ಮಂಗಳೂರು: ಕರಾವಳಿ ಪ್ರವಾಸದಲ್ಲಿರುವ ನಟ ಕಿಚ್ಚ ಸುದೀಪ್ ಅವರು ಗುರುವಾರ ಸಂಜೆ ಶ್ರೀಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಕರಾವಳಿಯ ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಕುದ್ರೋಳಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಬಳಿಕ ದೇವರ ಪ್ರಸಾದ ಸ್ವೀಕರಿಸಿದರು. ಈ ವೇಳೆ ಸುದೀಪ್ ಗೆ ದೇವಸ್ಥಾನದ ಆಡಳಿತ ಸಮಿತಿ ಶಾಲು ಹೊದಿಸಿ ಗೌರವಿಸಿದೆ. ಇದನ್ನೂ ಓದಿ: ಫೆಬ್ರವರಿ 24ಕ್ಕೆ ತೆರೆ ಮೇಲೆ ವಿಕ್ರಾಂತ್ ರೋಣ

ಕ್ಷೇತ್ರದ ಅಧ್ಯಕ್ಷ ಹೆಚ್.ಎಸ್ ಸಾಯಿರಾಂ, ಟ್ರಸ್ಟಿ ಶೇಖರ್ ಪೂಜಾರಿ, ಮ್ಯಾನೇಜರ್ ವಿನೀತ್ ಅವರು ನಟನನ್ನು ಆದರದಿಂದ ಬರಮಾಡಿಕೊಂಡರು. ಸುದೀಪ್ ಅವರಿಗೆ ನಿರ್ದೇಶಕ ರಾಜೇಶ್ ಭಟ್ ಸಾಥ್ ನೀಡಿದರು. ಕಿಚ್ಚ ನಟನೆಯ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ 2022ರ ಫೆಬ್ರವರಿಯಲ್ಲಿ ಬಿಡುಗಡೆಗೊಳ್ಳಲಿದೆ. ಇದನ್ನೂ ಓದಿ: ಕಿಚ್ಚ ಸುದೀಪ್‍ಗೆ ದೇವಾಲಯ ಕಟ್ಟಿಸುತ್ತಿದ್ದಾರೆ ಅಭಿಮಾನಿಗಳು
https://www.youtube.com/watch?v=V7Y70iCLr98

Leave a Reply