ವಿಕ್ರಾಂತ್ ರೋಣ ಚಿತ್ರಕ್ಕೆ ಭರ್ಜರಿ ಆಫರ್ ನೀಡಿದ ಓಟಿಟಿ!

ಬೆಂಗಳೂರು: ಕೊರೊನಾ ಮೂರನೇ ಅಲೆಯಿಂದ ಆನಿಶ್ಚಿತತೆ ಉಂಟಾಗಿರುವ ಈ ಸಂದರ್ಭದಲ್ಲಿ ಓಟಿಟಿಗಳು ಬಹುನೀರಿಕ್ಷಿತ ಸಿನಿಮಾಗಳ ಹಿಂದೆ ಬಿದ್ದಿವೆ. ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾಗೆ ಭರ್ಜರಿ ಆಫರ್ ಬಂದಿದೆ.

3ಡಿ ತಂತ್ರಜ್ಞಾನದಲ್ಲಿ, ಭರ್ಜರಿ ವೆಚ್ಚದಲ್ಲಿ ತಯಾರಾಗಿರುವ ವಿಕ್ರಾಂತ್ ರೋಣದ, ನೇರ ಪ್ರಸಾದ ಹಕ್ಕುಗಳಿಗಾಗಿ ಎರಡು ಓಟಿಟಿ ಸಂಸ್ಥೆಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ ಎನ್ನಲಾಗಿದೆ. ಇದನ್ನೂ ಓದಿ: ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ

ಕನ್ನಡ, ಹಿಂದಿ, ತಮಿಳು, ತೆಲಗು, ಮಲಯಾಳಂ, ಇಂಗ್ಲಿಷ್ ಭಾಷೆಯಲ್ಲೂ ನೇರವಾಗಿ ಓಟಿಟಿಯಲ್ಲಿ ಪ್ರಸಾರ ಮಾಡಲು ಓಟಿಟಿ ಆಫರ್ ನೀಡಿದೆ. ಇದಕ್ಕಾಗಿ ನಿರೀಕ್ಷೆಗೂ ಮೀರಿದ ಹಣದ ಆಫರ್ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. 2 ಓಟಿಟಿಗಳಲ್ಲಿ ಸ್ಪರ್ಧೇ ನಡೆಯುತ್ತಿದ್ದು, ಚಿತ್ರತಂಡ ಮಾತ್ರ ಈ ಕುರಿತಾಗಿ ಯಾವುದೇ ಮಾಹಿತಿ ನೀಡಿಲ್ಲ. ಗಾಂಧಿನಗರದಲ್ಲಿ ಚಾಲ್ತಿಯಲ್ಲಿರುವ ವದಂತಿಯ ಪ್ರಕಾರ ಓಟಿಟಿಯಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ಹಣ ನೀಡಲು ಮುಂದೆ ಬಂದಿದೆ. ಈ ಮೊತ್ತವನ್ನು ನಿರ್ಮಾಕರು ಖಚಿತ ಪಡಿಸಿಲ್ಲ. ಆದರೆ ಹಬ್ಬಿರುವ ಸುದ್ದಿಯ ಪ್ರಕಾರ ಓಟಿಟಿ ಪ್ರಸಾರ ಹಕ್ಕುಗಳಿಗೆ ದಕ್ಷಿಣ ಭಾರತೀಯ ಚಿತ್ರವೊಂದಕ್ಕೆ ಬಂದಿರುವ ಅತೀ ಹೆಚ್ಚಿನ ಆಫರ್ ಇದಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ


ಈ ಕುರಿತಾಗಿ ಮಾತನಾಡಿದ ಚಿತ್ರದ ನಿರ್ಮಾಪಕ ಜಾಕ್ ಮಂಜು, ಓಟಿಟಿಯಲ್ಲಿ ನೇರವಾಗಿ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ 2 ಓಟಿಟಿ ಸಂಸ್ಥೆಗಳು ಬಂದಿವೆ. ಒಬ್ಬರು ಈಗಾಗಲೇ ಇಂತಿಷ್ಟು ಹಣವನ್ನು ಕೊಡುವುದಾಗಿ ಹೇಳಿದ್ದಾರೆ. ದೊಡ್ಡ ಮೊತ್ತವನ್ನೇ ಆಫರ್ ಮಾಡಿದ್ದಾರೆ. ವಿಕ್ರಾಂತ್ ರೋಣ ಚಿತ್ರವನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುವ ಉದ್ದೇಶ ಇದೆ. ಆ ಕಾರಣಕ್ಕಾಗಿ 3ಡಿ ತಂತ್ರಜ್ಞಾನದಲ್ಲಿ ಸಿನಿಮಾವನ್ನು ಮಾಡಲಾಗಿದೆ ಎಂದಿದ್ದಾರೆ.

ಸುದೀಪ್ ಅವರಿಗೆ ಇರುವ ಅಭಿಮಾನಿಗಳ ಬಗ್ಗೆ ಗೊತ್ತಿದೆ. ಮತ್ತೋಂದು ಕಡೆ ಕೊರೊನಾ ಮೂರನೇ ಅಲೆ ನಿರೀಕ್ಷೆಗಿಂತ ವೇಗವಾಗಿ ಹರಡುತ್ತಿದೆ. ವೀಕೆಂಡ್ ಕರ್ಫ್ಯೂ ಮತ್ತು ಶೇ.50 ರಷ್ಟು ಸೀಟು ಭರ್ತಿ ಆದೇಶ ಜಾರಿಯಾಗಿದ್ದು, ಇದು ಮತ್ತಷ್ಟು ಹೆಚ್ಚಾದರೆ ಎನ್ನುವ ಯೋಚನೆ ಕೂಡಾ ಇದೆ. ಈ ವಿಚಾರವಾಗಿ ಸುದೀಪ್ ಅವರ ಜೊತೆಗೆ ಮಾತನಾಡಿ ಎರಡ್ಮೂರು ವಾರಗಳ ನಂತರ ಸೂಕ್ತ ನಿರ್ಧಾರಕ್ಕೆ ಬರುತ್ತೇವೆ, ಸದ್ಯಕ್ಕಂತೂ ಓಟಿಟಿಯಿಂದ ಬೇಡಿಕೆ ಬಂದಿರುವುದು ನಿಜ ಎಂದಿದ್ದಾರೆ.

ಅನೂಪ್ ಭಂಡಾರಿ ನಿರ್ದೇಶನ, ಕಾಜ್ ಮಂಜು ನಿರ್ಮಿಸಿರುವ ಚಿತ್ರ ವಿಕ್ರಾಂತ್ ರೋಣ ಸಿನಿಮಾ ಫೆಬ್ರವರಿ 24ರಂದು ತೆರೆಗೆ ಬರುವ ತಯಾರಿಯಲ್ಲಿತ್ತು. ಆದರೆ ಕೊರೊನಾ ಕಾರಣದಿಂದಗಿ ಎಲ್ಲೂ ಅನಿಶ್ಷಿತವಾಗಿದೆ. ಈ ಸಿನಿಮಾವನ್ನು ಅಭಿಮಾನಿಗಳು ಪರದೆ ಮೇಲೆ ನೋಡಲು ಕಾದುಕುಳಿತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

Comments

Leave a Reply

Your email address will not be published. Required fields are marked *