ಚಿತ್ರರಂಗದಲ್ಲಿ 5 ವರ್ಷ ಪೂರೈಸಿದ ರಶ್ಮಿಕಾ – ಕಲಿತ ಪಾಠಗಳೇನು ಗೊತ್ತಾ?

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಪ್ರವೇಶಿಸಿ ಐದು ವರ್ಷ ಕಳೆದಿದೆ. ಈ ಐದು ವರ್ಷಗಳ ಸಿನಿ ಜರ್ನಿಯಲ್ಲಿ ರಶ್ಮಿಕಾ ಕಲಿತ ಪಾಠಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

2016ರಲ್ಲಿ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ ರಶ್ಮಿಕಾ ನಂತರ ಟಾಲಿವುಡ್‍ನ ಗೀತಾ ಗೋವಿಂದಂ, ಚಾಲೋ, ದೇವದಾಸ್, ಡಿಯರ್ ಕಾಮ್ರೇಡ್ ಸಿನಿಮಾಕ್ಕೆ ಬಣ್ಣ ಹಚ್ಚುವ ಮೂಲಕ ಖ್ಯಾತಿ ಪಡೆದರು. ಅಲ್ಲದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಯಜಮಾನ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆಗೆ ಅಂಜನಿಪುತ್ರ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆಗೆ ಪೊಗರು ಸಿನಿಮಾದಲ್ಲಿ ಕೂಡ ಸ್ಕ್ರೀನ್ ಶೇರ್ ಮಾಡಿದ್ದಾರೆ. ಅಲ್ಲದೆ ಬಾಲಿವುಡ್‍ನಲ್ಲೂ ರಶ್ಮಿಕಾ ಅಭಿನಯಿಸಿರುವ ಚಿತ್ರಗಳು ತೆರೆಮೇಲೆ ಬರಲು ಸಜ್ಜಾಗಿದೆ ದನ್ನೂ ಓದಿ:  2022ಕ್ಕೆ ‘ಮಾಸದ ಮಾತುಗಳು’ ಮೂಲಕ ಸ್ಫೂರ್ತಿ ತುಂಬಲಿದ್ದಾರೆ ರಮೇಶ್ ಅರವಿಂದ್

ಇತ್ತೀಚೆಗಷ್ಟೇ ತೆಲುಗಿನಲ್ಲಿ ಬಿಡುಗಡೆಯಾದ ಪುಷ್ಪ ಸಕ್ಸಸ್ ಖುಷಿಯಲ್ಲಿರುವ ರಶ್ಮಿಕಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ರಶ್ಮಿಕಾ ಚಿತ್ರರಂಗಕ್ಕೆ ಪ್ರವೇಶಿಸಿ ಐದು ವರ್ಷ ಕಳೆದಿದೆ. ಈ ಸಂತಸದ ವಿಚಾರವನ್ನು ರಶ್ಮಿಕಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ತಮಗೆ ಬೆಂಬಲ ಮತ್ತು ಪ್ರೀತಿ ನೀಡಿದ ಅಭಿಮಾನಿಗಳು, ಸ್ನೇಹಿತರು, ಆತ್ಮೀಯರಿಗೆ ಧನ್ಯವಾದ ತಿಳಿಸಿದ್ದಾರೆ.

ಫೋಟೋ ಜೊತೆಗೆ ನಾನು ಚಿತ್ರರಂಗಕ್ಕೆ ಬಂದು 5 ವರ್ಷಗಳಾಗಿದೆ. ಇದು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸುತ್ತಾ, ಈ ಐದು ವರ್ಷಗಳಲ್ಲಿ ಕೆಲವೊಂದು ವಿಚಾರಗಳನ್ನು ಕಲಿತಿದ್ದೇನೆ. ಸಮಯ ತುಂಬಾ ವೇಗವಾಗಿ ಕಳೆದುಹೋಗುತ್ತಿದೆ. ಪ್ರತಿದಿನ ನೆನಪುಗಳನ್ನು ಸೃಷ್ಟಿಸಿಕೊಳ್ಳಿ. ಮನಸ್ಸಿನಿಂದ ಸಂತೋಷವಾಗಿರುವುದು ಹೇಗೆ ಎಂಬುವುದನ್ನು ತಿಳಿದುಕೊಳ್ಳಿ. ಜೀವನದಲ್ಲಿ ಯಾವುದು ಸುಲಭವಾಗಿರುವುದಿಲ್ಲ ಎಂಬುವುದನ್ನು ನಾನು ಕಲಿತುಕೊಂಡೆ. ನಿಮಗೆ ಬೇಕಾಗಿರುವುದಕ್ಕಾಗಿ ಯಾವಾಗಲೂ ಹೋರಾಡಬೇಕಾಗುತ್ತದೆ. ತಾಳ್ಮೆಯಿಂದ ಇರಿ. ಎಲ್ಲ ಆಗಬೇಕಾದ ಆಗುತ್ತದೆ ಎಂದಿದ್ದಾರೆ. ದನ್ನೂ ಓದಿ:  ಪತಿಗೆ ರೊಮ್ಯಾಂಟಿಕ್ ಕಿಸ್ ಕೊಟ್ಟ ಶ್ರಿಯಾ ಶರಣ್ – ಫೋಟೋ ವೈರಲ್

ಜನ ಹಲವಾರು ವಿಚಾರಗಳನ್ನು ನಿಮಗೆ ಕಲಿಸುತ್ತಾರೆ ಮತ್ತು ಕಲಿಯಲು ಯಾವಾಗಲೂ ಮುಕ್ತರಾಗಿರಿ. ಉದ್ರೇಕಕ್ಕೆ ಒಳಗಾಗಬೇಡಿ. ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಬೇಡಿ. ಹೋಗುವುದನ್ನು ಬಿಟ್ಟು ಬದುಕುವುದನ್ನು ಕಲಿಯಿರಿ. ನಿಮಗೆ ಇಷ್ಟವಾದವರಿಗೆ ಸಮಯ ನೀಡಿ. ಚೆನ್ನಾಗಿ ತಿನ್ನಿ, ನಿದ್ರೆ ಮಾಡಿ, ಕೆಲಸ ಮಾಡಿ, ಸಂತೋಷದಿಂದ ಇರಿ ಮತ್ತು ಎಲ್ಲರನ್ನು ಪ್ರೀತಿಸಿ. ಮೊದಲು ನಿಮ್ಮ ಬಗ್ಗೆ ಯೋಚಿಸಿ, ನಿಮಗೆ ಆದ್ಯತೆ ನೀಡಿ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *