ಬೆಳಗಾವಿ: ಮಂಗಳೂರಿನಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಬಂದರೆ ಪೊಲೀಸರು ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ವಿಧಾನಸಭೆ ಶೂನ್ಯವೇಳೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೈತಿಕ ಗೂಂಡಾಗಿರಿ ನಡೆಯುತ್ತಿದೆ. ಸರ್ಕಾರ ಇದರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಶಾಸಕ ಯು.ಟಿ.ಖಾದರ್ ವಿಷಯ ಪ್ರಸ್ತಾಪಿಸಿದ್ರು. ಸುರತ್ಕಲ್‍ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ ಅರೆಸ್ಟ್ ಮಾಡಿದವರನ್ನು ಮರುದಿನ ರಿಲೀಸ್ ಮಾಡಿದ್ದಾರೆ. ತ್ರಿಶೂಲ ದೀಕ್ಷೆ ಕಾರ್ಯಕ್ರಮವೂ ನಡೆಯಿತು. ಇದರ ಬಗ್ಗೆ ಸರ್ಕಾರ ವರದಿ ತರಿಸಿಕೊಳ್ಳಬೇಕು ಅಂತಾ ಸರ್ಕಾರಕ್ಕೆ ಖಾದರ್ ಒತ್ತಾಯಿಸಿದರು. ಇದನ್ನೂ ಓದಿ: ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿ

ಬೆಳ್ತಂಗಡಿ, ಉಪ್ಪಿನಂಗಡಿಯಲ್ಲೂ ಗಲಾಟೆ ನಡೆದಿವೆ. ಇದನ್ನೆಲ್ಲ ನೋಡಿದಾಗ ಇದು ಗಲಾಟೆ ಮಾಡುವವರಿಗೆ ಕಾಲವಾ, ಉಳಿದವರಿಗೆ ಕಾಲವಿಲ್ಲವಾ ಎಂಬ ಪ್ರಶ್ನೆ ಮೂಡುತ್ತದೆ. ಸರ್ಕಾರ ಈ ಎಲ್ಲ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಪೊಲೀಸರಿಗೆ ಮುಕ್ತ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: 5 ತಿಂಗಳ ಗರ್ಭಿಣಿ ಪತ್ನಿಯನ್ನು ನೀರಿನಲ್ಲಿ ಮುಳುಗಿಸಿ ಕೊಂದ ಪತಿ
ಇದಕ್ಕೆ ಉತ್ತರಿಸಿದ ಗೃಹಸಚಿವ ಆರಗ ಜ್ಞಾನೇಂದ್ರ, ನಾನು ಎಲ್ಲಾ ಪ್ರಕರಣದ ಮಾಹಿತಿ ತೆಗೆದುಕೊಂಡಿದ್ದೇನೆ. ಮಂಗಳೂರಿನಲ್ಲಿ ಬಸ್‍ನಲ್ಲಿ ಹುಡುಗ-ಹುಡುಗಿ ಇದ್ದ ವಿಚಾರದಲ್ಲಿ ಸುಮೋಟೋ ಪ್ರಕರಣ ದಾಖಲಿಸಲಾಗಿದೆ. ಪೊಲೀಸರಿಗೆ ಫ್ರೀ ಬಿಟ್ಟಿದ್ದು, ಯಾವುದೇ ಕ್ರಮ ತೆಗೆದುಕೊಳ್ಳಲು ಅನುಮತಿ ಕೊಟ್ಟಿದ್ದೇವೆ ಎಂದರು.

ಯಾವುದೇ ಜಾತಿ, ಧರ್ಮದವರೆಂದು ನೋಡಲ್ಲ. ಉಪ್ಪಿನಂಗಡಿಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಚೂರಿ ಇರಿತವಾಗಿದೆ. ಇಂತಹ ಸಂದರ್ಭಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲೇಬೇಕಾಗುತ್ತದೆ ಎಂದರು.
ಇದೇ ವೇಳೆ ಇತ್ತೀಚೆಗೆ ಬಿಪಿನ್ ರಾವತ್ ಮೃತಪಟ್ಟಾಗ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮಿಸಿದ್ದಾರೆ. ಈ ರೀತಿಯ ಮಾನಸಿಕತೆಯವರ ಮೇಲೆ ಕ್ರಮ ತೆಗೆದುಕೊಳ್ಳಲು ಹೇಳಿದ್ದೇವೆ ಎಂದರು.

ಆಗ ಗೃಹ ಸಚಿವರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿಪಕ್ಷ ಕಾಂಗ್ರೆಸ್ ಸದಸ್ಯರು ಗದ್ದಲ ಮಾಡಿದರು. ವಿಷಯ ಡೈವರ್ಟ್ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಕೂಗಿದ್ರೆ, ರಾವತ್ ಸಾವು ಸಂಭ್ರಮಿಸಿದವರು ದ್ರೋಹಿಗಳು ಎಂದ ಬಿಜೆಪಿ ಸದಸ್ಯರು ಕೂಗಾಡಿದರು. ಈ ವೇಳೆ ಆಡಳಿತ ಮತ್ತು ವಿಪಕ್ಷದ ನಡುವೆ ತೀವ್ರ ವಾಕ್ಸಮರ ನಡೆಯಿತು. ಇದನ್ನೂ ಓದಿ: ಯುವತಿಯ ಒಂದು ದೂರಿಗೆ 1 ಸಾವಿರ ಪೊಲೀಸರು ತನಿಖೆ ಮಾಡಿದ್ರು!
ಬಳಿಕ ಮಾತು ಮುಂದುವರಿಸಿದ ಆರಗ ಜ್ಞಾನೇಂದ್ರ, ರಾವತ್ ಸಾವಿನ ವಿಚಾರದಲ್ಲಿ 2-3 ಪ್ರಕರಣ ದಾಖಲಾಗಿದೆ. ಬಸ್‍ನಲ್ಲಿ ಹೋಗುವವರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದೇವೆ. ನಮಗೆ ಶಾಂತಿ ಸೌಹಾರ್ದತೆ ಮುಖ್ಯ ಎಂದರು.
ಇದೇ ವೇಳೆ ವಿಪಕ್ಷಗಳ ಸದಸ್ಯರು ಪೊಲೀಸ್ ಸ್ಟೇಷನ್‍ನಲ್ಲಿ ಎಫ್.ಐ.ಆರ್ ಹಾಕ್ತಿಲ್ಲ. ಇದರಿಂದಾಗಿ ಕಡಿಮೆ ಪ್ರಕರಣಗಳು ದಾಖಲಾಗಿವೆ ಎಂದು ಗೃಹಸಚಿವರು ಲೆಕ್ಕ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

Leave a Reply