ಹೊಸ ಕೋವಿಡ್ ತಳಿಯಿಂದ ತಲ್ಲಣ – ಸಂಜೆ ಸಿಎಂ ಬೊಮ್ಮಾಯಿ ತುರ್ತು ಸಭೆ

ಬೆಂಗಳೂರು: ಕೋವಿಡ್ ನಿಯಂತ್ರಣ, ಲಸಿಕೆ ವಿಚಾರ ಹಾಗೂ ಹೊಸ ತಳಿಯ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಸಂಜೆ ಸಭೆ ನಡೆಸಲಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್‍ನ ಹೊಸ ರೂಪಾಂತರಿ ತಳಿ ನಿದ್ದೆಗೆಡಿಸಿದೆ. ಹೊಸ ರೂಪಾಂತರ ತಳಿಗೆ ‘ಒಮಿಕ್ರಾನ್ ಅಥವಾ ಬಿ.1.1.529’ ಹೆಸರಿಟ್ಟಿರುವ ವಿಶ್ವ ಆರೋಗ್ಯ ಸಂಸ್ಥೆ, ಈ ರೂಪಾಂತರಿ ತಳಿ ಕಳವಳಕಾರಿ ಎಂದು ಘೋಷಿಸಿದೆ.

ರಾಜ್ಯದಲ್ಲಿ ಮತ್ತೆ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ಸರ್ಕಾರಿ ನಿವಾಸದಲ್ಲಿ ಸಂಜೆ 4 ಗಂಟೆಗೆ ಅಭಿವೃದ್ಧಿ ಆಯುಕ್ತರು, ಬಿಬಿಎಂಪಿ ಮುಖ್ಯ ಆಯುಕ್ತರು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ವಿಪತ್ತು ನಿರ್ವಹಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಲಿದ್ದಾರೆ. ಜೊತೆಗೆ ಧಾರವಾಡ, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು, ಮೈಸೂರು, ಬೆಂಗಳೂರು ನಗರ ಡಿಸಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳಲು ಸೂಚನೆ ನೀಡಿದ್ದಾರೆ ಮತ್ತು ತಾಂತ್ರಿಕ ಸಲಹಾ ಸಮಿತಿ ಸದಸ್ಯರಿಗೂ ಕೂಡಾ ಸಭೆಗೆ ಆಹ್ವಾನಿಸಿದ್ದಾರೆ. ದನ್ನೂ ಓದಿ: ವಿಶ್ವಕ್ಕೆ ಆತಂಕ ತಂದಿಟ್ಟ ರೂಪಾಂತರಿ ತಳಿ – ಹೈ ಅಲರ್ಟ್‌ ಘೋಷಣೆ, 87 ಮಂದಿಗೆ ಸೋಂಕು

ವಿಶ್ವದ ನಾಲ್ಕು ರಾಷ್ಟ್ರಗಳಲ್ಲಿ ಓಮಿಕ್ರೋನ್ ತನ್ನ ಆರ್ಭಟ ಶುರು ಮಾಡಿರುವ ಹಿನ್ನೆಲೆ ರಾಜ್ಯದಲ್ಲಿ ಕಟ್ಟೆಚ್ಚರಿಕೆ ವಹಿಸಲಾಗಿದೆ. ದಕ್ಷಿಣ ಆಫ್ರಿಕಾ, ಬೊಟ್ಸ್ ವಾನಾ, ಸಿಂಗಾಪುರ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರನ್ನು ಏರ್ ಪೋರ್ಟ್‌ನಲ್ಲಿ ಕಠಿಣ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೊರೊನಾ ನೆಗೆಟಿವ್ ಇದ್ದರೂ ಕೂಡ ಒಂದು ವಾರ ಕ್ವಾರಂಟೈನ್ ಗೊಳಿಸಲಾಗುತ್ತಿದೆ ಹಾಗೂ ಪ್ರಯಾಣಿಕರ ಟ್ರಾವೆಲ್ ಹಿಸ್ಟರಿಯ ಮಾಹಿತಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪಡೆಯಲಿದ್ದಾರೆ. ದನ್ನೂ ಓದಿ: ಬೆಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಕೊರೊನಾ ಬ್ಲಾಸ್ಟ್ – 12 ವಿದ್ಯಾರ್ಥಿಗಳಿಗೆ ಪಾಸಿಟಿವ್ 

ಸೋಂಕು ಹಬ್ಬಿದ ರಾಷ್ಟ್ರಗಳಿಂದ ಬಂದ ಪ್ರಯಾಣಿಕರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡರೆ, ಅವರ ಸ್ಯಾಂಪಲ್ಸ್ ಗಳನ್ನು ಜಿನೋಮಿಕ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗುತ್ತದೆ.

Comments

Leave a Reply

Your email address will not be published. Required fields are marked *