ಹಣದ ವಿಚಾರಕ್ಕೆ ಜೋಡಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳು ಅರೆಸ್ಟ್‌!

ಆನೇಕಲ್: ಹಣದ ವಿಚಾರಕ್ಕೆ ಜೋಡಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಹೊಸೂರು ಮೂಲದ ಅರುಣ್ ಕುಮಾರ್, ಆನೇಕಲ್ ತಾಲ್ಲೂಕಿನ ಮಾರನಾಯಕನಹಳ್ಳಿಯ ಲಕ್ಷ್ಮೀ ನಾರಾಯಣ್, ಅತ್ತಿಬೆಲೆಯ ರಾಚಮಾನಹಳ್ಳಿಯ ಸುಮನ್ ಬಂಧಿತ ಆರೋಪಿಗಳು.

ಜೂಜಿಗಾಗಿ ಹಣದ ವ್ಯವಹಾರ ಮಾಡಿ ಬಳಿಕ ಹಣ ಕೇಳಿದ್ದಕ್ಕೆ ಜೊತೆಗೆ ವ್ಯವಹಾರ ಮಾಡಿದ್ದ ದೀಪಕ್ ಹಾಗೂ ಭಾಸ್ಕರ್‌ನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಅ.22ರಂದು ಅತ್ತಿಬೆಲೆಯಿಂದ ಟಿವಿಎಸ್ ಕಂಪನಿಗೆ ಹೋಗುವ ಮಾರ್ಗ ಮಧ್ಯೆಯ ನಿರ್ಜನ ಪ್ರದೇಶದಲ್ಲಿ ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಆನೇಕಲ್‌ ಉಪವಿಭಾಗದ ಅತ್ತಿಬೆಲೆ ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಜನಧನ್ ಖಾತೆಗಳಿಂದ 2 ರೂ.ನಂತೆ 6,000 ಕೋಟಿ ರೂ. ಅಕ್ರಮ ವರ್ಗಾವಣೆಯಾಗಿದೆ: ಎಚ್‍ಡಿಕೆ

ಇವರೆಲ್ಲರೂ ಜೂಜಾಟವಾಡುತ್ತ ಪರಸ್ಪರ ಹಣದ ವ್ಯಾವಹಾರವನ್ನು ಮಾಡಿಕೊಂಡಿದ್ದರು. ಹಣದ ವಿಚಾರವಾಗಿ ಕಿರಿಕ್ ಆಗಿ ಮಾತನಾಡಲೆಂದು ಅತ್ತಿಬೆಲೆಯಿಂದ ಟಿವಿಎಸ್ ರಸ್ತೆಯ ಮಾರ್ಗದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಎಲ್ಲರೂ ಗಲಾಟೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬರುವಾಗಲೇ ಚಾಕು ತಂದಿದ್ದ ಆರೋಪಿಗಳು ದೀಪಕ್ ಹಾಗೂ ಭಾಸ್ಕರ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು. ಇದನ್ನೂ ಓದಿ: ಬಿಎಸ್‌ಎಫ್‌ ಅಧಿಕಾರ ವ್ಯಾಪ್ತಿ ವಿಸ್ತರಣೆ- ಕೇಂದ್ರದ ಅಧಿಸೂಚನೆ ವಿರುದ್ಧ ಪಂಜಾಬ್‌ ನಿರ್ಣಯ

POLICE JEEP

ಪ್ರಕರಣ ಸಂಬಂಧ ಅತ್ತಿಬೆಲೆ ಪೋಲಿಸರು ದೂರು ದಾಖಲು ಮಾಡಿಕೊಂಡು ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ಹಾಗೂ ಅತ್ತಿಬೆಲೆ ಠಾಣೆಯ ಇನ್‌ಸ್ಪೆಕ್ಟರ್‌ ವಿಶ್ವನಾಥ್ ನೇತೃತ್ವದ ಪೊಲೀಸರ ತಂಡ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದೆ.

Comments

Leave a Reply

Your email address will not be published. Required fields are marked *