ಬಿಟ್‍ಕಾಯಿನ್ ಹಗರಣ ಮುಚ್ಚಿಹಾಕೋದು ಅದ್ಕಿಂತ ದೊಡ್ಡ ಸ್ಕ್ಯಾಮ್: ರಾಹುಲ್ ಗಾಂಧಿ

RAHUL GANDHI

ನವದೆಹಲಿ: ಬಿಟ್‍ಕಾಯಿನ್ ಹಗರಣ ಮುಚ್ಚಿಹಾಕೋದು ಅದಕ್ಕಿಂತ ದೊಡ್ಡ ಸ್ಕ್ಯಾಮ್ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಬಿಟ್‍ಕಾಯಿನ್ ಬಹು ದೊಡ್ಡ ಹಗರಣವಾಗಿದೆ. ಆದರೆ ಇದನ್ನು ಮುಚ್ಚಿ ಹಾಕುವುದು ಅದಕ್ಕಿಂತ ದೊಡ್ಡ ಸ್ಕ್ಯಾಮ್ ಆಗಿದೆ. ತನಿಖೆಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಈ ಹಗರಣದಲ್ಲಿ ಗಣ್ಯ ವ್ಯಕ್ತಿಗಳ ಹೆಸರು ಕೇಳಿಬಂದಿದೆ. ಇವರ ಹೆಸರುಗಳೆಲ್ಲಾ ಹೊರ ಬಂದರೆ ತಮ್ಮ ಪ್ರತಿಷ್ಠಗೆ ಧಕ್ಕೆಯಾಗುವ ಭಯವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: 6 ದಿನಗಳ ಕಾಲ ನಡೆಯಲಿದೆ ಕತ್ರಿನಾ, ವಿಕ್ಕಿ ಮದುವೆ – ಯಾರಿಗೆಲ್ಲ ಇದೆ ಆಮಂತ್ರಣ?

ಬಿಟ್‍ಕಾಯಿನ್ ಹಗರಣವನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಆಗ್ರಹಿಸಿದ್ದಾರೆ. ನಿನ್ನೆಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾವಿರಾರು ಕೋಟಿ ರೂಪಾಯಿ ಹಗರಣವನ್ನು ತನಿಖೆಗೆ ಆಗ್ರಹಿಸುವ ಬದಲು ಹಗರಣದ ಆರೋಪಗಳನ್ನು ನಿರ್ಲಕ್ಷಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೇಳುವ ಮೂಲಕವಾಗಿ ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ಧಾರೆ ಎಂದು ರಣದೀಪ್ ಸುರ್ಜೇವಾಲ ಆರೋಪಿಸಿದ್ದಾರೆ. ಇದನ್ನೂ ಓದಿ: ಸಣ್ಣ ವಯಸ್ಸಿನ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ: ರಮೇಶ್ ಜಾರಕಿಹೊಳಿ

Comments

Leave a Reply

Your email address will not be published. Required fields are marked *