ನದಿಯಲ್ಲಿ ನೀರು ಕುಡಿಯುತ್ತಿದ್ದ ರೈತನನ್ನು ಬಲಿ ಪಡೆದ ಮೊಸಳೆ

ಯಾದಗಿರಿ: ಕೃಷ್ಣ ನದಿಯಲ್ಲಿ ನೀರು ಕುಡಿಯುತ್ತಿದ್ದ ರೈತನ ಮೇಲೆ ಆಕ್ರಮಣ ಮಾಡಿದ ಮೊಸಳೆ ಆತನನ್ನು ಬಲಿ ಪಡೆದುಕೊಂಡಿದೆ.

ಜಿಲ್ಲೆಯ ವಡಗೇರ ತಾಲೂಕಿನ ಕೊಂಕಲ್ ಗ್ರಾಮದ ರೈತ ವೆಂಕಟೇಶ್ ಮೊಸಳೆ ದಾಳಿಗೆ ತುತ್ತಾದವರು. ವೆಂಕಟೇಶ ನಿನ್ನೆ ಸಂಜೆ ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು, ನೀರು ಕುಡಿಯಲು ಕೃಷ್ಣ ನದಿ ತೀರಕ್ಕೆ ತೆರಳಿದ್ದರು. ಈ ವೇಳೆ ದಾಳಿ ಮಾಡಿದ್ದ ಮೊಸಳೆ ರೈತನನ್ನು ನದಿಯೊಳಗೆ ಎಳೆದುಕೊಂಡು ಹೋಗಿತ್ತು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಐವರ ಬಂಧನ

ದಡದಲ್ಲಿ ಚಪ್ಪಲಿ ಇದ್ದ ಕಾರಣ ಮೊಸಳೆ ದಾಳಿ ಮಾಡಿರಬಹುದೆಂದು ಶಂಕಿಸಲಾಗಿತ್ತು. ಹೀಗಾಗಿ ಅಗ್ನಿ ಶಾಮಕದಳ ಮತ್ತು ಸ್ಥಳೀಯ ಈಜುಗಾರರು ವೆಂಕಟೇಶ ಶವಕ್ಕಾಗಿ ನದಿಯಲ್ಲಿ ಕಾರ್ಯಾಚರಣೆ ನಡೆಸಿದ್ದರು. ಇಂದು ಬೆಳಗ್ಗೆ ನದಿಯಲ್ಲಿ ವೆಂಕಟೇಶ ದೇಹ ಪತ್ತೆಯಾಗಿದೆ. ವಡಗೇರಾ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಪ್ರಖ್ಯಾತ ಹಿನ್ನೆಲೆ ಗಾಯಕಿ ತಂದೆ ಶವ ರೈಲ್ವೆ ನಿಲ್ದಾಣದಲ್ಲಿ ಪತ್ತೆ!

Comments

Leave a Reply

Your email address will not be published. Required fields are marked *