ಯುವತಿ ಸ್ಕೂಟರ್ ನಂಬರ್ ಪ್ಲೇಟ್‍ನಲ್ಲಿ ‘SEX’ ಪದ- ಮಹಿಳಾ ಆಯೋಗದಿಂದ ನೋಟಿಸ್

ನವದೆಹಲಿ: ಅಪ್ಪ ಕೊಡಿಸಿದ ಸ್ಕೂಟಿಯ ನಂಬರ್ ಪ್ಲೇಟ್‍ನಲ್ಲಿ SEX ಎಂದು ಬರೆದಿರುವುದು ಯುವತಿಗೆ ಮುಜುಗರಕ್ಕೀಡು ಮಾಡಿತ್ತು, ಇದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಆದರೆ ಇದೀಗ ಈ ವಿಚಾರವಾಗಿ ದೆಹಲಿ ಮಹಿಳಾ ಆಯೋಗವು ಸಾರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.

ದೆಹಲಿ ಮಹಿಳಾ ಆಯೋಗವು ಸಾರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿದ್ದು, ಸೆಕ್ಸ್(SEX ) ಎಂಬ ಪದವನ್ನು ಹೊಂದಿರುವ ವಾಹನ ನೋಂದಣಿ ಸಂಖ್ಯೆಯನ್ನು ಬದಲಾಯಿಸುವಂತೆ ಕೋರಿದೆ. ಈ ಸರಣಿಯಲ್ಲಿ ನೋಂದಣಿಯಾಗಿರುವ ಒಟ್ಟು ವಾಹನಗಳ ಸಂಖ್ಯೆಯನ್ನು ಸಲ್ಲಿಸುವಂತೆ ಆಯೋಗವು ಸಾರಿಗೆ ಇಲಾಖೆಗೆ ತಿಳಿಸಿದೆ.

ಇಲಾಖೆಗೆ ಬಂದಿರುವ ಎಲ್ಲಾ ದೂರುಗಳ ವಿವರಗಳನ್ನು ಕೇಳಿದೆ. ಈ ಬಗ್ಗೆ 4 ದಿನಗಳೊಳಗೆ ವಿವರವಾದ ಕ್ರಮ ಕೈಗೊಳ್ಳುತ್ತೇವೆ ಎಂದು ಸಾರಿಗೆ ಇಲಾಖೆ ಹೇಳಿದೆ. ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ನೋಟಿಸ್ ಜಾರಿ ಮಾಡುವಾಗ, ಸೆಕ್ಸ್(SEX ) ಎಂಬ ಪದವನ್ನು ಹೊಂದಿರುವ ಈ ಹಂಚಿಕೆ ಸರಣಿಯಲ್ಲಿ ನೋಂದಣಿಯಾಗಿರುವ ಒಟ್ಟು ವಾಹನಗಳ ಸಂಖ್ಯೆಯನ್ನು ಸಲ್ಲಿಸಲು ನಾನು ಸಾರಿಗೆ ಇಲಾಖೆಯನ್ನು ಕೇಳಿದ್ದೇನೆ. ಇನ್ನು ಮುಂದೆ ತೊಂದರೆಯಾಗದಂತೆ ಈ ಸಮಸ್ಯೆಯನ್ನು ಪರಿಹರಿಸಲು ಸಾರಿಗೆ ಇಲಾಖೆಗೆ 4 ದಿನಗಳ ಕಾಲಾವಕಾಶ ನೀಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಅಪ್ಪ ಕೊಡಿಸಿದ ಸ್ಕೂಟಿಯ ನಂಬರ್‌ ಪ್ಲೇಟಲ್ಲಿತ್ತು SEX – ನಂಬರ್ ಪ್ಲೇಟ್‍ನಿಂದ ಮುಜುಗರಕ್ಕೀಡಾದ ಯುವತಿ!

ಹಿನ್ನೆಲೆ: ದೆಹಲಿಯಲ್ಲಿ ದ್ವಿಚಕ್ರ ವಾಹನಗಳಿಗೆ ಎಸ್ ಆಂಗ್ಲ ಅಕ್ಷರವನ್ನು ಸೂಚಕವಾಗಿ ನೀಡಲಾಗುತ್ತದೆ. ರಾಜ್ಯದ ಸೂಚಕವಾಗಿ ಡಿಎಲ್ ಅಕ್ಷರದ ಜೊತೆಗೆ ಜಿಲ್ಲೆಯನ್ನು ಪ್ರತಿನಿಧಿಸುವ ಸಂಖ್ಯೆ ನೀಡಲಾಗುತ್ತದೆ. ನಂತರ ವಾಹನ ಸೂಚಕವಾಗಿ ಕಾರಿಗೆ ಸಿ(C) ಬೈಕಿಗೆ ಎಸ್(S) ಎಂದು ನೀಡಲಾಗುತ್ತದೆ. ದೆಹಲಿಯಲ್ಲಿ ಈಗ ಇಎಕ್ಸ್(EX) ಸೀರಿಸ್ ನಡೆಯುತ್ತಿದೆ. ಹೀಗಾಗಿ ಕೆಲವು ದ್ವಿಚಕ್ರ ವಾಹನಗಳಿಗೆ ಎಸ್‍ಇಎಕ್ಸ್(SEX) ಎಂದು ನಂಬರ್ ನೀಡಲಾಗುತ್ತದೆ. ಇದನ್ನೂ ಓದಿ:   ಚೀನಾ ಮೇಲೆ ಕಣ್ಣಿಡಲು ಬಂತು ಇಸ್ರೇಲ್ ಡ್ರೋನ್

ಹೀಗಾಗಿ ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್‍ಗಳಲ್ಲಿ ಎಸ್ ಅಕ್ಷರದ ನಂತರ ಇಎಕ್ಸ್ ಅಕ್ಷರವಿದೆ. (EX) ಅಂತಹ ಒಂದು ನಂಬರ್ ಪ್ಲೇಟ್ ಪಡೆದಿರುವ ವಾಹಾನ ಸವಾರರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ.  ಇದನ್ನೂ ಓದಿ: ಓಮಿಕ್ರಾನ್ ಹಾಗೂ ಡೆಲ್ಟಾ ವೈರಸ್ ನಡುವಿನ ವ್ಯತ್ಯಾಸವೇನು?

ಸ್ಕೂಟಿ ನಂಬರ್ ಪ್ಲೇಟ್‍ನಿಂದಾಗಿ ಜನರು ಪದೇ ಪದೇ ಗೇಲಿ ಮಾಡಲು ಆರಂಭಿಸಿದ್ದರು. ಇದರಿಂದ ಸ್ಕೂಟಿ ತೆಗೆದುಕೊಂಡು ಮನೆಯಿಂದ ಹೊರಬರುವುದು ಕಷ್ಟವಾಗಿತ್ತು. ನನ್ನ ಪೋಷಕರು ಸ್ಕೂಟಿ ಸಂಖ್ಯೆಯನ್ನು ಬದಲಾಯಿಸಲು ಪ್ರಯತ್ನಿಸಿದರು. ಆದರೆ ವಾಹನಕ್ಕೆ ಒಮ್ಮೆ ನಿಗದಿಪಡಿಸಿದ ಸಂಖ್ಯೆಯಲ್ಲಿ ಬದಲಾವಣೆಯನ್ನು ಮಾಡಲು ಅನುಮತಿ ಇಲ್ಲ ಎಂದು ತಿಳಿಯಿತ್ತು. ಹೀಗಾಗಿ ನಂಬರ್ ಬದಲಾಯಿಸಲು ಸಾಧ್ಯವಾಗಲಿಲ್ಲ ಎಂದು ಯುವತಿಯೊಬ್ಬಳು ಸ್ಕೂಟಿ ನಂಬರ್ ಪ್ಲೇಟ್‍ನಿಂದ ತಾನು ಅನುಭವಿಸಿರುವ ಮುಜುಗರದ ಸಂಗತಿಯನ್ನು ಹೇಳಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *