ನಾಳೆ ಪುನೀತ್ 11ನೇ ದಿನದ ಪುಣ್ಯಾರಾಧನೆ – ಅಪ್ಪು ಕುಟುಂಬಸ್ಥರಿಂದ ಸಿದ್ಧತೆ

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 11ನೇ ದಿನದ ಪುಣ್ಯತಿಥಿ ಕಾರ್ಯಕ್ರಮ ಸೋಮವಾರ ನಡೆಯಲಿದ್ದು, ಕುಟುಂಬಸ್ಥರು ತಯಾರಿ ನಡೆಸುತ್ತಿದ್ದಾರೆ.

ಪುನೀತ್ ಅಗಲಿ ಇಂದಿಗೆ ಹತ್ತು ದಿನ ಕಳೆದಿದ್ದು, ನಾಳೆ 11ನೇ ದಿನದ ಪುಣ್ಯತಿಥಿ ಕಾರ್ಯಕ್ರಮವಾಗಿರುವುದರಿಂದ ಪುನೀತ್ ನಿವಾಸದಲ್ಲಿ ಅಪ್ಪುಗೆ ಬಹಳ ಇಷ್ಟವಾದಂತಹ ತಿಂಡಿ, ಅಡುಗೆ ಎಲ್ಲವನ್ನು ಕುಟುಂಬಸ್ಥರು ಬಹಳ ಮಡಿಯಿಂದ ಮಾಡುತ್ತಿದ್ದಾರೆ.  ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು’

ಈಗಾಗಲೇ ಸದಾಶಿವ ನಗರದಲ್ಲಿರುವ ಪುನೀತ್ ನಿವಾಸ ಬಳಿ ಶಾಮಿಯಾನ ಹಾಕಿ ಸಿದ್ಧತೆ ನಡೆಸಲಾಗುತ್ತಿದೆ. ನಾಳೆ ಬೆಳಗ್ಗೆ 9 ಅಥವಾ 10 ಗಂಟೆಯೊಳಗೆ ನಿವಾಸದಲ್ಲಿ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಬಳಿಕ ಬೆಳಗ್ಗೆ 11 ಅಥವಾ 12 ಗಂಟೆಯೊಳಗೆ ಕುಟುಂಬಸ್ಥರು ಕಂಠೀರವ ಸ್ಟುಡಿಯೋಗೆ ತಲುಪಿ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಸಮಾಧಿ ಬಳಿಯ ದೇವಸ್ಥಾನದಲ್ಲಿ ಅಪ್ಪು ಅಭಿಮಾನಿ ಮದುವೆ

ಆಪ್ತ ವಲಯ, ಸಿನಿಮಾ ಮಂದಿಗೆ ಮತ್ತೊಂದು ದಿನ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ ಮತ್ತು ನವೆಂಬರ್ 14ರಂದು ಫಿಲಂ ಚೇಂಬರ್ ಅರಮನೆ ಆವರಣದಲ್ಲಿ ಅಪ್ಪು ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಿದ್ದು, ರಾಜಕೀಯ ನಾಯಕರು, ದಕ್ಷಿಣ ಭಾರತದ ನಟರಿಗೆ ಆಹ್ವಾನ ನೀಡಿದೆ. ಜೊತೆಗೆ ಪುನೀತ್ ಸವಿನೆನಪಿನಲ್ಲಿ ನವೆಂಬರ್ 9 ರಂದು ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

Comments

Leave a Reply

Your email address will not be published. Required fields are marked *