75 ದಿನದತ್ತ ಲೂಸ್ ಮಾದ ಯೋಗಿ ‘ಲಂಕೆ’ ಸಿನಿಮಾ ಗೆಲುವಿನ ಯಾನ

ಲೂಸ್ ಮಾದ ಯೋಗಿ ಅಭಿನಯದ ಲಂಕೆ ಗೆಲುವಿನ ಯಾನ ಇನ್ನೂ ಮುಗಿದಿಲ್ಲ. ಸಾಕಷ್ಟು ನಿರೀಕ್ಷೆಯೊಂದಿಗೆ ಸೆಪ್ಟೆಂಬರ್ 10ಕ್ಕೆ ತೆರೆಕಂಡ ಚಿತ್ರ ಪ್ರೇಕ್ಷಕರ ನಿರೀಕ್ಷೆ ಹುಸಿ ಮಾಡದೆ ಮನರಂಜಿಸಿತ್ತು. ಬಹು ಕಾಲದ ನಂತರ ಯೋಗಿಗೂ ಒಂದು ಸೂಪರ್ ಹಿಟ್ ನೀಡಿರುವ ಸಿನಿಮಾ ಈಗ ಗೆಲುವಿನ ಸಂಭ್ರಮದಲ್ಲಿದೆ. 75 ದಿನದತ್ತ ಯಶಸ್ವಿಯಾಗಿಯೂ ಮುನ್ನುಗ್ಗುತ್ತಿದೆ.

ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಸಿನಿಮಾವನ್ನು ನೋಡಿ ಮೆಚ್ಚಿ ಅಪ್ಪಿಕೊಂಡ ಪ್ರೇಕ್ಷಕ ಮಹಾ ಪ್ರಭುಗಳು ಚಿತ್ರತಂಡಕ್ಕೆ ಫುಲ್ ಮಾಕ್ರ್ಸ್ ನೀಡಿದ್ದರು. ಚಿತ್ರತಂಡ ಕೂಡ ಪ್ರೇಕ್ಷರಿಂದ ಸಿಕ್ಕ ಪ್ರೀತಿ ಮೆಚ್ಚುಗೆಗೆ ಸಂತಸ ಪಟ್ಟಿತ್ತು. 25 ದಿನಗಳ ಸಂಭ್ರಮವನ್ನು ಖುಷಿಯಿಂದ ಆಚರಿಸಿತ್ತು. ಇದೀಗ ಆ 25 ದಿನದ ಸಂಭ್ರಮ, 50 ದಿನವನ್ನು ಪೂರೈಸಿದ್ದು ಲಂಕೆ ಸಿನಿಮಾ 75ನೇ ದಿನದತ್ತ ಯಶಸ್ವಿ ಪ್ರದರ್ಶನ ಕಾಣುತ್ತ, ಪ್ರೇಕ್ಷಕರನ್ನು ರಂಜಿಸುತ್ತಾ ಮುನ್ನುಗ್ಗುತ್ತಿದೆ.

ಕೊರೊನಾ ಸಂಕಷ್ಟ ಕಾಲದಲ್ಲಿಯೂ ಧೈರ್ಯ ಮಾಡಿ ಸಿನಿಮಾ ಬಿಡುಗಡೆ ಮಾಡಿದ್ದ ಲಂಕೆ ಚಿತ್ರತಂಡ ನಿರೀಕ್ಷೆಗೂ ಮೀರಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಒಂದೊಂದಾಗಿ ಬಿಡುಗಡೆಯಾಗುತ್ತಿದ್ದ ಸಿನಿಮಾಗಳ ನಡುವೆಯೂ ಒಂದೊಳ್ಳೆ ಫುಲ್ ಪ್ಯಾಕೇಜ್ ಮನರಂಜನೆಯೊಂದಿಗೆ ಬಂದ ಸಿನಿಮಾ ಚಿತ್ರಮಂದಿರದಲ್ಲಿ ಗಟ್ಟಿಯಾಗಿ ನಿಂತಿತ್ತು. ಇದೀಗ ಎಲ್ಲಾ ಅಡೆತಡೆಗಳ ನಡುವೆ ಸಿನಿಮಾ ಸೂಪರ್ ಸಕ್ಸಸ್ ಕಂಡಿರೋದು ಚಿತ್ರತಂಡಕ್ಕೂ ಹೇಳಲಾರದ ಸಂಭ್ರಮವನ್ನು ಉಂಟು ಮಾಡಿದ್ದು ಪ್ರೇಕ್ಷಕರಿಗೆ ಚಿತ್ರತಂಡ ಧನ್ಯವಾದ ತಿಳಿಸಿದೆ.

 

ರಾಮ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದ ಲಂಕೆ ಮಾಸ್ ಆಕ್ಷನ್ ಹಾಗೂ ಪಕ್ಕಾ ಕಮರ್ಶಿಯಲ್ ಸಿನಿಮಾ. ಫ್ಯಾಮಿಲಿ ಸೆಂಟಿಮೆಂಟ್ ಕೂಡ ಸಿನಿಮಾದಲ್ಲಿತ್ತು. ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ್ಹಾ ಮುಖ್ಯ ಭೂಮಿಕೆಯನ್ನೊಳಗೊಂಡ ಈ ಚಿತ್ರದಲ್ಲಿ ಸಂಚಾರಿ ವಿಜಯ್, ಗಾಯತ್ರಿ ಜೈರಾಮ್, ಶರತ್ ಲೋಹಿತಾಶ್ವ, ಶೋಬ್ ರಾಜ್, ಸುಚೇಂದ್ರ ಪ್ರಸಾದ್, ವಾಣಿಶ್ರೀ ಒಳಗೊಂಡ ದೊಡ್ಡ ತಾರಾಗಣವಿದೆ. ಕಾರ್ತಿಕ್ ಶರ್ಮಾ ಸಂಗೀತ ನಿರ್ದೇಶನ, ರಮೇಶ್ ಬಾಬು ಛಾಯಾಗ್ರಾಹಣ ಚಿತ್ರಕ್ಕಿದೆ. ದಿ ಗ್ರೇಟ್ ಎಂಟರ್ಟೈನರ್ಸ್ ಬ್ಯಾನರ್ ಅಡಿ ಲಂಕೆ ಚಿತ್ರವನ್ನು ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *