇ ನಿಮಿಷಕ್ಕೆ ಟೆಸ್ಟ್ ಮಾಡಿ ತಿಹಾರ್ ಜೈಲಿಗೆ ಕಳುಹಿಸಿದ್ರಿ. ನಾನು ಯಾರಿಗಾದರೂ ಅನ್ಯಾಯ ಮಾಡಿದ್ದೀನಾ, ಲಂಚ ಪಡೆದಿದ್ದೀನಾ? ಆದರೂ ನನ್ನನ್ನು ಜೈಲಿಗೆ ಹಾಕಿದ್ರಿ. ಆದರೆ ನನ್ನ ಜನ ಹರಕೆ ಹೊತ್ತು ನನ್ನ ಜೈಲಿನಿಂದ ಹೊರಗೆ ಕರೆದುಕೊಂಡು ಬಂದರು. ನಮ್ಮ ಜನ ಮಹಾರಾಜರಿಗೂ ಕೊಡದ ಪ್ರೀತಿಯನ್ನು ನನಗೆ ಕೊಟ್ಟಿದ್ದಾರೆ. ಅಲ್ಲದೇ ಅವನ್ಯಾವನೋ ಸುರೇಶನ ಗಂಡಸ್ತನವನ್ನು ಕೇಳುತ್ತಾನೆ. ಗಂಡಸ್ತನ ಕೇಳಲು ಅಲ್ಲಿಯವರೆಗೆ ಹೋಗಬೇಕಾ. ನನ್ನ ಜನ ಗೆಲ್ಲಿಸಿ ಎಂಪಿ ಮಾಡಿದ್ದಾರೆ ಎಂದು ಮಾತನಾಡುತ್ತಾ ಭಾವುಕರಾಗಿ ಡಿ.ಕೆ. ಶಿವಕುಮಾರ್ ಕಣ್ಣೀರು ಹಾಕಿದ್ದಾರೆ.
ಡಿಸಿ ಇಲ್ಲಿ ಲೈಟ್ ಹಾಕುವುದನ್ನು ತಡೆದಿದ್ದಾನೆ. ಅವನಿಗೆ ಈಗ ಅಲ್ಲ ಮುಂದೆ ಇದೆ ಎಂದು ವಾರ್ನ್ ಮಾಡಿದರು. ಬಳಿಕ ನಾಳೆ ರಾತ್ರಿ ಅಷ್ಟೋತ್ತಿಗೆ ಮತ್ತೊಂದು ನಾಟಕ ಶುರುಮಾಡುತ್ತಾರೆ. ಸಂಗಮದಿಂದ ಇಲ್ಲಿಯವರೆಗೆ ಎಲ್ಲರಿಗೂ ಪಾಸಿಟಿವ್ ಬಂದಿದೆ ಅಂತ ಹೇಳುತ್ತಾರೆ. ಇದನ್ನೂ ಓದಿ: Mekedatu Padyatra: ಮಕ್ಕಳನ್ನು ಭೇಟಿ ಮಾಡಿದ್ದ ಡಿಕೆ ಶಿವಕುಮಾರ್ ವಿರುದ್ಧ ಕೇಸ್
ನನಗೆ ಪಾಸಿಟಿವ್ ಬಂದಿದ್ಯಾ? ನನಗೆ ಕಾಯಿಲೆ ಇದ್ಯಾ ನೀವೇ ಹೇಳಿ. ಕಾಯಿಲೆ ಬಂದು ಗಡ, ಗಡ ಎಂದು ನಡುಗುತ್ತಿದ್ದೀನಾ. ಇವತ್ತು 30 ಜನರ ಮೇಲೆ ಎಫ್ಐಆರ್ ಮಾಡಿದ್ದಾರೆ. ಬೊಮ್ಮಾಯಿ ಅವರೇ ಇಡೀ ಕನಕಪುರದ ಜನ ಬಂದು ಕೋರ್ಟ್ ಕಟಕಟಗೆ ಬಂದು ನಿಂತರೆ ಹೇಗಿರುತ್ತದೆ. ನಂಗೆ ಜೈಲು ಪಾಲು ಎಲ್ಲಾ ಅಭ್ಯಾಸ ಇದೆ ಎಂದು ತಿರುಗೇಟು ನೀಡಿದರು.

Leave a Reply