ಯಾರೂ ತಿರುಕನ ಕನಸು ಕಾಣೋದು ಬೇಡ: ಆರ್. ಅಶೋಕ್

ಬೆಂಗಳೂರು: ಮುರುಗೇಶ್ ನಿರಾಣಿ ಸಿಎಂ ಆಗಲಿದ್ದಾರೆ ಅಂತಾ ಈಶ್ವರಪ್ಪ ಹೇಳಿಕೆ ವಿಚಾರವಾಗಿ  ಕಂದಾಯ   ಸಚಿವ ಆರ್. ಅಶೋಕ್ ಯಾರೂ ತಿರುಕನ ಕನಸು ಕಾಣೋದು ಬೇಡ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ಮುರುಗೇಶ್ ನಿರಾಣಿ ಸಿಎಂ ಆಗಲಿದ್ದಾರೆ ಅಂತಾ ಈಶ್ವರಪ್ಪ ಹೇಳಿಕೆ ವಿಚಾರವಾಗಿ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೂ ತಿರುಕನ ಕನಸು ಕಾಣೋದು ಬೇಡ. ನಮ್ಮ ಕೇಂದ್ರದ ನಾಯಕ ಮೋದಿ, ಅಮಿತ್ ಶಾ ಅವರು ತೀರ್ಮಾನದಂತೆ ಸಿಎಂ ಆಗಿ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಇದನ್ನ ನಮ್ಮ ವರಿಷ್ಠರೇ ಸ್ಪಷ್ಟವಾಗಿ ಹೇಳಿದ್ದಾರೆ. ಜನ ಸಂಕಷ್ಟ ಸಂದರ್ಭದಲ್ಲಿ ಜನರ ಧ್ವನಿಯಾಗಿ ಸ್ಪಂದನೆ ಮಾಡಬೇಕು. ಬೊಮ್ಮಾಯಿಗೆ ಕಾಮನ್ ಸಿಎಂ ಅಂತಾ ಹೆಸರಿದೆ. ಈಗ ಬಂದಿರೋ ಎಲ್ಲಾ ಸಂಕಷ್ಟಗಳನ್ನ ಒಳ್ಳೆಯ ರೀತಿ ಕೆಲಸ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುವುದು. ಈಶ್ವರಪ್ಪ ತಮಾಷೆಯಾಗಿ ಹೇಳಿದ್ದಾರೆ ಎಂದಿದ್ದಾರೆ.

ರಾಜ್ಯದ ಚುಕ್ಕಾಣಿ ಯಾರು ಹಿಡಿಬೇಕು ಅಂತ ಜನ ತೀರ್ಮಾನ ಮಾಡುತ್ತಾರೆ. ನಾಯಕರು, ಹಣೆ ಬರಹ ತೀರ್ಮಾನ ಆಗಲಿದೆ. ಈಗ ಬೊಮ್ಮಾಯಿ ಅವರಿಗೆ ಒಲಿದು ಬಂದಿದೆ. ಬಿಸಿಲಿನ ಕುದುರೆ ಮೇಲೆ ಹೋಗಬಾರದು ಎಂದು ಹೇಳಿದ್ದಾರೆ.

ಓಮಿಕ್ರಾನ್ ವಿಚಾರವಾಗಿ ಸಿಎಂ ನೇತೃತ್ವದಲ್ಲಿ ಸಭೆ ನಡೆದಿದೆ. ಮೈಸೂರು, ಚಾಮರಾಜನಗರ, ಗಡಿಗಳಲ್ಲಿ ಸ್ಟ್ರಿಕ್ಟ್ ಮಾಡಲಾಗಿದೆ. ಈಗಾಗಲೇ ವಿದೇಶದಿಂದ ಬರುವವರ ಮೇಲೆ ಕಣ್ಣಿಡಲಾಗಿದೆ. ಸ್ವತಃ ಜಿಲ್ಲಾಧಿಕಾರಿಗಳು ಗಡಿಯಲ್ಲಿ ಕಾಯುವಂತೆ ಸೂಚನೆ ನೀಡಲಾಗಿದ್ದು, ಕೇರಳದಿಂದ ಬರುವ ನರ್ಸ್ ವಿದ್ಯಾರ್ಥಿಗಳ ಮೇಲೆ ನಿಗಾವಹಿಸಲಾಗಿದೆ. ಲಾಕ್‍ಡೌನ್ ಮಾಡುವ ಪ್ರಸಂಗ ಬಂದಿಲ್ಲ, ಕಂದಾಯ ಇಲಾಖೆ ಪ್ರಕೃತಿ ವಿಕೋಪ ನಿಧಿ ಅಡಿ ಹಣ ಬಿಡುಗಡೆ ಮಾಡಲಾಗುವುದು. ಕರೋನಾ ಉಲ್ಬಣಿಸಿದರೆ ಹಿಂದೆ ಆದಂತ ಎಲ್ಲಾ ಕ್ರಮ ಕೈಗೊಳ್ಳಲಿದ್ದೇವೆ. ಮಾಸ್ಕ್ ಬಳಸೋದು ಕಡ್ಡಾಯವಾಗಿ ಮುಂದುವರೆಯಲಿದೆ. ರಾಜಕೀಯ ಸಮಾರಂಭ, ಮದುವೆಗೆ  ಅನ್ವಯ ನಿಯಮ ವಾಗುತ್ತದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಶುಭಾ ಪೂಂಜಾ ನ್ಯೂ ಹೇರ್ ಸ್ಟೈಲ್‍ಗೆ ದಿವ್ಯಾ ಕಾಮೆಂಟ್

ರಾಜ್ಯದಲ್ಲಿ ಬಿದ್ದ ಮಳೆಯಿಂದ ಸಾಕಷ್ಟು ಬೆಳೆ ಹಾನಿಯಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಬೆಳೆ ಪರಿಹಾರ ಕೊಡುವ ಕೆಲಸ ಮಾಡಲಾಗಿದೆ. ಎಲ್ಲಾ ಡಿಸಿಗಳಿಗೆ ಗಡುವು ನೀಡಲಾಗಿದೆ, ರೈತರ ಬೆಳೆ ಹಾನಿ ಗುರುತು ಮಾಡಬೇಕು. ಹಿಂದೆ ನೀಡಿದ ಪರಿಹಾರ ತಿಂಗಳು, ಮೂರು ತಿಂಗಳು ಅಂತಾ ಕೊಡಲಾಗ್ತಿತ್ತು. ಈಗ ಬೆಳೆ ಹಾನಿ ವರದಿ ಬಂದ ಕೂಡಲೇ ಕೊಡಲು ಸೂಚನೆ ನೀಡಿದ್ದೇನೆ. ಈವರೆಗೂ 3ಲಕ್ಷ ರೈತರಿಗೆ 276.57 ಕೋಟಿ ಪರಿಹಾರ ನೇರವಾಗಿ ಪಾವತಿಗೆ ಇವತ್ತು ಅನುಮೋದನೆ ನೀಡಲಾಗುತ್ತಿದೆ. 1.61 ಲಕ್ಷ ರೈತರಿಗೆ ಸಬ್ಸಿಡಿ ಸೇರಿಸಿ ಇಂದು ರೈತರ ಅಕೌಂಟಿಗೆ ಬಿಡುಗಡೆ ಆಗಲಿದೆ. 4.61 ಲಕ್ಷ ರೈತರುಗೆ 318.87 ಕೋಟಿ ಹಣವನ್ನ ರೈತರ ಖಾತೆಗೆ ಬಿಡುಗಡೆ ಮಾಡಿದಂತಾಗಲಿದೆ. ಕೇಂದ್ರಕ್ಕೂ ಕೂಡ ವರದಿ ನೀಡಲಾಗುವುದು ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *