ಕಾಂಗ್ರೆಸ್‌ನ ಸಂಸ್ಕೃತಿ, ವರ್ತನೆ ದೇಶ ಕಂಡಿದೆ: ಭಗವಂತ ಖೂಬಾ

Bhagwanth khuba Bidar MP

ಬೀದರ್: ಜಿಲ್ಲೆಯನ್ನು ಯಾರು ಬಿಹಾರ ಹಾಗೂ ಉತ್ತರಪ್ರದೇಶದಂತೆ ಮಾಡಿದ್ದಾರೆ ಎಂದು ಇತಿಹಾಸ ತೆಗೆದು ನೋಡಿದರೆ ತಿಳಿಯುತ್ತದೆ ಎಂದು ಕೇಂದ್ರ ಸಚಿವ ಭಗವಂತ್ ಖೂಬಾ ಅವರು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬೀದರ್ ನಗರಸಭೆಯಲ್ಲಿರುವ ಮತಗಟ್ಟೆ ಸಂಖ್ಯೆ 1ರಲ್ಲಿ ಮತದಾನ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಶಾಸಕ ರಾಜಶೇಖರ್ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.

bjp - congress

75 ವರ್ಷದಲ್ಲಿ ಕಾಂಗ್ರೆಸ್ ಸಂಸ್ಕೃತಿ ಹಾಗೂ ವರ್ತನೆ ದೇಶ ಕಂಡಿದೆ. ಕಾಂಗ್ರೆಸ್ ನಾಯಕರ ಕ್ಷೇತ್ರದಲ್ಲಿ ಮುಗ್ಧರು, ಬಡವರು ಯಾಕೆ ಹೆದರುತ್ತಾರೆ ಎಂದು ಕಾಂಗ್ರೆಸ್ ನಾಯಕರೇ ಉತ್ತರ ನೀಡಬೇಕು ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ವೀರ ಸೇನಾನಿಗಳಿಗೆ ಗಣ್ಯರ ನಮನ – ಪ್ರಧಾನಿ, ರಕ್ಷಣಾ ಸಚಿವ, ತ್ರಿದಳ ಮುಖ್ಯಸ್ಥರಿಂದ ಗೌರವಾರ್ಪಣೆ

ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನ ಹಕ್ಕನ್ನು ಚಲಾಯಿಸಿದ್ದೇನೆ. ಅಲ್ಲಿ ಮತದಾರರಿಗೆ ಧಮ್ಕಿ ಹಾಕುವುದು ಹಾಗೂ ಪ್ರೀತಿ ಮಾಡೋದು ಸ್ಪಷ್ಟವಾಗಿ ಕಾಣುತ್ತಿತ್ತು. ನಾವು ಪ್ರೀತಿಯಿಂದ ಮತದಾರಿಗೆ ಮತದಾನ ಕೇಳಿದ್ದೇವೆ ಎಂದರು. ಇದನ್ನೂ ಓದಿ: ಜನರಲ್ ರಾವತ್‍ರ ಮರಣವನ್ನು ಸಂಭ್ರಮಿಸಿದ ಕಿಡಿಗೇಡಿ ಅರೆಸ್ಟ್

ಬೀದರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ 500 ಮತಗಳ ಅಂತರದಿಂದ ಪ್ರಚಂಡ ಬಹುಮತದಿಂದ ಗೆಲ್ಲುತ್ತಾರೆ. ಜೊತೆಗೆ ರಾಜ್ಯದಲ್ಲಿ 25ರಲ್ಲಿ 16 ಪರಿಷತ್ ಸ್ಥಾನಗಳನ್ನು ಬಿಜೆಪಿ ಗೆಲುತ್ತದೆ ಎಂದು ಭವಿಷ್ಯ ನುಡಿದರು.

Comments

Leave a Reply

Your email address will not be published. Required fields are marked *