ಶ್ರೀ ಕೃಷ್ಣ ನನ್ನ ಕನಸಿನಲ್ಲಿ ಬಂದು ಮುಂದಿನ ಬಾರಿ ನಿಮ್ಮ ಸರ್ಕಾರ ಬರಲಿದೆ ಎಂದಿದ್ದಾನೆ: ಅಖಿಲೇಶ್ ಯಾದವ್

ಲಕ್ನೋ: ಶ್ರೀ ಕೃಷ್ಣ ಪರಮಾತ್ಮ ಪ್ರತಿದಿನ ನನ್ನ ಕನಸಿನಲ್ಲಿ ಬರುತ್ತಿದ್ದಾನೆ. ಮುಂಬರುವ ಚುನಾವಣೆಯ ನಿಮ್ಮ ಸರ್ಕಾರ ಬರುತ್ತದೆ. ನೀವು ರಾಮ ರಾಜ್ಯವನ್ನು ಸ್ಥಾಪಿಸುತ್ತೀರಾ ಎಂದು ಹೇಳುತ್ತಿದ್ದಾನೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದರು.

ಬಿಜೆಪಿಯ ಬಹ್ರೈಚ್ ಶಾಸಕಿ ಮಾಧುರಿ ವರ್ಮಾ ಅವರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದ ಹಿನ್ನೆಲೆ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ರಾಮರಾಜ್ಯವನ್ನು ಸ್ಥಾಪಿಸುವುದೇ ಸಮಾಜವಾದಿ ಪಕ್ಷದ ಗುರಿಯಾಗಿದೆ. ರಾಜ್ಯದಲ್ಲಿ ಸಮಾಜವಾದಿ ಪಕ್ಷ ಸ್ಥಾಪನೆಯಾದ ದಿನದಂದು ರಾಮರಾಜ್ಯ ಸ್ಥಾಪನೆಯಾಗಲಿದೆ ಎಂದರು.

ಮುಂದಿನ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ನಮ್ಮ ಸರ್ಕಾರ ಬರಲಿದೆ ಎಂದು ಹೇಳಲು ಭಗವಂತ ಶ್ರೀ ಕೃಷ್ಣ ಪರಮಾತ್ಮ ಪ್ರತಿದಿನ ನನ್ನ ಕನಸಿನಲ್ಲಿ ಬರುತ್ತಿದ್ದಾನೆ. ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಸೋಲಲಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಾಸಿಟಿವ್ ಕಂಡುಬಂದ 66 ಮಂದಿಯನ್ನು ಪ್ರತ್ಯೇಕವಾಗಿ ಇರಿಸಿಲ್ಲವೆಂದು ಹಡಗಿನಲ್ಲೇ ಪ್ರತಿಭಟನೆ

ಸಮಾಜವಾದಿ ಪಕ್ಷದಲ್ಲಿ ಕ್ರಿಮಿನಲ್‍ಗಳು, ಗ್ಯಾಂಗ್‌ಸ್ಟಾರ್‌ಗಳು ಇದ್ದಾರೆ ಎಂದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಹಲವಾರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಯನ್ನೇ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನಾಗಿ ಬಿಜೆಪಿ ಪಕ್ಷ ಮಾಡಿದೆ ಎಂದು ಕಿಡಿಕಾರಿದರು.

ಬಿಜೆಪಿ ತನ್ನ ಎಲ್ಲಾ ಕ್ರಿಮಿನಲ್ ಮತ್ತು ಮಾಫಿಯಾಗಳನ್ನೆಲ್ಲಾ ಶುದ್ಧಿಕರಿಸಲು ವಾಷಿಂಗ್ ಮಿಷನ್ ಏನಾದರೂ ಖರೀದಿಸಿದೆಯೇ ಎಂದು ಆಶ್ಚರ್ಯವಾಗುತ್ತಿದೆ ಎಂದು ವ್ಯಂಗ್ಯವಾಡಿದರು.ಬಿಜೆಪಿಯ ಹಲವು ಹಿರಿಯ ನಾಯಕರು ತಮ್ಮ ರಕ್ತ ಮತ್ತು ಬೆವರಿರನ್ನು ಸುರಿಸಿ ಪಕ್ಷವನ್ನು ಕಟ್ಟಿದ್ದಾರೆ. ಪಕ್ಷಕ್ಕಾಗಿ ಬೆವರು ಹರಿಸಿದ ಅವರೇ ಕೆಲವೊಮ್ಮೆ ಯೋಗಿ ಆದಿತ್ಯನಾಥ್ ಎಲ್ಲಿಂದ ಬಂದರು ಎಂದು ಹೇಳುತ್ತಾರೆ ಪ್ರಶ್ನಿಸುತ್ತಾರೆ ಎಂದರು. ಇದನ್ನೂ ಓದಿ: ರಾಜ್ಯಕ್ಕೆ ಮೂರನೇ ಅಲೆ ಬಂದಿದೆ: ಡಾ.ಕೆ.ಸುಧಾಕರ್

ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಎಲ್ಲಿ ಬೇಕಾದರೂ ಸ್ಪರ್ಧಿಸುತ್ತೇನೆ ಎಂಬ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಎಲ್ಲಿಂದ ಸ್ಫರ್ಧಿಸಿದರೂ ಸೋಲುವುದು ಖಚಿತ. ಜನರು ಅವರ ಆಡಳಿತದಿಂದ ಬೇಸತ್ತು ಹೋಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ನಾಯಕ ಮನೋಜ್ ತಿವಾರಿಗೆ ಕೊರೊನಾ ಪಾಸಿಟಿವ್

Comments

Leave a Reply

Your email address will not be published. Required fields are marked *