ಬೆಂಗ್ಳೂರಲ್ಲಿ ಕಾರು, ಬೈಕ್ ಮೇಲೆ ಉರುಳಿದ ಜಲ್ಲಿ ತುಂಬಿದ್ದ ಲಾರಿ- 6 ಮಂದಿ ದುರ್ಮರಣ

ಬೆಂಗಳೂರು: ಹೊರವಲಯದಲ್ಲಿ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿದ್ದಾರೆ.

KA-02 MM- 7749 ಕಾರಿನಲ್ಲಿದ್ದ, ನಿಖಿತಾ ರಾಣಿ (29), ವೀಣಮ್ಮ(42), ಇಂದ್ರಕುಮಾರ್ (14) ಕೀರ್ತಿಕುಮಾರ್ (40), KA 05 MJ 9924 ಕಾರಿನಲ್ಲಿದ್ದ ಟೊಯೋಟಾ ಕಂಪೆನಿಯ ಸಿಬ್ಬಂದಿ ಟಿ.ಜೆ ಶಿವಪ್ರಕಾಶ್, ಬೈಕ್ ನಲ್ಲಿದ್ದ ಜಿತಿನ್ ಬಿ. ಜಾರ್ಜ್ ಮೃತರಾಗಿದ್ದಾರೆ. ಒಟ್ಟು ಆರು ಮಂದಿ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕುಂಬಳಗೋಡಿನ ಕಣಿಮಿಣಿಕೆ ಬಳಿ ಘಟನೆ ನಡೆದಿದೆ. ರಸ್ತೆ ಕಾಮಗಾರಿಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕುಂಬಳಗೊಡು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿಗೆ ಕೊರೊನಾ ಪಾಸಿಟಿವ್‌

ರಸ್ತೆ ಕಾಮಗಾರಿ ನಡೆಯುತ್ತಿತ್ತು, ವೇಗವಾಗಿ ಬಂದ ಲಾರಿ ಕಂಟ್ರೋಲ್ ತಪ್ಪಿ ಪಲ್ಟಿಯಾಗಿದೆ. ಆಗ ಜಲ್ಲಿ ತುಂಬಿದ್ದ ಲಾರಿ ಪಲ್ಟಿಯಾಗಿ ಎರಡು ಕಾರು, ಒಂದು ಬೈಕ್ ಮೇಲೆ ಬಿದ್ದಿದೆ. ಈ ವೇಳೆ ಪಕ್ಕದಲ್ಲಿ ನಿಂತಿದ್ದ ಇತರೇ ವಾಹನಗಳು ಜಖಂ ಆಗಿವೆ. ಇದನ್ನೂ ಓದಿ: ಸಚಿವ ಆರ್. ಅಶೋಕ್‍ಗೆ ಕೊರೊನಾ ಪಾಸಿಟಿವ್

ಆರು ಮೃತದೇಹಗಳನ್ನು ರಾಜರಾಜೇಶ್ವರಿ ನಗರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತದ ಸ್ಥಳದಿಂದ ಎರಡು ಕಡೆಗಳಲ್ಲಿ ಸುಮಾರು ಐದು ಕಿಲೋಮೀಟರ್ ನಷ್ಟು ಟ್ರಾಫಿಕ್ ಜಾಮ್ ಆಗಿತ್ತು. ಸದ್ಯ  ಲಾರಿಯನ್ನು ಕ್ರೆನ್‌ ಮೂಲಕ ತೆರವು ಮಾಡುತ್ತಿರುವ ಕಾರ್ಯ ನಡೆಯುತ್ತಿದೆ.

Comments

Leave a Reply

Your email address will not be published. Required fields are marked *