ಯಾವುದೇ ಆರೋಪವಿಲ್ಲದಿದ್ರೂ 3 ವರ್ಷ ಜೈಲುವಾಸ ಅನುಭವಿಸಿದ ಸೌದಿ ರಾಜಕುಮಾರಿ!

ರಿಯಾಧ್: ಯಾವುದೇ ಆರೋಪವಿಲ್ಲದಿದ್ದರೂ ಸೌದಿ ರಾಜಕುಮಾರಿ ಸತತ ಮೂರು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ. ರಾಜಕುಮಾರಿ ಮತ್ತು ಅವರ ಮಗಳನ್ನು ಮೂರು ವರ್ಷಗಳ ಸೆರೆವಾಸದ ನಂತರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆ ತಿಳಿಸಿದೆ.

ರಾಜಮನೆತನದ ಸದಸ್ಯೆ ಬಾಸ್ಮಾ ಬಿಂಟ್‌ ಸೌದ್‌ (57) ಅವರನ್ನು 2019ರ ಮಾರ್ಚ್‌ ತಿಂಗಳಲ್ಲಿ ಬಂಧಿಸಲಾಗಿತ್ತು. ಅನಾರೋಗ್ಯದ ಕಾರಣದಿಂದಾಗಿ ಈಗ ಅವರನ್ನು ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ ಯುವಕ ಅರೆಸ್ಟ್

ರಾಜಕುಮಾರಿ ಬಾಸ್ಮಾ ಅವರನ್ನು ಅಲ್‌ ಹೈರ್‌ ಜೈಲಿನಲ್ಲಿ ಬಂಧಿಸಲಾಗಿತ್ತು. ಇದೇ ಜೈಲಿನಲ್ಲಿ ಅನೇಕ ರಾಜಕೀಯ ನಾಯಕರನ್ನೂ ಬಂಧಿಸಲಾಗಿದೆ. ರಾಜಕುಮಾರಿ ಬಂಧನ ಕುರಿತು ಪ್ರತಿಕ್ರಿಯಿಸಲು ಅಧಿಕಾರಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ.

jail

2017ರಲ್ಲಿ ರಿಯಾದ್‌ನ ಐಷಾರಾಮಿ ರಿಟ್ಜ್-ಕಾರ್ಲ್‌ಟನ್ ಹೋಟೆಲ್‌ನಲ್ಲಿ ಭ್ರಷ್ಟಾಚಾರ-ವಿರೋಧಿ ಅಭಿಯಾನ ನಡೆದಿತ್ತು. ಮೂರು ತಿಂಗಳ ಅವಧಿಯಲ್ಲಿ ಹತ್ತಾರು ರಾಜಕುಮಾರರು ಮತ್ತು ವಿಶ್ವಾಸದ್ರೋಹದ ಆರೋಪದಲ್ಲಿ ಶಂಕಿತರನ್ನು ಬಂಧಿಸಲಾಗಿತ್ತು. ಅಂತೆಯೇ 2020ರಲ್ಲಿ ರಾಜ ಸಲ್ಮಾನ್ ಅವರ ಸಹೋದರ ಮತ್ತು ಸೋದರಳಿಯನನ್ನು ರಾಯಲ್ ಗಾರ್ಡ್ ಬಂಧಿಸಿದ್ದರು. ಇದನ್ನೂ ಓದಿ: ಪಾಕಿಸ್ತಾನದ ಮರ‍್ರೆಯಲ್ಲಿ ಭಾರೀ ಹಿಮಪಾತ – 10 ಮಕ್ಕಳು ಸೇರಿ 22 ಮಂದಿ ಬಲಿ

Comments

Leave a Reply

Your email address will not be published. Required fields are marked *