ವಿಧಾನಪರಿಷತ್ ಚುನಾವಣೆ ನಂತರ ಸಿಎಂ ಬದಲಾವಣೆ ಆಗಲಿದ್ದಾರೆ: ಶಿವರಾಜ್ ತಂಗಡಗಿ

ಕೊಪ್ಪಳ: ವಿಧಾನಪರಿಷತ್ ಚುನಾವಣೆ ನಂತರ ಸಿಎಂ ಬೊಮ್ಮಾಯಿ ಬದಲಾವಣೆ ಆಗಲಿದ್ದಾರೆ. ಅದನ್ನು ಮೇಲಿರುವ ಹೈಕಮಾಂಡ್‌ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಮೂಲಕ ಹರಿಬಿಡುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ ಒಮ್ಮೆ ಬೊಮ್ಮಾಯಿ ಅವರನ್ನು ಬದಲಾವಣೆ ಮಾಡುತ್ತಾರೆ ಎಂದು ಹೇಳಿದ್ದೆ. ಬಿಜೆಪಿಗರಲ್ಲಿ ಒಡಕು ಇದ್ದು ಒಗ್ಗಟ್ಟಿಲ್ಲ ಸಿಎಂ ಬದಲಾವಣೆ ನಿಶ್ವಿತ, ಆಶ್ಚರ್ಯ ಪಡಬೇಕಾಗಿಲ್ಲ. ನನಗೆ ಸಿಎಂ ಅವರ ಬಗ್ಗೆ ಅಭಿಮಾನವಿದೆ, ಸಿಎಂ ಬದಲಾವಣೆ ಬಗ್ಗೆ ಬಿಜೆಪಿಗರು ನಿರ್ಧಾರ ಮಾಡಿದ್ದಾರೆ ಎಂದು ಭವಿಷ್ಯ ನುಡಿದರು.

ಸಿದ್ದರಾಮಯ್ಯ ಕುಡುಕ ಅಂತಾ ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಮುಖ ನೋಡಿದರೆ ಕುಡಿದವರಕ್ಕಿಂತ ಬಲ ಕಾಣುತ್ತಾರೆ. ಈಶ್ವರಪ್ಪ ಅವರ ಮುಖ ನೋಡಿದರೆ ದೊಡ್ಡ ಕುಡುಕರು ಕಂಡಂತೆ ಕಾಣುತ್ತಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕುಡುಕ, ರಕ್ತದ ಕಣಕಣದಲ್ಲಿಯೂ ಮೋಸ ಇದೆ: ಈಶ್ವರಪ್ಪ

ಇದೇ ವೇಳೆ ಕಾಂಗ್ರೆಸ್ಸಿಗರು ಭಯೋತ್ಪಾದಕರು ಎನ್ನುವ ಬಿಜೆಪಿ ಕೆಲ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ತಂಗಡಗಿ, ಭಯೋತ್ಪಾದಕರನ್ನು ಹುಟ್ಟುಹಾಕುವ ಪಕ್ಷ ಬಿಜೆಪಿನೋ ಕಾಂಗ್ರೆಸ್‍ನೋ ಗೊತ್ತಾಗಿದೆ. ಕಲಬುರಗಿ ಕೊಲೆ ಮಾಡಿದ್ದು ಯಾರು? ಗೌರಿ ಲಂಕೇಶ್ ಪತ್ರಕರ್ತರನ್ನು ಕೊಲೆ ಮಾಡಿದ್ದು ಯಾರು? ಬಿಜೆಪಿ ಭಯೋತ್ಪಾದಕರಷ್ಟೆ ಅಲ್ಲ ಬಿಜೆಪಿಗರು ಕೊಲೆಗಡುಕರು ಕೂಡ ಹೌದು ಎಂದು ಆರೋಪ ಮಾಡಿದರು. ಇದನ್ನೂ ಓದಿ: ಓಮಿಕ್ರಾನ್ ರೂಪಾಂತರಿ ನಮ್ಮ ದೇಶದಲ್ಲೂ ಇರಬಹುದು: ಡಾ.ಸಿ.ಎಸ್ ಮಂಜುನಾಥ

bjp - congress

ಮಹಾನ್ ವ್ಯಕ್ತಿಗಳನ್ನು, ಚಿಂತಕರನ್ನು, ಪತ್ರಕರ್ತರನ್ನು ಕೊಲೆ ಮಾಡಿದವರು ಬಿಜೆಪಿಗರು. ಭಯೋತ್ಪಾದಕರನ್ನು ಸೃಷ್ಟಿ ಮಾಡಿದವರು ಇವರೆ. ವಿಶೇಷವಾಗಿ ನಳಿನ್ ಕುಮಾರ್ ಕಟೀಲ್. ನಳಿನ್ ಈ ರಾಜ್ಯದ ಒಬ್ಬ ವೇಸ್ಟ್ ಅಧ್ಯಕ್ಷ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ: ಬೆಂಗಳೂರು ಉತ್ತರ ವಿವಿ ನೂತನ ಕುಲಪತಿಯಾಗಿ ಪ್ರೊ.ನಿರಂಜನ ವಾನಳ್ಳಿ ನೇಮಕ

Comments

Leave a Reply

Your email address will not be published. Required fields are marked *