ಜನ್‌ಧನ್ ಯೋಜನೆಯ ಹೆಸರಿನಲ್ಲಿ ಅನಕ್ಷರಸ್ಥರಿಗೆ ಮಹಿಳೆ ವಂಚನೆ

ಭೋಪಾಲ್: ಜನ್‌ಧನ್ ಯೋಜನೆಯಡಿ ಬ್ಯಾಂಕ್ ಖಾತೆಗಳನ್ನು ತೆರೆಯುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದ ಆರೋಪದಡಿ ಮಹಿಳೆಯೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಅಂಜಲಿ ಸಿನ್ಹಾ ಆರೋಪ ಹೊತ್ತಿರುವ ಮಹಿಳೆಯಾಗಿದ್ದು, ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಘಟನೆ ನಡೆದಿದೆ.

ಜನ್‌ಧನ್ ಯೋಜನೆಯಡಿ ಬ್ಯಾಂಕ್ ಖಾತೆಗಳನ್ನು ತೆರೆಯುವ ನೆಪದಲ್ಲಿ ಅನಕ್ಷರಸ್ಥರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಮಹಿಳೆ ಎರಡು ವರ್ಷಗಳಿಂದ ಅಧಿಕೃತ ಸಾಮಾನ್ಯ ಸೇವಾ ಕೇಂದ್ರವನ್ನು ನಡೆಸುತ್ತಿದ್ದು, ಜನರಿಗೆ ಆಮಿಷವೊಡ್ಡಿ, ಹಣವನ್ನು ಪಡೆಯುತ್ತಿದ್ದಳು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಕಿರಿಕಿರಿ ಮಾಡಿದ್ದಕ್ಕೆ ಭಾರತೀಯ ವ್ಯಕ್ತಿಗೆ ಜೈಲು

ಆರೋಪಿ ಅಂಜಲಿ ಸಿನ್ಹಾ ಸಂತ್ರಸ್ತರ ಹೆಬ್ಬೆರಳಿನ ಗುರುತನ್ನು ಅಕ್ರಮವಾಗಿ ಬಳಸಿಕೊಂಡು ಹಣವನ್ನು ಜನರ ಖಾತೆಯಿಂದ ತನ್ನ ಹಾಗೂ ಸಂಬಂಧಿಕರ ಖಾತೆಗೆ ಜಮಾ ಮಾಡಿರುವುದಾಗಿ ತಿಳಿದುಬಂದಿದೆ.

ಆಕೆ ಹಲವರಿಗೆ ವಂಚಿಸಿರುವ ಬಗ್ಗೆ ಮಾಹಿತಿ ದೊರಕಿದ್ದು, ಬಾಗ್ಸೆವಾನಿಯಾ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದಾರೆ. ಕಳೆದ ಮೂರು ತಿಂಗಳಿನಲ್ಲಿ ಲಕ್ಷಗಟ್ಟಲೆ ಹಣವನ್ನು ಜನರಿಂದ ವಂಚಿಸಿ ಪರಾರಿಯಾಗಿರುವ ಮಹಿಳೆಯನ್ನು ಬಂಧಿಸಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮತ್ತೆ ಜೈಲು ಸೇರಿದ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಯುವರಾಜ್ ಸ್ವಾಮಿ

Comments

Leave a Reply

Your email address will not be published. Required fields are marked *