ಯುಪಿಯಲ್ಲಿ ಯೋಗಿ ಸರ್ಕಾರ ಅಪರಾಧಿಗಳೊಂದಿಗೆ ʼಜೈಲು-ಜೈಲುʼ ಆಟವಾಡ್ತಿದೆ: ಮೋದಿ

ಲಕ್ನೋ: ಉತ್ತರ ಪ್ರದೇಶದಲ್ಲಿ ಅಪರಾಧಿಗಳು ಲಂಗು ಲಗಾಮಿಲ್ಲದಂತೆ ವರ್ತಿಸುತ್ತಿದ್ದರು. ಅವರೊಂದಿಗೆ ಯೋಗಿ ಸರ್ಕಾರ ಜೈಲು-ಜೈಲು ಆಟವಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಥುರಾದಲ್ಲಿ ಮೇಜರ್‌ ಧ್ಯಾನ್‌ ಚಂದ್‌ ಕ್ರೀಡಾ ವಿಶ್ವಿವಿದ್ಯಾಲಯ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕ್ರಿಮಿನಲ್‌ಗಳು, ಮಾಫಿಯಾದಲ್ಲಿದ್ದವರು ಯಾವುದೇ ನಿಯಂತ್ರಣವಿಲ್ಲದೇ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದರು. ಅವರನ್ನು ಜೈಲಿಗಟ್ಟುವ ಆಟವನ್ನು ಯೋಗಿ ಆದಿತ್ಯನಾಥ್‌ ಅವರ ಸರ್ಕಾರ ಆಡುತ್ತಿದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಕೊರೊನಾ 3ನೇ ಅಲೆ ಭೀತಿ – ಪಶ್ಚಿಮ ಬಂಗಾಳದಲ್ಲಿ ನಾಳೆಯಿಂದ ಶಾಲಾ, ಕಾಲೇಜ್ ಬಂದ್

ಹಿಂದಿನ ಸರ್ಕಾರ ಅಪರಾಧಿಗಳು ಮತ್ತು ಮಾಫಿಯಾಗಳ ಆಟಗಳಲ್ಲಿ ತೊಡಗಿಸಿಕೊಂಡಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮೀರತ್‌ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಸಿಸುವ ಜನರ ಮನೆಗಳಿಗೆ ಹಿಂದೆ ಬೆಂಕಿ ಹಚ್ಚಲಾಗುತ್ತಿತ್ತು. ಇದರಿಂದ ಬೇಸತ್ತು ಜನ ಬೇರೆಡೆಗೆ ಗುಳೆ ಹೋಗುವಂತಹ ಪರಿಸ್ಥಿತಿ ಎದುರಾಗಿತ್ತು. ಆದರೆ ಯೋಗಿ ಆದಿತ್ಯನಾಥ್‌ ಅವರ ಸರ್ಕಾರ ಈಗ ಅಪರಾಧಿಗಳನ್ನು ಜೈಲಿಗಟ್ಟುತ್ತಿದೆ. ಈಗ ಇಲ್ಲಿನ ಹೆಣ್ಣುಮಕ್ಕಳು ಯಾವುದೇ ಭಯವಿಲ್ಲದೇ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸರ್ಕಾರದ ಪಾತ್ರ ರಕ್ಷಕನದ್ದಾಗಿರಬೇಕು. ಸಾಮರ್ಥ್ಯವನ್ನು ಪ್ರೋತ್ಸಾಹಿಸಬೇಕು. ಯುವಕರು ತಪ್ಪು ಮಾಡಿದರೆ ಅದನ್ನು ನಿರ್ಲಕ್ಷಿಸಬಾರದು ಎಂದಿದ್ದಾರೆ. ಇದೇ ವೇಳೆ ಸಮಾಜವಾದಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ದೇವಸ್ಥಾನದ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡಿ ದೇಶವನ್ನು ಅದಾನಿ, ಅಂಬಾನಿಗೆ ಒತ್ತೆ ಇಡುತ್ತಿದೆ: ಸಿದ್ದರಾಮಯ್ಯ

Comments

Leave a Reply

Your email address will not be published. Required fields are marked *