ಬಿಜೆಪಿ ಅಭ್ಯರ್ಥಿಗಳ ತಂಟೆಗೆ ಬಂದ್ರೆ ಅವರ ಮನೆತನವನ್ನೇ ಒಳಗೆ ಹಾಕಿಸುತ್ತೇನೆ: ಪಿ.ರಾಜೀವ್

MLA Rajeev

ಚಿಕ್ಕೋಡಿ: ಬಿಜೆಪಿ ಅಭ್ಯರ್ಥಿಗಳ ತಂಟೆಗೆ ಬಂದರೇ ಅಂಥವರ ಮನೆತನವನ್ನೇ ಒಳಗೆ ಹಾಕಿಸುತ್ತೇನೆ ಎಂದು ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ್ ಎಚ್ಚರಿಕೆ ನೀಡಿದ್ದಾರೆ.

ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಪುರಸಭೆ ಚುನಾವಣೆಯಲ್ಲಿ 13 ಸೀಟುಗಳನ್ನು ಗೆಲ್ಲುವ ಮೂಲಕ ಬಿಜೆಪಿ ಬಹುಮತ ಸಾಧಿಸಿದ್ದು ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಆದರೆ ಕೇವಲ 4 ಸ್ಥಾನಗಳನ್ನು ಪಡೆದುಕೊಂಡಿರುವ ಕಾಂಗ್ರೆಸ್ ಆರು ಜನ ಪಕ್ಷೇತರರನ್ನು ಸೇರಿಸಿಕೊಂಡು ಬಿಜೆಪಿ ಅಭ್ಯರ್ಥಿಗಳನ್ನು ತನ್ನತ್ತ ಸೆಳೆಯುವ ತಂತ್ರಗಾರಿಕೆ ಶುರುವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿ ಸಭೆ ನಡೆಸಿ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ವಸಿಷ್ಠರೂ ಅಲ್ಲ, ವಿಶ್ವಾಮಿತ್ರನೂ ಅಲ್ಲ: ಸಿ.ಟಿ.ರವಿ

ಭಾರತೀಯ ಜನತಾ ಪಕ್ಷದ ಬಿ ಫಾರ್ಮ್ ಪಡೆದುಕೊಂಡು ಚುನಾಯಿತರಾಗಿರುವ ಅಭ್ಯರ್ಥಿಗಳ ತಂಟೆಗೆ ಯಾರಾದರೂ ಬಂದರೆ ಸುಮ್ಮನೆ ಬಿಡಲ್ಲ. ಕಸ ಹೊರಗೆ ಹಾಕಿದ ಹಾಗೆ ಹೊರಗೆ ಹಾಕುತ್ತೇನೆ. ಬಿಜೆಪಿಯಿಂದ ಬಿ ಫಾರಂ ಪಡೆದುಕೊಂಡು ಗೆಲುವನ್ನು ಸಾಧಿಸಿರುವ ಅಭ್ಯರ್ಥಿಗಳತ್ತ ಕೈ ಹಾಕಿದಾ ಅಂದರೆ ಕೈ ಹಾಕಿದವನ ಮನೆತನವನ್ನು ಒಳಗೆ ಹಾಕಲಿಲ್ಲ ಅಂದರೆ ನಾನು MLAನೇ ಅಲ್ಲ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ. ನನಗೆ ರಾಜಕಾರಣ ಮಾಡಲೇ ಬೇಕೆನ್ನುವ ಆಸೆ ಏನಿಲ್ಲ, ರಾಯಬಾಗ ತಾಲೂಕಿನಲ್ಲಿ ಶೇಖರಣೆಯಾಗಿರುವ ಕಸವನ್ನು ಗುಡಿಸುವ ರೀತಿ ಒದ್ದು ಹೊರಗೆ ಹಾಕ್ತೀನಿ ಎಂದು ಗುಡುಗಿದ್ದಾರೆ. ಇದನ್ನೂ ಓದಿ:  ಬಿಹಾರ್‌ ಸಿಎಂ ಪುತ್ರ ತನ್ನ ತಂದೆಗಿಂತಲೂ 5 ಪಟ್ಟು ಹೆಚ್ಚು ಶ್ರೀಮಂತ

Comments

Leave a Reply

Your email address will not be published. Required fields are marked *