ಒಬ್ಬ ಜನಪ್ರತಿನಿಧಿ ಮೇಲೆ ಈ ರೀತಿ ಕೊಲೆ ಹಂತಕ್ಕೆ ಇಳಿದಿದ್ದು ಭಯ ತರಿಸಿದೆ: ಬಿ.ವೈ ವಿಜಯೇಂದ್ರ

ಮೈಸೂರು: ಓರ್ವ ಜನಪ್ರತಿನಿಧಿ ಮೇಲೆ ಈ ರೀತಿ ಕೊಲೆ ಹಂತಕ್ಕೆ ಇಳಿದಿರುವುದು ಭಯ ತರಿಸಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಯಲಹಂಕ ಶಾಸಕ ಎಸ್. ಆರ್ ವಿಶ್ವನಾಥ್ ಕೊಲೆಗೆ ಸಂಚು ರೂಪಿಸಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು. ಅಕ್ಕಪಕ್ಕದ ರಾಜ್ಯದಲ್ಲಿ ಈ ರೀತಿ ವಾತಾವರಣ ಇತ್ತು. ವಿಶ್ವನಾಥ್ ಒಬ್ಬ ಪ್ರಭಾವಿ ರಾಜಕಾರಣಿ ಸಾಕಷ್ಟು ಬಾರಿ ಗೆಲುವು ಸಾಧಿಸಿದ್ದಾರೆ. ಇದು ಭಯ ಸೃಷ್ಟಿ ಮಾಡುವಂತಹ ಘಟನೆ. ಬಿಜೆಪಿ ಪಕ್ಷ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ದೆಹಲಿ ವರಿಷ್ಠರು ಇದ್ದಾರೆ ಅಂತ ನಾನು ಜೀವಂತ ಇದ್ದೀನಿ: ರಮೇಶ್ ಜಾರಕಿಹೊಳಿ

ಪ್ರಕರಣದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ಕ್ಷೇತ್ರದಲ್ಲಿ ಯಾರ ಜೊತೆ ರೌಡಿಗಳು ಇದ್ದಾರೆ ಅನ್ನೋದು ಅಲ್ಲಿನ ಜನರಿಗೆ ಗೊತ್ತಿದೆ. ಘಟನೆ ಬಗ್ಗೆ ಜನರಿಗೆ ಸಂಪೂರ್ಣ ಮಾಹಿತಿ ಇದೆ. ಡಿ.ಕೆ ಶಿವಕುಮಾರ್ ಅವರದ್ದು ಉಡಾಫೆ ಹೇಳಿಕೆ. ಇಂತಹದನ್ನು ಯಾರೂ ಸಮರ್ಥನೆ ಮಾಡಬಾರದು. ಈ ರೀತಿ ಸಂಸ್ಕೃತಿ ಇದು ಇಲ್ಲಿಗೆ ಕೊನೆಯಾಗಬೇಕು, ಮುಂದುವರಿಯಬಾರದು. ತಪ್ಪಿತಸ್ಥರ ವಿರುದ್ಧ ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕು. ಸಿಎಂ ಸಹ ಕಠಿಣ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಮುಖ್ಯಮಂತ್ರಿ ತೀರ್ಮಾನಕ್ಕೆ ಬದ್ಧ: ಎಸ್.ಆರ್ ವಿಶ್ವನಾಥ್

ಇದೇ ವೇಳೆ ದೆಹಲಿ ವರಿಷ್ಠರು ಇಲ್ಲದಿದ್ದರೆ ನನ್ನನ್ನು ಮುಗಿಸಿ ಬಿಡುತ್ತಿದ್ದರು ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ವಿಜಯೇಂದ್ರ, ರಮೇಶ್ ಯಾವ ಅರ್ಥದಲ್ಲಿ ಈ ಮಾತು ಹೇಳಿದ್ದಾರೆಂಬುದು ಗೊತ್ತಿಲ್ಲ. ಅದರ ಬಗ್ಗೆ ಹೆಚ್ಚು ಮಾತನಾಡಲಾರೆ ಎಂದು ಹೇಳುವ ಮೂಲಕ ಜಾರಿಕೊಂಡರು.

Comments

Leave a Reply

Your email address will not be published. Required fields are marked *