ಬೆಂಗಳೂರಿನಲ್ಲಿ ಪತ್ರಕರ್ತೆಯ ಮುಂದೆ ಕ್ಯಾಬ್ ಚಾಲಕನಿಂದ ಹಸ್ತಮೈಥುನ!

ಬೆಂಗಳೂರು: ಕ್ಯಾಬ್ ಚಾಲಕನೊಬ್ಬ ಪತ್ರಕರ್ತೆಯ ಮುಂದೆ ಅಸಭ್ಯವಾಗಿ ವರ್ತಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಹೌದು. ಕೆಲಸ ಮುಗಿಸಿ ಮನೆಗೆ ಮರಳಲು ಪತ್ರಕರ್ತೆ ರಾತ್ರಿ ಓಲಾ ಕ್ಯಾಬ್ ಬುಕ್ ಮಾಡಿದ್ದರು. ಈ ವೇಳೆ ನಡೆದ ಘಟನೆಯನ್ನು ಪತ್ರಕರ್ತೆ ವಿವರವಾಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ರಾತ್ರಿ ಹೊತ್ತು ಮನೆಗೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿದ್ದೆ. ಅಂತೆಯೇ ನಾನು ಆತನ ಕ್ಯಾಬ್ ನಲ್ಲಿ ಹೋಗುವಾಗ ಚಾಲಕ ಹಸ್ತಮೈಥುನ ಮಾಡಿಕೊಳ್ಳಲು ಶುರು ಮಾಡಿ. ನಾನು ಗಮನಿಸಿದಾಗ ಮುಚ್ಚಿಕೊಂಡು ಏನೂ ನಡೆದೇ ಇಲ್ಲವೆಂಬಂತೆ ವರ್ತಿಸಿದ. ಬಳಿಕ ಕಿರುಚಾಡಿ ನಾನು ಕ್ಯಾಬ್ ನಿಲ್ಲಿಸಿ ಬೇರೊಂದು ಕ್ಯಾಬ್ ನಲ್ಲಿ ಮನೆಗೆ ಮರಳಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ನಾಳೆ ಬಾಬರಿ ಮಸೀದಿ ಧ್ವಂಸಗೊಂಡ ದಿನ- ಮಥುರಾದಲ್ಲಿ ನಿಷೇಧಾಜ್ಞೆ ಜಾರಿ

ಹೀಗೆ ಟ್ವಿಟ್ಟರ್ ನಲ್ಲಿ ವಿವರವಾಗಿ ಬರೆದುಕೊಂಡು ಪತ್ರಕರ್ತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇತ್ತ ಪ್ರಕರಣ ಸಂಬಂಧ ಆರೋಪಿ ಕ್ಯಾಬ್ ಚಾಲಜನ ಪತ್ತೆಗೆ ಪೋಲಿಸರು ಬೀಸಿದ್ದಾರೆ. ಇತ್ತ ಪತ್ರಕರ್ತೆ ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಂತೆಯೇ ಓಲಾ ಕ್ಯಾಬ್‍ನ ಅಧಿಕಾರಿಗಳು ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಆತನನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಈ ಬಗ್ಗೆ ಪತ್ರರ್ಕೆಗೂ ಕೂಡ ಅಧಿಕಾರಿಗಳು ಇ-ಮೇಲ್ ಮಾಡುವ ಮೂಲಕ ಪ್ರಕರಣ ಸಂಬಂಧ ಆರೋಪಿ ವಿರುದ್ಧ ಕ್ರಮ ಕೈಗೊಂಡಿರುವ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು ನಗರ ಪೊಲೀಸರು ಘಟನೆಯನ್ನು ಗಮನಿಸಿ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದ್ದಾರೆ. ಚಾಲಕನ ವಿರುದ್ಧವೂ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಚಾಲಕನನ್ನು ಹಿಡಿಯುವ ಕಾರ್ಯಕ್ಕೆ ಈಗಾಗಲೇ ತಂಡವನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಒಂದೇ ದಿನ ಕೋಟಿ ಲಸಿಕೆ ನೀಡಿಕೆ-5ನೇ ಸಲ ದಾಖಲೆ

Comments

Leave a Reply

Your email address will not be published. Required fields are marked *