3 ವರ್ಷದಿಂದ ಗೆಳತಿ ನೋಡಲು ಸಾಧ್ಯವಾಗಿಲ್ಲ ಎಂದು ಪ್ರಾಣ ಬಿಟ್ಟ ಪ್ರಿಯಕರ

ಹೈದರಾಬಾದ್: ಕೊರೊನಾ ಕಾರಣದಿಂದ ಗೆಳತಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ನ್ಯೂ ಇಯರ್‌ಗೆ ಗೆಳತಿ ನೋಡಲು ಹೋಗಲು ಸಾಧ್ಯವಾಗದ ಕಾರಣ ಮನನೊಂದ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

ವಿನೀತ್(22) ಮೃತ ಯುವಕ. ಈತ ಉತ್ತರ ಪ್ರದೇಶ ಮೂಲದವನಾಗಿದ್ದಾನೆ. ಸೋಂಕು ಹೆಚ್ಚಾಗಿರುವ ಕಾರಣ ಪ್ರಿಯತಮೆಯನ್ನು ನೋಡಲು ಸಾಧ್ಯವಾಗುತ್ತಿಲ್ಲ ಎನ್ನುವ ವಿಚಾರವಾಗಿ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಪಹದಿ ಶರೀಫ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಸ್ ಅಪಘಾತದಲ್ಲಿ 22 ಮಂದಿ ಸಾವಿಗೆ ಕಾರಣನಾದ ಚಾಲಕನಿಗೆ 190 ವರ್ಷ ಜೈಲು ಶಿಕ್ಷೆ

ಶ್ರೀನಗರ ಕಾಲೋನಿಯ ಹೋಟೆಲ್‍ವೊಂದರಲ್ಲಿ ಕೆಲಸಕ್ಕೆ ಸೇರಿದ್ದ ವಿನೀತ್ ಅದೇ ಪ್ರದೇಶದಲ್ಲೇ ವಾಸವಾಗಿದ್ದ. ಹುಟ್ಟೂರಾದ ಉತ್ತರ ಪ್ರದೇಶದಲ್ಲಿ ವಿನೀತ್ ಯುವತಿಯನ್ನು ಪ್ರೀತಿಸಿ ಮದುವೆ ಆಗುವುದಾಗಿ ಹೇಳಿದ್ದ. ಒಳ್ಳೆ ಜೀವನ ನಡೆಸಲು ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕೆಲಸವನ್ನು ಹುಡುಕಿಕೊಂಡು ಹೈದರಾಬಾದ್‍ಗೆ ಬಂದಿದ್ದ. ಇದನ್ನೂ ಓದಿ: ಪಾಕ್ ಪ್ರಧಾನಿ, ಮಾಜಿ ಪತ್ನಿಯ ಕಾರಿನ ಮೇಲೆ ಗುಂಡಿನ ದಾಳಿ

ವಿನೀತ್ ನಗರಕ್ಕೆ ಬಂದ ಮೊದಲ ವರ್ಷವೇ ಕೋವಿಡ್ ಲಾಕ್‍ಡೌನ್‍ನಿಂದ ಮತ್ತೆ ಯುಪಿಗೆ ಹೋಗಲು ಸಾಧ್ಯವಾಗಲಿಲ್ಲ. ಕೊರೊನಾ ಸಂಕಷ್ಟದಿಂದ ಸಾಕಷ್ಟು ಹಣದ ಸಮಸ್ಯೆಯನ್ನು ಈತ ಎದುರಿಸಿದ್ದಾನೆ. ಇದರಿಂದಾಗಿ ಊರಿಗೆ ಹೋಗಲು ಆಗಲಿಲ್ಲ. ಪ್ರತಿದಿನ ಕೆಲಸದ ನಂತರ ಗಂಟೆಗಟ್ಟಲೇ ತನ್ನ ಪ್ರೇಯಸಿ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದ.

ಒಂದು ದಿನ ಎಂದಿನಂತೆ ಕೆಲಸ ಮುಗಿಸಿ ಪ್ರೇಯಸಿಗೆ ಫೋನ್ ಮಾಡಿದಾಗ ಆಕೆ ಸಿಟ್ಟಾಗಿದ್ದಾಳೆ. ಮೂರು ವರ್ಷದಿಂದ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದ್ದಾಳೆ. ಅಲ್ಲದೆ ನ್ಯೂ ಇಯರ್‌ಗೆ ಬರುವುದಾಗಿ ಹೇಳಿದ್ದ ವಿನೀತ್ಗೆ ಊರಿಗೆ ಊಗಲು ಸಾಧ್ಯವಾಗಿಲ್ಲ. ಈ ವಿಚಾರವಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *