ಮೈಸೂರು: ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪತಿರಾಯನೊಬ್ಬ, ತಡೆಯಲು ಬಂದ ನಾಲ್ಕು ಜನರ ಮೇಲೂ ಲಾಂಗ್ ಬೀಸಿದ ಘಟನೆ ನಂಜನಗೂಡು ತಾಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ.
ಈರಯ್ಯ ಕೊಲೆ ಆರೋಪಿ. ಈತ ತನ್ನ ಎರಡನೇ ಪತ್ನಿ ನಿಂಗಮ್ಮನನ್ನು ಕೊಲೆ ಮಾಡಿದ್ದಾನೆ. ಅಲ್ಲದೆ ನಿಂಗಮ್ಮ ತಂದೆ, ತಾಯಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಘಟನೆಯಿಂದ ವೃದ್ಧ ದಂಪತಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅಲ್ಲದೆ ಈರಯ್ಯನಿಂದ ಹಲ್ಲೆಗೊಳಗಾದ ಮತ್ತಿಬ್ಬರ ಸ್ಥಿತಿಯೂ ಗಂಭೀರವಾಗಿದೆ.

ಪತ್ನಿಯ ಅನೈತಿಕ ಸಂಬಂಧ ಹಲ್ಲೆಗೆ ಕಾರಣ ಎನ್ನಲಾಗಿದೆ. ಮೊದಲ ಪತ್ನಿಯನ್ನು ಕೊಂದು ಜೈಲುವಾಸ ಅನುಭವಿಸಿದ್ದ ಈರಯ್ಯ, ಜೈಲಿನಿಂದ ಹೊರ ಬಂದ ಬಳಿಕ ನಿಂಗಮ್ಮನನ್ನು ಮದುವೆ ಆಗಿದ್ದ. ಈಗ ಎರಡನೇ ಪತ್ನಿಯನ್ನೂ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಎಸ್.ಆರ್. ವಿಶ್ವನಾಥ್ ಕೊಲೆಗೆ ಸಂಚು ಪ್ರಕರಣ- ಗೋಪಾಲಕೃಷ್ಣ ವಿರುದ್ಧ ಎಫ್‍ಐಆರ್
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಈರಯ್ಯನನ್ನು ಬಂಧಿಸಿದ್ದಾರೆ. ಇತ್ತ ಗಾಯಾಳುಗಳಿಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


Leave a Reply