-ಸ್ವಗ್ರಾಮದಲ್ಲಿ ದೀಪಾವಳಿ ಹಬ್ಬ ಆಚರಣೆ
ಶಿವಮೊಗ್ಗ: ನಾಡಿನಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ. ಈ ಸಂಭ್ರಮದಲ್ಲಿ ಭಾಗಿಯಾದ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಗ್ರಾಮದ ಮನೆ ಮನೆಗೆ ತೆರಳಿ ದೀಪಾವಳಿ ಶುಭಾಶಯ ಕೋರಿ, ಸಿಹಿ ಹಂಚಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪದ ನಿವಾಸದಲ್ಲಿ ಹಬ್ಬ ಆಚರಣೆ ಮಾಡಿದ ಅರಗ ಜ್ಞಾನೇಂದ್ರ ಹಲವು ವರ್ಷಗಳಿಂದ ಹಬ್ಬದ ದಿನ ಗ್ರಾಮದ ಪ್ರತಿ ಮನೆ ಮನೆಗು ತೆರಳಿ ಹಬ್ಬದ ಶುಭಾಶಯ ಕೋರಿ, ಸಿಹಿ ವಿತರಣೆ ನಡೆಸುತ್ತಾರೆ. ಗೃಹ ಸಚಿವರೇ ತಿಳಿಸಿರುವ ಹಾಗೆ ಕಳೆದ 30 ವರ್ಷಗಳಿಂದ ಇಂತಹ ಅಭ್ಯಾಸ ರೂಢಿಸಿಕೊಂಡು ಬಂದಿದ್ದಾರೆ. ಈ ರೂಢಿಯನ್ನು ಈ ವರ್ಷವು ಮುಂದುವರಿಸಿದ್ದಾರೆ. ಇದನ್ನೂ ಓದಿ: ಕೋಣಕ್ಕೆ 3 ಕೆಜಿ ಚಿನ್ನ ಗಿಫ್ಟ್
ದೀಪಾವಳಿಯ ದಿನ ನನ್ನ ಹುಟ್ಟೂರು ಹಿಸಣ ಹೊಸ್ಕೇರಿಯ ಪ್ರತಿ ಮನೆಗೂ ಭೇಟಿ ನೀಡಿ, ಸಿಹಿ ಕೊಟ್ಟು ಶುಭಾಶಯ ಹೇಳಿ ಬರುವುದು ಕಳೆದ ಮೂರು ದಶಕಗಳಿಂದ ನಾನು ಮಾಡಿಕೊಂಡು ಬಂದಿರುವ ಪದ್ಧತಿ. ಈ ಬಾರಿಯೂ ಈ ಪರಂಪರೆಯನ್ನು ಮುಂದುವರೆಸಿ ಗ್ರಾಮಸ್ಥರಿಗೆ ಸಿಹಿ ಹಂಚಿ ಶುಭ ಕೋರಲಾಯಿತು.#Deepavali pic.twitter.com/7q92ujyTgV
— Araga Jnanendra (@JnanendraAraga) November 5, 2021
ರಾಜ್ಯದ ಗೃಹ ಸಚಿವ ಆದರೂ, ಒತ್ತಡ ಇದ್ದರೂ ಸಹ ಒತ್ತಡದ ನಡುವೆಯೂ ಆ ಸಂಪ್ರದಾಯ ಬಿಡದೇ ಇಂದು ಸಹ ಗ್ರಾಮದ ಮನೆ ಮನೆಗೆ ತೆರಳಿ ಹಬ್ಬದ ಶುಭಾಶಯ ಕೋರಿ, ಸಿಹಿ ಹಂಚಿ ಮನೆಯಲ್ಲಿ ಗೋಪೂಜೆ ನೆರವೇರಿಸಿ ಹಬ್ಬ ಆಚರಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬೆನ್ನಲ್ಲೇ – ಖಾದ್ಯ ತೈಲದ ಬೆಲೆ ಇಳಿಸಲು ಮುಂದಾದ ಸರ್ಕಾರ

Leave a Reply