ಬಿಜೆಪಿ, ಜೆಡಿಎಸ್ ಒಳ ಒಪ್ಪಂದ – ಎಚ್‍ಡಿಕೆ ಸುಳ್ಳೇಶ್ವರ ಎಂದ ಎಂಎಲ್‍ಸಿ ರವಿ

ರಾಮನಗರ: ಈ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿತ್ತು ಎಂದು ಬೆಂಗಳೂರು ಗ್ರಾಮಾಂತರ ನೂತನ ಎಂಎಲ್‍ಸಿ ಎಸ್.ರವಿ ಹೇಳಿದರು.

ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಕುಮಾರಸ್ವಾಮಿಯರ ನಡುವೆ ಬೆಂಗಳೂರು ಗ್ರಾಮಾಂತರದಲ್ಲಿ ಒಳ ಒಪ್ಪಂದವಾಗಿತ್ತು. ಎಂಟಿಬಿ ನಾಗರಾಜ್ ರವರೇ ಈ ಒಳ ಒಪ್ಪಂದವನ್ನು ಅನುಷ್ಠಾನ ಮಾಡಿದ್ದರು ಎಂದು ಕಿಡಿಕಾರಿದರು. ಇದನ್ನೂ ಓದಿ: ಯುವತಿಯ ಒಂದು ದೂರಿಗೆ 1 ಸಾವಿರ ಪೊಲೀಸರು ತನಿಖೆ ಮಾಡಿದ್ರು!

ಈ ಒಪ್ಪಂದ ಚನ್ನಪಟ್ಟಣದಲ್ಲಿ ಅದು ಸಫಲವಾಗಲಿಲ್ಲ. ಚನ್ನಪಟ್ಟಣದ ಬಿಜೆಪಿ ಸದಸ್ಯರು ನಮಗೆ ಮತ ನೀಡಿದ್ದಾರೆ. ಹೆಚ್‍ಡಿಕೆ ವಿರೋಧಕ್ಕೆ ನಮಗೆ ಮತ ನೀಡಿದ್ದಾರೆ. ನಾನು ಕರ್ನಾಟಕ ಪ್ರವಾಸೋದ್ಯಮ ಪರಿಸರ ಮತ್ತು ಪರಿಸರ ಇಲಾಖೆ ಸಚಿವ ಯೋಗೇಶ್ವರ್ ಗೆ ಬೆಂಬಲ ಕೇಳಿರಲಿಲ್ಲ ಎಂದರು.

ಯೋಗೆಶ್ವರ್ ಖಾಸಗಿ ಕಾರ್ಯಕ್ರಮದಲ್ಲಿ ಸಿಕ್ಕಿದ್ದಾಗ ಮಾತನಾಡಿದ್ದೆ ಅಷ್ಟೇ. ಆದರೆ ನಮಗೆ ಚನ್ನಪಟ್ಟಣದಲ್ಲಿ ಬಿಜೆಪಿ ಮತ ಸಿಕ್ಕಿದೆ. ಇನ್ನು ಕಾಂಗ್ರೆಸ್, ಬಿಜೆಪಿ ಒಳ ಒಪ್ಪಂದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಸುಳ್ಳೇಶ್ವರ ಹಾಗಾಗಿ ಹೇಳಿರಬಹುದು ಅಷ್ಟೇ. ಜೆಡಿಎಸ್ ಪಕ್ಷ ಯಾರ ಜೊತೆಗಾದರೂ ಹೋಗಲಿದೆ. ಆದರೆ ಕಾಂಗ್ರೆಸ್ ಬಿಜೆಪಿ ಎಂದಿಗೂ ಒಂದಾಗಲೂ ಸಾಧ್ಯವಿಲ್ಲ ಎಂದು ನುಡಿದರು. ಇದನ್ನೂ ಓದಿ: ಪ.ಬಂಗಾಳದಲ್ಲಿ 7 ವರ್ಷದ ಬಾಲಕನಿಗೆ ಓಮಿಕ್ರಾನ್‌ ಸೋಂಕು- ತೆಲಂಗಾಣದಲ್ಲೂ 2 ಪ್ರಕರಣ ದೃಢ

ಈ ಚುನಾವಣೆಯಲ್ಲಿ ಕುಮಾರಸ್ವಾಮಿ ಹಣದ ಹೊಳೆಯನ್ನೇ ಹರಿಸಿದ್ದಾರೆ. ಆದರೆ ಚುನಾಯಿತ ಪ್ರತಿನಿಧಿಗಳು ನಮ್ಮ ಕೈಹಿಡಿದಿದ್ದಾರೆ. ಮುಂದಿನ ದಿನಗಳಲ್ಲಿ ರಾಮನಗರ ಜಿಲ್ಲೆ ಹಾಗೂ ಅಕ್ಕ ಪಕ್ಕದಲ್ಲಿಯೂ ಕಾಂಗ್ರೆಸ್ ಹವಾ ಇರಲಿದೆ ಎಂದರು.

ಭವಿಷ್ಯದಲ್ಲಿ ಅನೇಕರು ಕಾಂಗ್ರೆಸ್ ಸೇರಲಿದ್ದಾರೆ. ಅದು ಯಾರು, ಯಾವ ಪಕ್ಷ ಎಂದು ಈಗಲೇ ಹೇಳಲಾಗಲ್ಲ. ಡಿಕೆ ಶಿವಕುಮಾರ್ ರವರ ನಾಯಕತ್ವ ನಂಬಿ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

Comments

Leave a Reply

Your email address will not be published. Required fields are marked *