ನೀನು ಎಷ್ಟು ಕೊಡ್ತೀಯಾ, ನಾನು ಎಷ್ಟು ಕೊಡ್ತೀನಿ ಅಂತಾ ಚುನಾವಣೆ ನಡೆದಿದೆ: ಈಶ್ವರಪ್ಪ

ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಕನಿಷ್ಠ 15 ಸೀಟು ಗೆಲ್ಲುತ್ತೇವೆ. ವಿಧಾನ ಪರಿಷತ್‍ನಲ್ಲಿ ಪೂರ್ಣ ಬಹುಮತ ಪಡೆಯುತ್ತೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಬೆಳಗಾವಿ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಯಾವುದೇ ಚುನಾವಣೆಗಳು ಮುಂದಿನ ಚುನಾವಣೆಗಳಿಗೆ ಸಂಬಂಧ ಇರಲ್ಲ. ಆದರೆ ಈಗ 25 ಕ್ಷೇತ್ರಗಳಿಗೆ ನಡೆದ ಚುನಾವಣೆ. ಇಷ್ಟು ಕೆಟ್ಟದಾಗಿ ನಡೆದಿರೋದು ಅಪಮಾನ. ನೀನು ಎಷ್ಟು ಕೊಡ್ತೀಯಾ, ನಾನು ಎಷ್ಟು ಕೊಡ್ತೀನಿ ಅಂತಾ ಚುನಾವಣೆ ನಡೆದಿದೆ ಎಂದರು.

ಪರಿಷತ್ ಬೇಕಾ ಅನ್ನೋದು ಮೇಲ್ಮನೆ ಚಾವಡಿಯಲ್ಲೇ ತೀರ್ಮಾನವಾಗಲಿ. ಪರಿಷತ್ ರದ್ದು ಮಾಡೋದು ಸೂಕ್ತವಲ್ಲ, ಚರ್ಚೆ ಆಗಬೇಕು. ಪರಿಷತ್ ಬೇಕೋ ಬೇಡವಾ ಎಂಬ ರಾಜಕೀಯವಾಗಿ ಚರ್ಚೆ ಆಗಬೇಕು ಎಂದರು. ಇದನ್ನೂ ಓದಿ: ನಾಳೆ ಬೆಳಗಾವಿ ಬಂದ್‍ಗೆ MES ಕರೆ – ಬಂದ್‍ಗೆ ಅವಕಾಶ ಕೊಡಲ್ಲ ಎಂದ ಕರ್ನಾಟಕ ಪೊಲೀಸ್

ನನ್ನ ಜೀವನದಲ್ಲಿ ಇಂಥ ಪರಿಷತ್ ಚುನಾವಣೆ ನೋಡಿಲ್ಲ. ನನ್ನ ಅಭಿಪ್ರಾಯ, ಪಕ್ಷದ ಅಭಿಪ್ರಾಯ ತಿಳಿಸ್ತಿದ್ದೇನೆ. ಚುನಾವಣಾ ಆಯೋಗ ಬದುಕಿದೆಯೋ ಸತ್ತಿದೆಯೋ ಎಂಬ ಚರ್ಚೆ ಆರಂಭವಾಗಿದೆ ಎಂದರು. ಇದನ್ನೂ ಓದಿ: ಕುಂದಾನಗರಿಯ ಸಮ ವಾತಾವರಣದಲ್ಲಿ ಅಧಿವೇಶನಕ್ಕೆ ಶುಭಾರಂಭ – ಮಂಗಳವಾರದಿಂದ ಸಮರಕಲೆಯ ಅಸಲಿ ಆಟ

ಪರಿಷತ್‌ನಲ್ಲಿ ನಮಗೆ ಪೂರ್ಣ ಬಹುಮತ ಬರುತ್ತೆ. ಇದು ಜನತೆಯ ಬಯಕೆಯೂ ಕೂಡ ಹೌದು. ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಸೃಜಾ ಕುಶಾಲಪ್ಪ ಗೆದ್ದಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಪೂರ್ಣ ಬಹುಮತದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಂಇಎಸ್ ಕರೆ ನೀಡಿದ ಬೆಳಗಾವಿ ಬಂದ್ ಜನ ತಿರಸ್ಕರಿಸಿದ್ದಾರೆ. ಎಂಇಎಸ್(MES) ಜೀವಂತವಾಗಿದೆ ಎಂದು ತೋರಿಸಿಕೊಳ್ಳಲು ಹೀಗೆ ಮಾಡ್ತಿದ್ದಾರೆ. ಸರ್ಕಾರ ಇದ್ಯಾವುದಕ್ಕೂ ಬಗ್ಗುವುದಿಲ್ಲ ಎಂದರು.

Comments

Leave a Reply

Your email address will not be published. Required fields are marked *