ಬೆಳಗಾವಿಗೆ ಆಗಮಿಸಿದ ಸಚಿವ ಅಶ್ವಥ್ ನಾರಾಯಣ್‍ಗೆ ಬಿಗಿ ಭದ್ರತೆ

ಬೆಳಗಾವಿ: ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಆಗಮಿಸಿದ ಸಚಿವ ಸಿ.ಎನ್ ಅಶ್ವಥ್ ನಾರಾಯಣ್ ಅವರಿಗೆ ಬಿಗಿ ಭದ್ರತೆ ಒದಗಿಲಾಗಿದೆ.

ಕಳೆದೆರಡು ದಿನಗಳ ಹಿಂದೆಯಷ್ಟೇ ಸಿಎಂ ಎದುರೇ ಸಂಸದ ಡಿ.ಕೆ.ಸುರೇಶ್ ಸಚಿವ ಅಶ್ವಥ್ ನಾರಾಯಣ ಜಟಾಪಟಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆ ಹಿನ್ನೆಲೆ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.

 

ಇಂದು ಬೆಳಗಾವಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಸಚಿವರು ಭಾಗಿಯಾಗಲಿದ್ದಾರೆ. ಇಂದು ವಿಶ್ವೇಶ್ವರ ತಾಂತ್ರಿಕ ವಿವಿಯಲ್ಲಿ ಟೆಕ್ ಭಾರತ್ 2022 ಕಾರ್ಯಕ್ರಮವಿದ್ದು, ಇದರಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಚಿವರು ಆಗಮಿಸಿದ್ದಾರೆ. ಇದನ್ನೂ ಓದಿ: ಮಣ್ಣಿಗೆ ಬಿದ್ದರೂ ಜೋಡಿಯ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾತ್ರ ಸೂಪರ್!

ಸುಭಾಷ್ ನಗರದಲ್ಲಿ ಸ್ನೇಹಿತ ಸಚಿನ್ ಹಂಜಿ ಮನೆಗೆ ಉಪಹಾರಕ್ಕೆ ತೆರಳಿದ ಸಂದರ್ಭದಲ್ಲಿ ಹಂಜಿ ನಿವಾಸ ಬಳಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಉಪಹಾರ ಬಳಿಕ ವಿಟಿಯುಗೆ ತೆರಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನಂತರ ಮಧ್ಯಾಹ್ನ ಖಾನಾಪುರಕ್ಕೆ ತೆರಳಲಿದ್ದಾರೆ. ಖಾನಾಪುರದಲ್ಲಿ ವಾಯವ್ಯ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಸಂಜೆ ಬೆಳಗಾವಿ ನಗರಕ್ಕೆ ವಾಪಸ್ ಆಗಲಿರುದ್ದಾರೆ. ಸಂಜೆ ಖಾಸಗಿ ಕಂಪನಿಗಳ ಸಿಇಒಗಳ ಜೊತೆ ಸಭೆ ನಡೆಸಿ ಹುಬ್ಬಳ್ಳಿಗೆ ತೆರಳಲಿದ್ದು, ರಾತ್ರಿ ಹುಬ್ಬಳ್ಳಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

Comments

Leave a Reply

Your email address will not be published. Required fields are marked *