ವಿಜಯಪುರದಲ್ಲಿ ಮತ್ತೆ ಸರಣಿ ಭೂಕಂಪದ ಅನುಭವ

ವಿಜಯಪುರ: ಜಿಲ್ಲೆಯ ಜನತೆಯನ್ನು ಬೆನ್ನು ಬಿಡದಂತೆ ಭೂಕಂಪನ ಕಾಡುತ್ತಿದೆ. ಕಳೆದ ಎರಡು ದಿನದಲ್ಲಿ ಜಿಲ್ಲೆಯ ಕೋಲ್ಹಾರ ತಾಲೂಕಿನ ಮಲಘಾಣ ಗ್ರಾಮದ ಸುತ್ತ 7 ಬಾರಿ ಕಂಪನದ ಅನುಭವ ಆಗಿದೆ.

ಶುಕ್ರವಾರ ಬೆಳಗಿನ ಜಾವ 6:45, ತಡರಾತ್ರಿ 1:30 ಗಂಟೆ ಅವಧಿಯಲ್ಲಿ ಒಟ್ಟು 7 ಬಾರಿ ಜನರಿಗೆ ಕಂಪನದ ಅನುಭವ ಆಗಿದೆ. ನಿನ್ನೆ ಬೆಳಗಿನ ಜಾವದಿಂದ ಮಧ್ಯಾಹ್ನದ ವರೆಗೆ 5 ಬಾರಿ ಕಂಪನ ಆಗಿದೆ ಎನ್ನುತ್ತಿದ್ದಾರೆ ಜನ. ಇದನ್ನೂ ಓದಿ: ರೋಡ್, ಪಾರ್ಕ್, ಮೆಟ್ರೋ, ಬಸ್ ನಿಲ್ದಾಣಕ್ಕೆ ಪುನೀತ್ ಹೆಸರು?

ಕೊಲ್ಹಾರ ತಾಲೂಕಿನ ಮಲಘಾಣ, ಮಸೂತಿ ಗ್ರಾಮಗಳಲ್ಲಿ ಸರಣಿ ರೂಪದಲ್ಲಿ ಭೂಮಿ ಕಂಪಿಸುತ್ತಿದೆ. ಮಲಘಾಣ-ಮಸೂತಿ ಗ್ರಾಮಗಳ 10 ಕೀ.ಮೀ ವ್ಯಾಪ್ತಿಯಲ್ಲಿ ಕಂಪನ ಅನುಭವ ಅಗಿದೆ. ಕಳೆದ ಅಕ್ಟೋಬರ್ 20 ರಂದು ಮಸೂತಿ- ಮಲಘಾಣ ಗ್ರಾಮಕ್ಕೆ‌ ಭೂವಿಜ್ಞಾನಿಗಳ ತಂಡ ಭೇಟಿ ನೀಡಿತ್ತು. ಹೈದ್ರಾಬಾದ್‌ನ (NGRI) ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ ಪರಿಣಿತ ಭೂವಿಜ್ಞಾನಿಗಳ ತಂಡ ಭೇಟಿ ನೀಡಿ ಭೂಮಿಯ ಆಳದಲ್ಲಿ ನಡೆಯುವ ಬದಲಾವಣೆ, ಚಲನವಲನಗಳ ಮೇಲೆ ನಿಗಾ ಇಡಲು ತಾತ್ಕಾಲಿಕ ಸಿಸ್ಮೋಮಿ ಟರ್ ಅಳಡಿಸಿದ್ದರು. ಇದನ್ನೂ ಓದಿ: ಪುನೀತ್ ಸಾವಿನ ಬೆನ್ನಲ್ಲೇ ಹೆಚ್ಚಾಯ್ತು ಇಸಿಜಿ, ಹೃದಯಸಂಬಂಧಿ ಟೆಸ್ಟ್‌ಗಳು

ಇದರಿಂದ ಪ್ರತಿ ಕಂಪನಗಳ ಮಾಹಿತಿ ಸಂಗ್ರಹಿಸಿ ಹೈದರಾಬಾದ್ ಕೇಂದ್ರಕ್ಕೆ ಕಳುಹಿಸುವ ವಿಶೇಷ ಯಂತ್ರ ಇದಾಗಿದ್ದು, ಸರಣಿ ಭೂಕಂಪನದ ಮಾಹಿತಿ ಬರಬೇಕಿದೆ.

Comments

Leave a Reply

Your email address will not be published. Required fields are marked *