ಗರ್ಭಿಣಿಯ ತಲೆಯನ್ನು ಕತ್ತರಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಪಾಪಿ ಅಮ್ಮ-ಮಗ

ಮುಂಬೈ: ಗರ್ಭಿಣಿ ಮಗಳ ಶಿರಚ್ಛೇದನ ಮಾಡಿ ತಲೆಯ ಜೊತೆಗೆ ಅಮ್ಮ-ಮಗ ಸೆಲ್ಫಿ ಕ್ಲಿಕ್ಕಿಸಿಕೊಂಡ ಅಮಾನವೀಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಭಾನುವಾರ ಮರ್ಯಾದಾ ಹತ್ಯೆ ನಡೆದಿದ್ದು, ತಾಯಿಯ ಸಹಾಯದಿಂದ 19 ವರ್ಷದ ಸಹೋದರಿಯ ಶಿರಚ್ಛೇದನವನ್ನು ಸಹೋದರ ಮಾಡಿದ್ದಾನೆ. ಅದು ಅಲ್ಲದೇ ಅವರ ಕ್ರೂರತೆ ಎಷ್ಟು ಮುಂದೆ ಹೋಗಿದೆ ಎಂದರೆ ಆ ಮೃತ ಮಗಳ ತಲೆಯ ಜೊತೆ ಸೆಲ್ಫಿಯನ್ನು ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪರಿಷತ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬೀದರ್‌ನಲ್ಲಿ ಕುದುರೆ ವ್ಯಾಪಾರ ಜೋರು

ಮನುಷ್ಯನ ಕ್ರೂರತೆ ಎಷ್ಟರ ಮಟ್ಟಿಗೆ ಇರುತ್ತೆ ಎಂಬುದಕ್ಕೆ ಇದೊಂದು ಉತ್ತಮ ಉದಹರಣೆಯಾಗಿದೆ. ಯುವತಿಯೊಬ್ಬಳು ಪ್ರೀತಿಸಿ ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದು, ಇದನ್ನು ಸಹಿಸಲಾಗದೇ ಅವಳ ತಾಯಿ ಮತ್ತು ಅಣ್ಣ ಆಕೆಯನ್ನು ಕೊಲೆ ಮಾಡಿದ್ದಾರೆ. ಅದು ಅಲ್ಲದೇ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದಿದ್ದರೂ ಈ ಕ್ರೂರ ಕೃತ್ಯಕ್ಕೆ ಅವರು ಕೈ ಹಾಕಿದ್ದಾರೆ.

ಏನಿದು ಪ್ರಕರಣ?
ಕೊಲೆಯಾದ ಯುವತಿ ಕೀರ್ತಿ ಥೋರ್ ಜೂನ್‍ನಲ್ಲಿ ಓಡಿ ಹೋಗಿ ಮದುವೆಯಾಗಿದ್ದಳು. ಕೀರ್ತಿ ತಾಯಿ ಕಳೆದ ವಾರ ಫೋನ್ ಮಾಡಿ ನಿನ್ನನ್ನು ಭೇಟಿ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ಅದರಂತೆ ಆಕೆ ಮನೆಯ ವಿಳಾಸ ನೀಡಿದ್ದು, ಭಾನುವಾರ ತಾಯಿ-ಮಗ ಕೀರ್ತಿ ಮನೆಗೆ ಹೋಗಿದ್ದಾರೆ. ಈ ವೇಳೆ ಕೀರ್ತಿಯ ಪತಿ ಬೇರೆ ಕೋಣೆಯಲ್ಲಿದ್ದರು. ತಾಯಿ ಮತ್ತು ಸಹೋದರನಿಗೆ ಕೀರ್ತಿ ಟೀ ಮಾಡುತ್ತಿದ್ದಾಗ ಹಿಂಬದಿಯಿಂದ ಹಲ್ಲೆ ನಡೆಸಿದ್ದಾರೆ. ತಕ್ಷಣ ತಾಯಿ ಆಕೆಯ ಕಾಲನ್ನು ಹಿಡಿದುಕೊಂಡಿದ್ದು, ಕುಡುಗೋಲು ತಂದಿದ್ದ ಸಹೋದರ ಆಕೆಯ ತಲೆಯನ್ನು ಕತ್ತರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದು ಅಲ್ಲದೇ ಈ ವಿಚಾರ ಅಕ್ಕಪಕ್ಕದ ಮನೆಯವರಿಗೂ ತಿಳಿಯಬೇಕೆಂದು ತಲೆಯನ್ನು ಹೊರಕ್ಕೆ ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ಆರೋಪಿಗಳು ವಿರ್ಗೋನ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು, ಅವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಮಕ್ಕಳನ್ನು ಪೋಷಕರು ಈ ರೀತಿ ಕಾಪಾಡಿಕೊಳ್ಳಿ

ಈ ಕುರಿತು ಮತನಾಡಿದ ವೈಜಾಪುರದ ಹಿರಿಯ ಪೊಲೀಸ್ ಕೈಲಾಶ್ ಪ್ರಜಾಪತಿ, ಈ ವಾರದ ಹಿಂದೆ ತಾಯಿ ಮಗಳನ್ನು ಭೇಟಿ ಮಾಡಿದ್ದರು. ಆದರೆ ಮತ್ತೆ ನಿನ್ನೆ ಮತ್ತೆ ಮಗನ ಜೊತೆ ಬಂದಿದ್ದಳು. ಈ ವೇಳೆ ಕೀರ್ತಿ ಹೊಲದಲ್ಲಿ ತನ್ನ ಅತ್ತೆಯೊಂದಿಗೆ ಕೆಲಸ ಮಾಡುತ್ತಿದ್ದಳು. ಆದರೆ ಅಮ್ಮ, ಅಣ್ಣನನ್ನು ಕಂಡೊಡನೆ ಗದ್ದೆಯಲ್ಲಿ ಕೆಲಸ ಬಿಟ್ಟು ಅವರ ಬಳಿ ಧಾವಿಸಿದಳು. ನಂತರ ಇಬ್ಬರಿಗೂ ನೀರು ಕೊಟ್ಟು ಚಹಾ ಮಾಡಲು ಅಡುಗೆ ಮನೆಗೆ ಹೋದಳು. ಆಗ ಆಕೆಯ ಸಹೋದರ ತಾಯಿಯ ಸಹಾಯದಿಂದ ಆಕೆಯ ಶಿರಚ್ಛೇದ ಮಾಡಿದ್ದಾನೆ ಎಂದು ಘಟನೆ ಬಗ್ಗೆ ವಿವರಿಸಿದರು.

ಆಕೆಯ ಪತಿಯ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ ಆತ ಮನೆಯಲ್ಲಿಯೇ ಮಲಗಿದ್ದ. ಪಾತ್ರೆಗಳು ಬೀಳುವ ಸದ್ದು ಕೇಳಿ ಎಚ್ಚರಗೊಂಡು ಆತ ಅಡುಗೆ ಮನೆಗೆ ಧಾವಿಸಿದ್ದು, ಆಕೆಯ ಅಣ್ಣ ಆತನನ್ನೂ ಕೊಲ್ಲಲು ಯತ್ನಿಸಿದನು. ಆದರೆ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಆಕೆಯ ಸಹೋದರ ಮನೆಯಿಂದ ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ಹೊರ ಬಂದಿದ್ದು, ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *