ಮೃಗಾಲಯದ 4 ಸಿಂಹಗಳಿಗೆ ಕೊರೊನಾ ಪಾಸಿಟಿವ್

ಸಿಂಗಾಪುರ: ಇಲ್ಲಿನ ಮೃಗಾಲಯದಲ್ಲಿರುವ ನಾಲ್ಕು ಏಷ್ಯಾಟಿಕ್ ಸಿಂಹಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ.

ಮಂಡೈ ವೈಲ್ಡ್‍ಲೈಫ್ ಗ್ರೂಪ್‍ನ ಮೃಗಾಲಯದ ನಾಲ್ಕು ಏಷ್ಯಾಟಿಕ್ ಸಿಂಹಗಳು ಕೋವಿಡ್ ಸೋಂಕಿತ ಸಿಬ್ಬಂದಿಯೊಂದಿಗೆ ಸಂಪರ್ಕ ಹೊಂದಿದ್ದು, ಪರಿಣಾಮ ಇವುಗಳಿಗೂ ಕೊರೊನಾ ಬಂದಿದೆ ಎಂದು ಸಂಶೋಧನೆ ಮತ್ತು ಪಶುವೈದ್ಯಕೀಯ ಉಪಾಧ್ಯಕ್ಷ ಡಾ.ಸೋಂಜಾ ಲುಜ್ ತಿಳಿಸಿದರು.

ಈ ಕುರಿತು ಮಾತನಾಡಿದ ಅವರು, ಎಲ್ಲ ಸಿಂಹಗಳು ಆರೋಗ್ಯವಾಗಿದ್ದು, ಸುರಕ್ಷಿತವಾಗಿವೆ. ಆದರೆ ಈ ನಾಲ್ಕು ಸಿಂಹಗಳನ್ನು ನೋಡಿಕೊಳ್ಳುತ್ತಿದ್ದ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇದ್ದು, ಈಗ ಸಿಂಹಗಳಿಗೂ ಬಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಚಳ್ಳಕೆರೆಮ್ಮ ದೇಗುಲಕ್ಕೆ ಕನ್ನ- ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ನೈಟ್ ಸಫಾರಿಗೆ ಜನಪ್ರಿಯವಾದ ಸಿಂಗಪುರದ ಮಂಡೈ ವೈಲ್ಡ್‍ಲೈಫ್ ಗ್ರೂಪ್ ಮೃಗಾಲಯದಲ್ಲಿ ನಾಲ್ಕು ಏಷ್ಯಾಟಿಕ್ ಸಿಂಹಗಳು ಶನಿವಾರ ಕೆಮ್ಮು, ಸೀನು ಮತ್ತು ಆಲಸ್ಯ ಸೇರಿದಂತೆ ಕೊರೊನಾದ ಲಕ್ಷಣಗಳನ್ನು ಹೊಂದಿದ್ದವು. ಈ ಹಿನ್ನೆಲೆ ಅವುಗಳನ್ನು ಕೋವಿಡ್ ಪರೀಕ್ಷೆಗೆ ಬಳಪಡಿಸಲಾಗಿತ್ತು. ಈ ವೇಳೆ ಅವುಗಳಿಗೆ ಪಾಸಿಟಿವ್ ಬಂದಿರುವುದು ಗೊತ್ತಾಗಿದೆ ಎಂದು ಪ್ರಾಣಿ ಮತ್ತು ಪಶುವೈದ್ಯಕೀಯ ಸೇವೆ(ಎವಿಎಸ್) ತಿಳಿಸಿದೆ.

ಈ ಹಿನ್ನೆಲೆ ಮೃಗಾಲಯದಲ್ಲಿರುವ 9 ಏಷ್ಯಾಟಿಕ್ ಸಿಂಹಗಳು ಮತ್ತು 5 ಆಫ್ರಿಕನ್ ಸಿಂಹಗಳನ್ನು ಆಯಾ ಗುಹೆಗಳಲ್ಲಿ ಪ್ರತ್ಯೇಕಿಸಲು ಮಂಡೈ ವೈಲ್ಡ್‍ಲೈಫ್ ಗ್ರೂಪ್ ಗೆ ಎವಿಎಸ್ ಹೇಳಿದೆ. ಇದನ್ನೂ ಓದಿ: ಹಿಂದೂ ಪುರಾತನ ದೇವಾಲಯವನ್ನು ಪುನರ್‌ನಿರ್ಮಿಸಲು ಆದೇಶಿದ ಪಾಕ್ ನ್ಯಾಯಮೂರ್ತಿ

ಎವಿಎಸ್ ಈ ನಾಲ್ಕು ಏಷ್ಯಾಟಿಕ್ ಸಿಂಹಗಳಲ್ಲಿ ಕೊರೊನಾ ಇದೆ ಎಂದು ಪತ್ತೆಹಚ್ಚಲು ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ನವೆಂಬರ್ 8 ರಂದು ಇವುಗಳ ರಿಪೋರ್ಟ್ ಬಂದಿದ್ದು, ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಮೃಗಾಲಯದ ಸಿಬ್ಬಂದಿ ವಾರಕ್ಕೊಮ್ಮೆ ಪ್ರತಿಜನಕ ಕ್ಷಿಪ್ರ ಪರೀಕ್ಷೆಗಳಿಗೆ(ಎಆರ್‍ಟಿ) ಒಳಗಾಗಬೇಕು ಎಂದು ಎವಿಎಸ್ ಆದೇಶಿಸಿದೆ.

Comments

Leave a Reply

Your email address will not be published. Required fields are marked *