ಜೆಡಿಎಸ್ ಕಾಣೆಯಾಗಿದೆ ಏನಿದ್ರೂ ಬಿಜೆಪಿ, ಕಾಂಗ್ರೆಸ್ ನಡುವೆ ಫೈಟ್: ಆರ್.ಅಶೋಕ್

ಚಾಮರಾಜನಗರ: ಕಾಂಗ್ರೆಸ್, ಜೆಡಿಎಸ್ ಇನ್ನೂ ವಿಧಾನ ಪರಿಷತ್ ಚುನಾವಣಾ ಪ್ರಚಾರ ಆರಂಭ ಮಾಡಿಲ್ಲ. ಜೆಡಿಎಸ್ ಅಂತೂ ಕಾಣೆಯಾಗಿ ಹೋಗಿದೆ. ಜೆಡಿಎಸ್ ಕುಟುಂಬ ರಾಜಕಾರಣ ಮಾಡಿ ಅಸ್ತಿತ್ವ ಕಳೆದುಕೊಂಡಿದ್ದು ಇನ್ನೇನಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತ್ರ ಫೈಟ್ ಎಂದು ಸಚಿವ ಆರ್.ಅಶೋಕ್ ಕುಟುಕಿದ್ದಾರೆ.

ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೃಷಿ ಕಾಯ್ದೆ ವಾಪಸ್ ತೆಗೆದುಕೊಂಡಾಗ ಕಾಂಗ್ರೆಸ್ ಗೆಜ್ಜೆಕಟ್ಟಿಕೊಂಡು ಸಂಭ್ರಮಾಚರಣೆ ಮಾಡಿದೆ. ಪ್ರತಿಭಟನೆಗೆ ಕಾಂಗ್ರೆಸ್‍ನವರನ್ನು ರೈತರು ಸೇರಿಸಿಕೊಳ್ಳಲಿಲ್ಲ. ಕಾಂಗ್ರೆಸ್ ಸಂಭ್ರಮ ನಡೆಸುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ರಾಜ್ಯದಲ್ಲಿ ಜಾತಿ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯ ಟೋಪಿ ಹಾಕಿಕೊಂಡು ಟಿಪ್ಪು ಜಯಂತಿ ಆಚರಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಎರಡು ಡೋಸ್ ಲಸಿಕೆ ಪಡೆದಿದ್ದರೂ ಕೊರೊನಾಗೆ ಮಹಿಳೆ ಬಲಿ

ಅಲ್ಪಸಂಖ್ಯಾತರನ್ನು ಓಲೈಸಲು ಸಿದ್ದರಾಮಯ್ಯ ಶಾದಿ ಭಾಗ್ಯ ಕೊಟ್ಟರು. ಹಲವು ಭಾಗ್ಯ ಕೊಟ್ಟೆ ಎಂದು ಹೇಳಿದ ಅವರನ್ನು ಜನ 74 ಸೀಟ್‌ಗೆ ಇಳಿಸಿದ್ದಾರೆ. ಇದಕ್ಕೆ ಜಾತಿ ರಾಜಕಾರಣವೇ ಕಾರಣ ಎಂದು ಅಶೋಕ್ ಆರೋಪಿಸಿದರು. ಇದನ್ನೂ ಓದಿ: ಕೊಹ್ಲಿ ಅಲ್ಲ ಗುಪ್ಟಿಲ್ ಈಗ ಟಿ20 ಕ್ರಿಕೆಟ್‍ನ ಕಿಂಗ್

Comments

Leave a Reply

Your email address will not be published. Required fields are marked *