ಕತ್ತು ಸೀಳಿ ಸ್ನೇಹಿತನನ್ನೇ ಹತ್ಯೆಗೈದ – ಕೈ, ಕಾಲು ಕತ್ತರಿಸಿ ಕಾಡಿಗೆ ಎಸೆದ

ರಾಂಚಿ: 14 ವರ್ಷದ ಬಾಲಕನ ಕತ್ತು ಸೀಳಿ, ಕೈ, ಕಾಲುಗಳನ್ನು ಕತ್ತರಿಸಿ ಗೋಣಿಚೀಲಕ್ಕೆ ತುಂಬಿ ಆತನ ಸ್ನೇಹಿತರೇ ಅರಣ್ಯವೊಂದಕ್ಕೆ ಎಸೆದಿರುವ ಘಟನೆ ಜಾರ್ಖಂಡ್‍ನ ದಿಯೋಘರ್ ಜಿಲ್ಲೆಯಲ್ಲಿ ನಡೆದಿದೆ.

ಬಾಲಕ ಕಾಣೆಯಾಗಿರುವುದಾಗಿ ಆತನ ಪೋಷಕರು ಬುಧವಾರ ದೂರುದಾಖಲಿಸಿದ್ದರು. ಇದೀಗ ಪೊಲೀಸರು ಬಾಲಕ ಸ್ನೇಹಿತರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಬಾಲಕ ರೋಹಿಣಿ ಗ್ರಾಮದ ತನ್ನ ನಿವಾಸದ ಬಳಿ ಮಂಗಳವಾರ ರಾತ್ರಿ ಆತನ ಸ್ನೇಹಿತನನ್ನು ಭೇಟಿಯಾಗಿದ್ದಾನೆ. ನಂತರ ಇಬ್ಬರು ಕುಮ್ರಾಬಾದ್ ಸ್ಟೇಷನ್ ರಸ್ತೆ ಬಳಿ ಹೋಗುವ ವೇಳೆ ಮತ್ತೋರ್ವ ಸ್ನೇಹಿತ ಅವಿನಾಶ್(19) ಕೂಡ ಇವರೊಂದಿಗೆ ಸೇರಿಕೊಂಡಿದ್ದಾನೆ. ನಂತರ ಮೂವರು ಪಳಂಗ ಪಹಾಡ್ ಕಾಡಿಗೆ ಹೋಗುತ್ತಿದ್ದಾಗ ಅವಿನಾಶ್ ಹಾಗೂ ಬಾಲಕನ ನಡುವೆ ವಾಗ್ವಾದ ನಡೆದಿದ್ದು, ಅವಿನಾಶ್ ಬಾಲಕನ ಕತ್ತು ಸೀಳಿದ್ದಾನೆ. ಬಳಿಕ ಆತನ ಕೈ ಮತ್ತು ಕಾಲುಗಳನ್ನು ಕತ್ತರಿಸಿ ಗೋಣಿಚೀಲಕ್ಕೆ ತುಂಬಿ ಅರಣ್ಯಕ್ಕೆ ಎಸೆದಿದ್ದಾನೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಪವನ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಗೋಣಿಚೀಲದಲ್ಲಿ ನವಜಾತ ಶಿಶುವಿನ ಶವ ಪತ್ತೆ – ತಾಯಿ, ಪ್ರಿಯಕರನ ಬಂಧನ

ಇದೀಗ ಅವಿನಾಶ್‌ನನ್ನು ಬಂಧಿಸಲಾಗಿದ್ದು, ಅವಿನಾಶ್ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿಕೊಂಡಿದ್ದಾನೆ. ಇದೀಗ ಆರೋಪಿ ಬಳಿ ಇದ್ದ ಚಾಕು ಮತ್ತು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದು, ಆರೋಪಿ ವಿರುದ್ಧ ವಿವಿಧ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಬಂದೂಕು ಬಚ್ಚಿಟ್ಟಿದ್ದಕ್ಕೆ ಭಾರತೀಯ ವ್ಯಕ್ತಿಗೆ 6 ವರ್ಷ ಜೈಲು ಶಿಕ್ಷೆ

Comments

Leave a Reply

Your email address will not be published. Required fields are marked *