ಗುಜರಾತ್‍ನ 8 ಪ್ರಮುಖ ನಗರದಲ್ಲಿ ಡಿಸೆಂಬರ್ 31 ರವೆಗೆ ನೈಟ್ ಕರ್ಫ್ಯೂ

ಗಾಂಧಿನಗರ: ಓಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಿಂದಾಗಿ ಗುಜರಾತ್ ಸರ್ಕಾರವು ಅಲ್ಲಿನ ಎಂಟು ಪ್ರಮುಖ ನಗರಗಳಲ್ಲಿ ಡಿಸೆಂಬರ್ 31 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಿದೆ

ಅಹಮದಾಬಾದ್, ಸೂರತ್, ಗಾಂಧಿನಗರ, ರಾಜ್‍ಕೋಟ್, ವಡೋದರಾ, ಭಾವ್‍ನಗರ, ಜಾಮ್‍ನಗರ್ ಮತ್ತು ಜುನಘಡ್‍ನಲ್ಲಿ ಡಿಸೆಂಬರ್ 32 ವರೆಗೆ ಬೆಳಗ್ಗೆ 1 ಗಂಟೆಯಿಂದ 5 ಗಂಟೆಯವರೆಗೆ  ಕರ್ಫ್ಯೂ ವಿಸ್ತರಿಸಲಾಗಿದೆ. ಇದನ್ನೂ ಓದಿ: ಇಂದು 222 ಕೊರೊನಾ – 19ಕ್ಕೆ ಏರಿಕೆ ಕಂಡ ಓಮಿಕ್ರಾನ್

ಸೋಮವಾರ ಗುಜರಾತ್‍ನಲ್ಲಿ 4 ಪ್ರಕರಣಗಳು ಪತ್ತೆಯಾಗಿದೆ. ಇಲ್ಲಿಯವರೆಗೆ ದೇಶದಲ್ಲಿ 161 ಮಂದಿಗೆ ಓಮಿಕ್ರಾನ್ ಬಂದಿದೆ.

ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ನಾವು ಸಮಸ್ಯೆಗಳನ್ನು ಎದುರಿಸಿಲ್ಲ. ನಾವು ಪ್ರಮುಖ ಔಷಧಿಗಳನ್ನು ದಾಸ್ತಾನು ಮಾಡಿ ಇಟ್ಟುಕೊಂಡಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ಗಡಿಯ 40 ಗ್ರಾಮಗಳು ಕರ್ನಾಟಕಕ್ಕೆ ಸೇರಿಸುವಂತೆ ಅರ್ಜಿ ಸಲ್ಲಿಕೆ

 

 

Comments

Leave a Reply

Your email address will not be published. Required fields are marked *