ಮದರಸಾಗಳಲ್ಲಿನ ಬೋಧನೆಯ ಬಗ್ಗೆ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಕಳವಳ

– ಧರ್ಮದ ಹೆಸರಲ್ಲಿ ಸಮುದಾಯ ಭಯಪಡಿಸುವವರು ಜಿಹಾದಿಗಳಲ್ಲ
– ಮನುಷ್ಯನನ್ನು ಕೊಲ್ಲುವ ಹಕ್ಕಿದೆ ಎಂದು ಮದರಸಾಗಳಲ್ಲಿನ ಪಠ್ಯಕ್ರಮಗಳ ಬೋಧನೆ

ತಿರುವನಂತಪುರಂ: ಧರ್ಮದ ಹೆಸರಲ್ಲಿ ಸಮುದಾಯ ಭಯಪಡಿಸುವವರು ಜಿಹಾದಿಗಳಲ್ಲ, ಫಸಾದಿಗಳು( ಸಮಾಜಕ್ಕೆ ಉಪದ್ರವ ನೀಡುವವರು) ಎಂದು ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

ಜನರು ಪ್ರಜಾಸತ್ತಾತ್ಮಕ ಸ್ವರೂಪದ ಆಡಳಿತವನ್ನು ಒಪ್ಪಿಕೊಂಡಿದ್ದಾರೆ. ಭಯೋತ್ಪಾದನೆ ಒಂದು ಸಮುದಾಯದ ಮೇಲೆ ಅಧಿಪತ್ಯ ಸಾಧಿಸುವವರಿಗೆ ಧರ್ಮದ ಹೆಸರಲ್ಲಿ ಜನರನ್ನು ಭಯಭೀತಗೊಳಿಸುತ್ತಿರುತ್ತಾರೆ. ಅವರು ಜಿಹಾದಿಗಳಲ್ಲ, ಫಸಾದಿಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ:   ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕೇರಳದ ಖ್ಯಾತ ಸಿನಿಮಾ ನಿರ್ದೇಶಕ ಅಲಿ ಅಕ್ಬರ್

PAK

ಮದರಸಾದಲ್ಲಿನ ಬೋಧನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಆರೀಫ್ ಮೊಹಮದ್ ಖಾನ್, ಇಂಥಹ ಪಠ್ಯಕ್ರಮವು ಯುವ ಮನಸ್ಸುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮದರಸಾಗಳಲ್ಲಿನ ಪಠ್ಯಕ್ರಮವು ವಿದ್ಯಾರ್ಥಿಗಳಿಗೆ ದೇವರನ್ನು ನಿರಾಕರಿಸುವಂತಿದ್ದರೆ, ಆತನನ್ನು ಕೊಲ್ಲು ಎಂದು ಕಲಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ – ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌

ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ದೇವರ ಮೇಲೆ ನಂಬಿಕೆ ಇಲ್ಲದ ಮನುಷ್ಯನನ್ನು ಕೊಲ್ಲುವ ಹಕ್ಕಿದೆ ಎಂದು ಮದರಸಾಗಳಲ್ಲಿನ ಪಠ್ಯಕ್ರಮಗಳು ಬೋಧನೆ ಮಾಡುತ್ತವೆ. ನಾನು ಇವುಗಳ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದೇನೆ ಮತ್ತು ಪತ್ರಗಳನ್ನು ಬರೆದಿದ್ದೇನೆ. ಜೊತೆಗೆ ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಆರೀಫ್ ಖಾನ್, ತಾಲಿಬಾನ್ ಅಫ್ಘಾನಿಸ್ತಾನದ ಸ್ವಾತಂತ್ರ್ಯವನ್ನು ಕೊನೆಗೊಳಿಸಿದೆ ಮತ್ತು ಅಲ್ಲಿನ ಜನರಿಗೆ ಇದ್ದ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *