ಅಮೆರಿಕದ ಕೊಲೊರಾಡೋನಲ್ಲಿ ಕಾಳ್ಗಿಚ್ಚು – 500ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿ

ವಾಷಿಂಗ್ಟನ್‌: ಅಮೆರಿಕದ ಕೊಲೊರಾಡೋನಲ್ಲಿ ಕಾಳ್ಗಿಚ್ಚು ಉಂಟಾಗಿದ್ದು, ಸುಮಾರು 500ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.

ಕಾಳ್ಗಿಚ್ಚಿನಿಂದಾಗಿ 580 ಮನೆಗಳು ಸುಟ್ಟು ಬೂದಿಯಾಗಿವೆ. ಸ್ಥಳೀಯ ಸಾವಿರಾರು ನಿವಾಸಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಕೊಲೊರಾಡೋ ಸುತ್ತಮುತ್ತ ಬೆಂಕಿ ಕೆನ್ನಾಲಿಗೆ ಚಾಚಿದೆ. ಘಟನೆಯಿಂದ ಕೆಲವರು ಗಾಯಗೊಂಡಿದ್ದಾರೆ. ಆದರೆ ಈವರೆಗೂ ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ. 2.5 ಚದರ ಮೈಲುಗಷ್ಟು ಕಾಳ್ಗಿಚ್ಚು ಆವರಿಸಿದ್ದು, ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಹೋಗಲು ಪರದಾಡುತ್ತಿದ್ದಾರೆ. ಇದನ್ನೂ ಓದಿ: ಎಕ್ಸಾಂನಲ್ಲಿ ಫೇಲ್ – ಆತ್ಮಹತ್ಯೆಗೆ ಶರಣಾದ ಮೆಡಿಕಲ್ ವಿದ್ಯಾರ್ಥಿನಿ

ಲೂಯಿಸ್‌ವೆಲ್‌ ಪ್ರದೇಶದಲ್ಲಿ ಸುಮಾರು 21,000 ಜನಸಂಖ್ಯೆ ಇದೆ. ಎಲ್ಲರೂ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆಯೂ ನಡೆಯುತ್ತಿದೆ.

ಕಾಳ್ಗಿಚ್ಚಿಗೆ ಸಿಲುಕಿ ಗಾಯಗೊಂಡಿದ್ದ 6 ಮಂದಿಯನ್ನು ಯುಸಿ ಹೆಲ್ತ್‌ ಬ್ರೂಮ್‌ಫೀಲ್ಡ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಲ್ಲದೇ ಯುಎಸ್‌ ಹೆದ್ದಾರಿ-36 ಬಂದ್‌ ಮಾಡಲಾಗಿದೆ. ಈ ರಸ್ತೆ ಮಾರ್ಗವಾಗಿ ಯಾವುದೇ ವಾಹನಗಳು ಸಂಚರಿಸದಂತೆ ಕ್ರಮವಹಿಸಲಾಗಿದೆ. ಇದನ್ನೂ ಓದಿ: ಓಮಿಕ್ರಾನ್ ಸೋಂಕಿತ ಹೃದಯಾಘಾತದಿಂದ ಸಾವು

Comments

Leave a Reply

Your email address will not be published. Required fields are marked *