ಮೋದಿಯ ಎಲ್ಲಾ ರ‍್ಯಾಲಿಗಳನ್ನು ಬಂದ್ ಮಾಡಿ ನಂತರ ನಮ್ಮ ಪಾದಯಾತ್ರೆ ಬಗ್ಗೆ ಯೋಚಿಸುತ್ತೇವೆ: ಡಿ.ಕೆ.ಸುರೇಶ್

ರಾಮನಗರ: ಕೊರೊನಾ ನಿಯಮ ಜಾರಿಗೆ ತಂದಿರುವುದು ರಾಜಕೀಯ ಪ್ರೇರಿತವಾಗಿದೆ. ಸಿಎಂ ಬೊಮ್ಮಾಯಿ ಮೊದಲು ಪ್ರಧಾನಿ ನರೇಂದ್ರ ಮೋದಿಯ ಎಲ್ಲಾ ರ‍್ಯಾಲಿಗಳನ್ನು ಬಂದ್ ಮಾಡಿಸಲಿ. ಕಾಂಗ್ರೆಸ್‌ಗೆ ಒಂದು, ಬಿಜೆಪಿಗೆ ಒಂದು ಕಾನೂನು ಅಲ್ಲ ರಾಷ್ಟಕ್ಕೆ ಒಂದೇ ಕಾನೂನು ಎಂದು ಸಂಸದ ಡಿ.ಕೆ.ಸುರೇಶ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕನಕಪುರದ ಸ್ವಗೃಹದಲ್ಲಿ ಮಾತನಾಡಿದ ಅವರು, ಇದು ರಾಜಕೀಯ ಪ್ರೇರಿತ ಬಿಜೆಪಿಯ ಕೊರೊನಾ ರೂಲ್ಸ್. ನೀರಿಗಾಗಿ ನಡಿಗೆ ಕಾರ್ಯಕ್ರಮ ಮುಂದುವರೆಯಲಿದೆ. ಪಾದಯಾತ್ರೆಗೆ ಎಫೆಕ್ಟ್ ಆಗುವ ಬಗ್ಗೆ ನನಗೆ ಗೊತ್ತಿಲ್ಲ. ನೀರಿಗಾಗಿ ನಡಿಗೆ ಕಾರ್ಯಕ್ರಮ ಮುಂದುವರಿಯಲಿದೆ. ಪೂರ್ವನಿಯೋಜಿತವಾಗಿ ರಾಮನಗರ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು, ಪಾದಯಾತ್ರೆ ಹತ್ತಿಕ್ಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ರಾತ್ರೋರಾತ್ರಿ ಕೊರೊನಾ ಕೇಸ್ ಹೆಚ್ಚಾಗಿದ್ದರೆ ಪ್ರಧಾನಿ ಮೋದಿಯ ಎಲ್ಲಾ ರ‍್ಯಾಲಿಗಳನ್ನು ಬಂದ್ ಮಾಡಲು ಸಿಎಂ ಹೇಳಲಿ. ನಂತರ ಇವರು ಹೇಳಿದ ಹಾಗೇ ಕೇಳುತ್ತೇವೆ. ಕಾಂಗ್ರೆಸ್‍ಗೆ ಒಂದು, ಬಿಜೆಪಿಗೆ ಒಂದು ಕಾನೂನು ಅಲ್ಲ. ರಾಷ್ಟಕ್ಕೆ ಒಂದೇ ಕಾನೂನು, ಅದರ ದುರ್ಬಳಕೆಗೆ ಬಿಜೆಪಿ ಮುಂದಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯದೆಲ್ಲೆಡೆ ವೀಕೆಂಡ್ ಕರ್ಫ್ಯೂ ಈಶ್ವರಪ್ಪ ಅಸಮಾಧಾನ

ರಾಮನಗರದಲ್ಲಿ ಸಿಎಂ ವೇದಿಕೆಯಲ್ಲಿ ನಡೆದ ಗಲಾಟೆ ಪ್ರಕರಣದ ಬಳಿಕ 5 ಜನರ ವಿರುದ್ಧ ರೌಡಿಶೀಟರ್ ತೆರೆಯುವ ಮಾತು ಕೇಳಿ ಬಂದಿದೆ. ಆ ರೀತಿಯಾದ ಕ್ರಮವಹಿಸಿದರೆ ಉಗ್ರ ಹೋರಾಟ ಮಾಡ್ತೇವೆ. ಏಕಾಏಕಿ ರೌಡಿಶೀಟರ್ ತೆರೆಯುವುದು ಅಷ್ಟು ಸುಲಭವಲ್ಲ. ರಾಜಕೀಯ ಕಾರಣಕ್ಕೆ ಹೆದರಿಸೋದು, ಬೆಸರಿಸೋದು ಮಾಡಿದರೆ ಜಿಲ್ಲೆಯ ಜನರೊಂದಿಗೆ ಸೇರಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಕೋವಿಡ್-19 ಮುಂದಿನ ಎರಡು ವಾರ ನಿರ್ಣಾಯಕ – ಭಾರತಕ್ಕೆ WHO ತಜ್ಞರ ಎಚ್ಚರಿಕೆ

ಅಶ್ವಥ್ ನಾರಾಯಣ್ ರಾಮನಗರ ಜಿಲ್ಲೆಯನ್ನು ಅಸ್ತಿತ್ವಕ್ಕೆ ತೆಗೆದುಕೊಳ್ಳುವ ಹೇಳಿಕೆ ವಿಚಾರವಾಗಿ ಮಾತನಾಡಿ, ದೇವರು ಅವರಿಗೆ ಒಳ್ಳೆಯದ್ ಮಾಡಲಿ, ನಾನು ಯಾವತ್ತು ಬೇಡ ಅಂದಿದ್ದೀನಿ. ನಿಂಗೆ ಗಂಡಸ್ತನನ ನಾನು ಹೇಗೆ ತೋರಿಸಬೇಕು ಎಂದು ಕೇಳುತ್ತೇನೆ. ನಾನು ರಾಮನಗರ ಜಿಲ್ಲೆಯ ಜನರ ಪರವಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ಮೇಕೆದಾಟು ಪಾದಯಾತ್ರೆ ತಡೆದರೆ ಜೈಲ್ ಬರೋ ಕಾರ್ಯಕ್ರಮ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Comments

Leave a Reply

Your email address will not be published. Required fields are marked *